ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮುಂಬೈ: ಒಂದೆಡೆ ನಿಜಾಮುದ್ದೀನ್ ಮಸೀದಿಯಿಂದ ದೇಶದಾದ್ಯಂತ ಕೊರೋನಾ ವೈರಸ್’ಗಳನ್ನು ಮುಸ್ಲೀಮರು ಹರಡಲು ಕಾರಣವಾಗಿದ್ದರೆ, ಇನ್ನೊಂದೆಡೆ ಇದೇ ಮುಸ್ಲಿಂ ವ್ಯಕ್ತಿಯ ಶವ ಸಂಸ್ಕಾರ ನಡೆಸಿದ ಹಿಂದೂಗಳು ಧರ್ಮ ಮೆಚ್ಚುವಂತಹ ಕಾರ್ಯ ಮಾಡಿದ್ದಾರೆ.
ಮಹಾರಾಷ್ಟ್ರದ ಉಪನಗರ ಮಲಾಡ್ ನಿವಾಸಿಯಾಗಿದ್ದ 65 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬರು ಕೊರೋನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗಿದೇ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದರು. ಆದರೆ, ಮಲಾಡ್’ನ ಮಾಲ್ ವಾಡ್ನಿ ಖಬರಸ್ತಾನದಲ್ಲಿ ಇವರ ಶರೀರವನ್ನು ಕೊಂಡೊಯ್ದ ನಂತರ ಮಣ್ಣು ಮಾಡಲು ನಿರಾಕರಿಸಲಾಯಿತು.
ನೀವು ಮಾಹಿತಿ ನೀಡದೇ ತಂದಿದ್ದೀರಿ, ಅಲ್ಲದೇ ಕೊರೋನಾ ವೈರಸ್’ನಿಂದ ಸತ್ತವರಾದ ಕಾರಣ ನಾವು ಮಣ್ಣು ಮಾಡಲು ಅವಕಾಶ ನೀಡುವುದಿಲ್ಲ ಎಂದು ನಿರಾಕರಿಸಿದರು.
ಸರ್ಕಾರದ ನಿಯಮಾನುಸಾರ ಅನುಮತಿ ಪಡೆದುಕೊಂಡು ಹೋಗಿದ್ದ ಮನೆಯವರು ಎಷ್ಟೇ ವಿನಂತಿಸಿಕೊಂಡರೂ ಅವರು ಜಗ್ಗಲಿಲ್ಲ. ಆನಂತರ ಇದು ವಾಗ್ವಾದಕ್ಕೆ ತಿರುಗಿ ದೊಡ್ಡ ಗಲಾಟೆಯೇ ನಡೆದಿದೆ.
ಈ ನಡುವೆ ಘಟನೆ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಕೆಲವು ಹಿಂದೂ ಕಾರ್ಯಕರ್ತರು ಮಾನವೀಯತೆ ಮೆರೆದು ನಮ್ಮ ಹಿಂದೂ ಚಿತಾಗಾರದಲ್ಲಿ ಸಂಸ್ಕಾರ ಮಾಡಿ ಎಂದು ತಿಳಿಸಿದರು. ಇದಕ್ಕೆ ಯೋಜಿಸಿ ಒಪ್ಪಿದ ಮೃತನ ಕುಟುಂಬಸ್ಥರು ಹಿಂದೂ ಚಿತಾಗಾರದಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಸಂಕಷ್ಟದ ಸಮಯದಲ್ಲಿ ಧಾವಿಸಿ, ತಮ್ಮ ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಲು ಸ್ಥಳ ಹಾಗೂ ಸಹಕಾರ ನೀಡಿ ಮಾನವೀಯತೆ ಮೆರೆದ ಹಿಂದೂ ಕಾರ್ಯಕರ್ತರಿಗೆ ಮೃತನ ಮಗ ಕೃತಜ್ಞತೆ ಸಲ್ಲಿಸಿದ್ದಾನೆ.
ಈ ಘಟನೆ ಮಂಗಳವಾರ ಹಾಗೂ ಬುಧವಾರ ನಡೆದಿದೆ.
Get in Touch With Us info@kalpa.news Whatsapp: 9481252093
















