ಕಲ್ಪ ಮೀಡಿಯಾ ಹೌಸ್ | ಪುತ್ತೂರು |
ಕಣಜದ ಹುಳುಗಳ ದಾಳಿಗೆ ಒಳಗಾದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಇಲ್ಲಿನ ಒಳಮೊಗ್ರು ಗ್ರಾಮದ ಕೈಕಾರ ನಿವಾಸಿಯೊಬ್ಬರು ಕಟ್ಟಿಗೆ ತರಲು ಮನೆ ಬಳಿಯ ಗುಡ್ಡೆಗೆ ತೆರಳಿದ್ದರು. ಈ ವೇಳೆ ಕಣಜದ ಹುಳುಗಳು ಇವರ ಮೇಳೆ ದಾಳಿ ನಡೆಸಿವೆ.
ಇದರಿಂದ ಅಸ್ವಸ್ಥಗೊಂಡರೂ ಅವರು ಮನೆ ಕಡೆಗೆ ಓಡಿ ಬಂದಿದ್ದಾರೆ. ಈ ವೇಳೆ ಮುಖ, ಕುತ್ತಿಗೆ, ಮೈಯೆಲ್ಲ ಯಾವುದೋ ನೊಣ ಕಚ್ಚಿ ಊದಿಕೊಂಡಿರುವುದು ಕಂಡು ಬಂದಿತ್ತು. ಈ ಕುರಿತು ಅವರ ತಾಯಿ ಮಾಯಿಲು ಅವರು ವಿಚಾರಿಸಿದಾಗ ಪಿಲಿಕುಡೊಲು ಕಚ್ಚಿರುವುದಾಗಿ ಗುರುವ ಅವರು ತಿಳಿಸಿದ್ದರು. ತತಕ್ಷಣ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Also read: ಅಧಿಕ ಮಾಸದ ಪ್ರಯುಕ್ತ ಜು.25-29ರವರೆಗೆ ‘ಅಧಿಕಸ್ಯ ಅಧಿಕ ಫಲಂ’ ವಿಶೇಷ ಜ್ಞಾನಸತ್ರ ಕಾರ್ಯಕ್ರಮ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post