ಕಲ್ಪ ಮೀಡಿಯಾ ಹೌಸ್ | ಪುತ್ತೂರು(ದಕ್ಷಿಣ ಕನ್ನಡ) |
ಜಿಲ್ಲೆಯ ವಿವಿದೆಢೆ ಗಣೇಶೋತ್ಸವದ ಶೋಭಾಯಾತ್ರೆ Ganeshothsava Shobhayathre ಅತ್ಯಂತ ಅದ್ದೂರಿಯಾಗಿ ನಡೆದಿದ್ದು, ಇದಕ್ಕೆ ವಿವಿಧ ಕಲಾಪ್ರಕಾರಗಳ ಮೆರುಗು ಹೆಚ್ಚಿಸಿತ್ತು.
ನೆಲ್ಯಾಡಿಯಲ್ಲಿ ಶೋಭಾಯಾತ್ರೆ ಅದ್ದೂರಿಯಾಗಿ ನಡೆದಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ 4 ಗಂಟೆಗಳ ಕಾಲ ಯುವಕ-ಯುವತಿಯರು ಭಕ್ತಿ ಹೆಜ್ಜೆ ಹಾಕಿ ಭಜನಾ ತಂಡದಿಂದ ಶಾಸ್ತಾರ ಕುಣಿತ ಮೆರುಗು ನೀಡಿತ್ತು.
ಮರ್ದಾಳ 24ನೆಯ ವರ್ಷದ ಗಣೇಶೋತ್ಸವದ ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದು, ಕಲಾಪ್ರಕಾರಗಳು ಸಂಭ್ರಮವನ್ನು ಹೆಚ್ಚಿಸಿತ್ತು.
Also read: ಪ್ರಧಾನಿ ಮೋದಿಯವರ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಯನ್ನು ಶ್ಲಾಘಿಸಿದ ಅಮಿತ್ ಶಾ
ಕಡಬದ ರೆಂಜಿಲಾಡಿಯಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಕುಣಿತ ಭಜನೆ ಸಾರ್ವಜನಿಕರ ಗಮನ ಸೆಳೆಯಿತು.
ಇನ್ನು, ಉದನೆ, ನಿಡ್ಲೆ, ಪೆರಿಯಡ್ಕ, ಉಪ್ಪಿನಂಗಡಿ, ಎಡಮಂಗಲ, ಹೊಸಮಠ ಬಲ್ಯ ಸೇರಿದಂತೆ ವಿವಿದೆಢೆ ಗಣೇಶೋತ್ಸವದ ಮೆರವಣಿಗೆ ಸಂಭ್ರಮದಿಂದ ನಡೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post