No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Wednesday, August 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ದಕ್ಷಿಣ ಕನ್ನಡ

ವಿವೇಕಾನಂದ ಹಾಸ್ಟೆಲ್ಸ್ ನಲ್ಲಿ ವಿಷು ಹಾಗೂ ಅಂಬೇಡ್ಕರ್ ಜಯಂತಿ ಆಚರಣೆ

kalpa News by kalpa News
April 14, 2021
in ದಕ್ಷಿಣ ಕನ್ನಡ
0
ವಿವೇಕಾನಂದ ಹಾಸ್ಟೆಲ್ಸ್ ನಲ್ಲಿ ವಿಷು ಹಾಗೂ ಅಂಬೇಡ್ಕರ್ ಜಯಂತಿ ಆಚರಣೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಪುತ್ತೂರು: ನೆಹರೂನಗರದ ವಿವೇಕಾನಂದ ಹಾಸ್ಟೆಲ್ಸ್ ನಲ್ಲಿ ವಿಷು ಹಬ್ಬ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಬುಧವಾರ ಆಚರಿಸಲಾಯಿತು.

ವಿವೇಕಾನಂದ ಹಾಸ್ಟೆಲ್ಸ್ ನಳಂದಾ ಹುಡುಗರ ವಸತಿ ನಿಲಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಯೋಗಶಿಕ್ಷಕ ಚಂದ್ರಶೇಖರ ಮಾತನಾಡಿ ರಾಮರಾಜ್ಯದ ಪ್ರತಿಷ್ಠಾಪನೆ, ಆರ್ಯ ಸಮಾಜದ ಸ್ಥಾಪನೆ ಹಾಗೂ ಈ ನಾಡಿನ ಮಹಾನ್ ಪುರುಷರನೇಕರ ಜನ್ಮದಿನ ಯುಗಾದಿಯಂದೇ ಆಗಿದೆ. ಭಾರತದಲ್ಲಿ ಚಂದ್ರಮಾನ ಮತ್ತು ಸೌರಮಾನ ಎಂಬ ಎರಡು ರೀತಿಯ ಯುಗಾದಿ ಆಚರಣೆಗಳು ಅಸ್ತಿತ್ವದಲ್ಲಿದೆ‌. ಸೌರಮಾನ ಯುಗಾದಿಯನ್ನು ಬಿಸು, ವಿಷು ಮುಂತಾದ ಗ್ರಾಮೀಣ ಹೆಸರುಗಳಿಂದ ರಾಷ್ಟ್ರಾದ್ಯಂತ ಆಚರಿಸಲಾಗುತ್ತದೆ‌ ಎಂದು ನುಡಿದರು

ಸಂವಿಧಾನ ಎನ್ನುವುದು ಒಣ ಉಪದೇಶಗಳ ಕಂತೆಯಲ್ಲ. ಅತ್ಯಂತ ಪವಿತ್ರವಾದದ್ದು ಮತ್ತು ದಿನದರ್ಶಿಕೆಯಂತೆ ಇರಬೇಕಾದದ್ದು. ನಮ್ಮೆಲ್ಲರ ವೈಯಕ್ತಿಕ ಜೀವನಕ್ಕೆ ಹೇಗೆ ಒಂದು ಚೌಕಟ್ಟಿದೆಯೋ, ಹಾಗೆಯೇ ಇಡೀ ರಾಷ್ಟ್ರಕ್ಕೆ ಒಂದು ಚೌಕಟ್ಟನ್ನು ಹಾಕಿಕೊಟ್ಟವರಲ್ಲಿ ಪ್ರಮುಖರು ಡಾ.ಬಿ.ಆರ್. ಅಂಬೇಡ್ಕರ್. ಸ್ವತಃ ಅನೇಕ ಶೋಷಣೆಗಳನ್ನು ಅನುಭವಿಸಿ, ದಲಿತರ ಮತ್ತು ಶೋಷಣೆಗೆ ಒಳಗಾದವರ ದನಿಯಾಗಿ ನಿಂತು ರಾಷ್ಟ್ರನಾಯಕರಾದರು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಳಂದಾ ವಸತಿ ನಿಲಯದ ನಿಲಯಪಾಲಕ ಶಿವಪ್ರಸಾದ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಹಾಸ್ಟೆಲ್ಸ್ ನ ಮುಖ್ಯ ನಿಲಯಪಾಲಕ ಗೋವಿಂದರಾಜ ಶರ್ಮಾ, ನಿಲಯಪಾಲಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರಣವ ಪ್ರಾರ್ಥಿಸಿ, ನಿಲಯ ಪಾಲಕ ಭರತ್ ಪೆರ್ಗಡೆ ಕಾರ್ಯಕ್ರಮವನ್ನು ನಿರೂಪಿಸಿದರು.
ವಿವೇಕಾನಂದ ಹಾಸ್ಟೆಲ್ಸ್ ನ ನಿವೇದಿತಾ ಹುಡುಗಿಯರ ವಸತಿ ನಿಲಯದಲ್ಲಿ ಆಚರಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕ ಕುಮಾರ್ ಶೇಣಿ, ಅಂಬೇಡ್ಕರ್ ಅವರನ್ನು ಮುಕ್ತವಾಗಿ ಅಧ್ಯಯನ ಮಾಡುತ್ತಾ ಹೋದ ಹಾಗೆ ಒಬ್ಬ ವಿಭಿನ್ನ ರಾಷ್ಟ್ರ ನಾಯಕನ ಪರಿಚಯ ನಮಗಾಗುತ್ತದೆ. ಭಾರತದಂತಹ ವಿಶಾಲ, ವೈವಿಧ್ಯಮಯ ರಾಷ್ಟ್ರಕ್ಕೆ ಒಂದು ಸಂವಿಧಾನವನ್ನು ರಚಿಸುವುದು ಸುಲಭದ ಮಾತಾಗಿರಲಿಲ್ಲ. ಅಂತಹ ಸಂವಿಧಾನವನ್ನು ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಅಂಬೇಡ್ಕರರನ್ನು ಪ್ರಸ್ತುತ ಸೀಮಿತಗೊಳಿಸುವ ಪ್ರಯತ್ನಗಳು ನಡೆಯುತ್ತಿರುವುದು ವಿಷಾದನೀಯ ಎಂದು ನುಡಿದರು.

ನಾನು ಮೊದಲು ಭಾರತೀಯ ಹಾಗೂ ಅದೇ ಅಂತಿಮ ಎನ್ನುವುದನ್ನು ಧೈರ್ಯವಾಗಿ ಹೇಳುತ್ತಿದ್ದ ಅಂಬೇಡ್ಕರರನ್ನು ಮತ್ತು ಅವರ ಕೊಡುಗೆಗಳನ್ನು ನಾವು ಗುರುತಿಸುವಲ್ಲಿ ಎಡವಿದ್ದೇವೆ. ಅವರು ದೈವದೀನರಾಗಿ 34 ವರ್ಷಗಳ ನಂತರ ನೀಡಿದ ಭಾರತರತ್ನ ಪ್ರಶಸ್ತಿ ಇದಕ್ಕೆ ನಿದರ್ಶನ. ನಮಗೆ ಸಂವಿಧಾನ ಅರ್ಥವಾಗಲಿಲ್ಲ ಅಂದರೆ ನಮಗೆ ಅಂಬೇಡ್ಕರ್ ಅರ್ಥವಾಗಲಿಲ್ಲ ಎಂದರ್ಥ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಹಾಸ್ಟೆಲ್ಸ್ ನ ಮುಖ್ಯನಿಲಯಪಾಲಕ ಗೋವಿಂದರಾಜ ಶರ್ಮಾ ವಹಿಸಿದ್ದರು‌. ಕಾರ್ಯಕ್ರಮದಲ್ಲಿ ವಸತಿ ನಿಲಯ ಪಾಲಕಿಯರು ಉಪಸ್ಥಿತರಿದ್ದರು‌. ವಿದ್ಯಾರ್ಥಿನಿ ಯಶಸ್ವಿ ಸ್ವಾಗತಿಸಿ, ಪ್ರಿಯಾ ವಂದಿಸಿದರು. ವಿದ್ಯಾರ್ಥಿನಿ ದಿವ್ಯಾ ವೈಯಕ್ತಿಕ ಗೀತೆ ಹಾಡಿದರು. ವಿದ್ಯಾರ್ಥಿನಿ ಶ್ರೀಜನಿ ಕಾರ್ಯಕ್ರಮವನ್ನು ನಿರೂಪಿಸಿದರು.

ವರದಿ: ಅರುಣ್ ಕಿರಿಮಂಜೇಶ್ವರ, ಪುತ್ತೂರು

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: CoastalNewsDhakshina KannadaKannada News WebsiteKaravaliNewsLatest News KannadaMangalorePutturuUdupiVivekananda Hostelಉಡುಪಿಕರಾವಳಿ_ಸುದ್ಧಿದಕ್ಷಿಣ_ಕನ್ನಡಪುತ್ತೂರುಮಂಗಳೂರುವಿವೇಕಾನಂದ ಹಾಸ್ಟೆಲ್ಸ್
Share198Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಬಾಬಾ ಸಾಹೇಬರ ಚಿಂತನೆಗಳು ಎಂದಿಗೂ ಪ್ರಸ್ತುತ: ಗೋಪಾಲ್ ಅಭಿಮತ

Next Post

ಭದ್ರಾವತಿ ತಾಲೂಕು ಕಛೇರಿಯಲ್ಲಿ ಅಂಬೇಡ್ಕರ್ ಅವರ 130ನೆಯ ಜನ್ಮದಿನೋತ್ಸವ ಆಚರಣೆ

kalpa News

kalpa News

Next Post
ಭದ್ರಾವತಿ ತಾಲೂಕು ಕಛೇರಿಯಲ್ಲಿ  ಅಂಬೇಡ್ಕರ್ ಅವರ 130ನೆಯ ಜನ್ಮದಿನೋತ್ಸವ ಆಚರಣೆ

ಭದ್ರಾವತಿ ತಾಲೂಕು ಕಛೇರಿಯಲ್ಲಿ ಅಂಬೇಡ್ಕರ್ ಅವರ 130ನೆಯ ಜನ್ಮದಿನೋತ್ಸವ ಆಚರಣೆ

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL