ಕಲ್ಪ ಮೀಡಿಯಾ ಹೌಸ್ | ಪಂಜಾಬ್ |
ಪಂಜಾಬ್’ನ ತರ್ನ್ ತರಣ್ ಜಿಲ್ಲೆಯಲ್ಲಿರುವ ಭಾರತ ಹಾಗೂ ಪಾಕಿಸ್ಥಾನದ ಗಡಿ ಪ್ರದೇಶದಲ್ಲಿ 5 ಕೆಜಿ ಹೆರಾಯಿನ್ ಹೊತ್ತಿದ್ದ ಬೃಹತ್ ಗಾತ್ರದ ಡ್ರೋಣ್’ವೊಂದನ್ನು Drone ಭದ್ರತಾ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ.
ಪಂಜಾಬ್ ಪೊಲೀಸರು ಮತ್ತು ಗಡಿ ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ಆರು ರೋಟರ್’ಗಳನ್ನು ಹೊಂದಿರುವ ಮಾನವರಹಿತ ವೈಮಾನಿಕ ವಾಹನ ಹೆಕ್ಸಾಕಾಪ್ಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಆಧುನಿಕ ತಂತ್ರಜ್ಞಾನ ಹೊಂದಿರುವ ಹೆಕ್ಸಾಕಾಪ್ಟರ್ ಡ್ರೋನ್ ಮತ್ತು ಇಂಡೋ-ಪಾಕ್ ಗಡಿಯ India Pakistan Border ಸಮೀಪವಿರುವ ಹೊಲಗಳಲ್ಲಿ 5 ಕೆಜಿ ತೂಕದ ಹೆರಾಯಿನ್ ಹೊಂದಿರುವ ಪ್ಯಾಕೆಟ್’ಗಳನ್ನು ವಶಪಡಿಸಿಕೊಂಡಿದ್ದಾರೆ.
Also read: ಮುಂದಿನ ಮಾರ್ಚ್ ಒಳಗೆ ಎಲ್ಲ ವಿವಿಗಳು ಕನಿಷ್ಠ ಒಂದು ಆನ್’ಲೈನ್ ಕೋರ್ಸ್ ಆರಂಭಿಸಿ
ನ.28 ರಂದು ಅಮೃತಸರ ಮತ್ತು ತರ್ನ್ ತರಣ್ ಜಿಲ್ಲೆಗಳಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಎರಡು ಪಾಕಿಸ್ತಾನಿ ಡ್ರೋಣ್’ಗಳನ್ನು ಬಿಎಸ್’ಎಫ್ ಯೋಧರು ಹೊಡೆದುರುಳಿಸಿದ್ದಾರೆ.
ಎರಡು ಹೆಕ್ಸಾಕಾಪ್ಟರ್’ಗಳು ಸುಮಾರು 10 ಕೆಜಿ ಹೆರಾಯಿನ್ ಅನ್ನು ಸಾಗಿಸುತ್ತಿದ್ದ ವೇಳೆ ಬಿಎಸ್’ಎಫ್ ಪಡೆಗಳು ವಶಪಡಿಸಿಕೊಂಡಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post