ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ನಟಸಾರ್ವಭೌಮ ಚಿತ್ರ ಫೆಬ್ರವರಿ 7ಕ್ಕೆ ಬಿಡುಗಡೆಯಾಗಲಿದೆ.
ಈ ಹಿಂದೆ ಜನವರಿ 24ಕ್ಕೆ ಬಿಡುಗಡೆ ಎಂದು ಹೇಳಲಾಗಿತ್ತು. ಆದರೆ, ಈಗ ಅದರ ಬದಲಾಗಿ ಫೆ.೭ಕ್ಕೆ ಬಿಡುಗಡೆ ಎಂದು ಚಿತ್ರತಂಡದಿಂದ ಮಾಹಿತಿ ಬಂದಿದೆ.
ಇನ್ನೂ ಸಿನಿಮಾ ತಂಡ ಜನವರಿ 5 ರಂದು ಹುಬ್ಬಳ್ಳಿಯಲ್ಲಿ ನಟ ಸಾರ್ವಭೌಮ ಮೆಗಾ ಆಡಿಯೋ ರಿಲೀಸ್ ಮಾಡಲು ತಯಾರಿ ನಡೆಸುತ್ತಿದೆ. ರಾಕ್ ಲೈನ್ ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಅನುಪಮ್ ಪರಮೇಶ್ವರನ್ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ರಚಿತಾ ರಾಮ್ ಪುನೀತ್ ಜೊತೆ ನಾಯಕಿಯಾಗಿ ನಟಿಸಿದ್ದಾರೆ.

















