ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಡೈಸನ್ #Dyson ತನ್ನ ಮೊದಲ ಗ್ಲೋಬಲ್ ವೆಟ್ ಕ್ಲೀನಿಂಗ್ ಅಧ್ಯಯನದ ಫಲಿತಾಂಶಗಳನ್ನು ಪ್ರಕಟಿಸಿದ್ದು, ಈ ಮೂಲಕ ಅಮೂಲಾಗ್ರ ಹೆಜ್ಜೆನ್ನಿರಿಸಿದೆ.
ಹೌದು… ಜನರು ತೇವಾಂಶದ ಸ್ವಚ್ಛತೆಯ ಸಾಧನಗಳೊಂದಿಗೆ ಎದುರಿಸುವ ವೆಟ್ ಕ್ಲೀನಿಂಗ್ #WetCleaning ಅಭ್ಯಾಸಗಳು, ವರ್ತನೆಗಳು, ಸಂಕಷ್ಟಗಳನ್ನು ಗಮನಿಸಿ, ಏಕೆ ನಮ್ಮ ಅತ್ಯುತ್ತಮ ಉದ್ದೇಶಗಳು ನಾವು ನಿರೀಕ್ಷಿಸಿದ ಸ್ವಚ್ಛತೆಯ ಮನೆಗಳನ್ನು ನೀಡಲಾರವು ಎನ್ನುವುದರ ಕುರಿತು ಅಧ್ಯಯನ ಮಾಡಿದೆ.
ಈ ಅಧ್ಯಯನದ ಪ್ರಕಾರ ಒರಟು ನೆಲ ಭಾರತದ ಮನೆಗಳಲ್ಲಿ ಹೆಚ್ಚಾಗಿದ್ದು ಶೇ.94.5ರಷ್ಟು ಜನರು ತಮ್ಮ ನೆಲಗಳನ್ನು ಟೈಲ್ಸ್, #Tiles ಕಲ್ಲು ಅಥವಾ ಮರದಂತಹ ವಸ್ತುಗಳನ್ನು ಬಳಸಿ ರೂಪಿಸಿದ್ದು ಅವು ಧೂಳನ್ನು ಸುಲಭವಾಗಿ ಆಕರ್ಷಿಸುತ್ತವೆ.

- ಶೇ.75ರಷ್ಟು ಮಂದಿ ಸ್ವಚ್ಛತೆಗೆ ಒಂದು ಗಂಟೆಗೂ ಮೇಲ್ಪಟ್ಟು ಸಮಯ ನೀಡುತ್ತಿದ್ದಾರೆ.
- ಭಾರತೀಯರು ಮಾಪ್’ಗಳು, ಪೊರಕೆಗಳು ಮತ್ತು ತೇವದ ಬಟ್ಟೆಗಳನ್ನು ಬಳಸುತ್ತಿದ್ದು ಅವು ಅತ್ಯಂತ ಹೆಚ್ಚು ಎಪಿಎಸಿ ಒಳಗೊಂಡಿರುತ್ತವೆ.
- ಶೇ.49ರಷ್ಟು ಮಂದಿ ಅವರು ಪ್ರತಿ ಕೋಣೆಗೂ ಸ್ವಚ್ಛಗೊಳಿಸುವ ನೀರನ್ನು ಬದಲಾಯಿಸುವುದಿಲ್ಲ ಎಂದು ಒಪ್ಪಿಕೊಳ್ಳುತ್ತಾರೆ.
- ಶೇ.45ರಷ್ಟು ಮಂದಿ ಕಠಿಣ ಕಲೆಗಳು ಅವರ ಪ್ರಮುಖ ಸ್ವಚ್ಛತೆಯ ಸವಾಲು ಎಂದು ಹೇಳುತ್ತಾರೆ ಮತ್ತು ಶೇ.31ರಷ್ಟು ಮಂದಿ ಒದ್ದೆ ನೆಲದ ಮೇಲೆ ಜಾರುವ ಕುರಿತು ಆತಂಕ ವ್ಯಕ್ತಪಡಿಸುತ್ತಾರೆ.

ಒದ್ದೆ ಹಾಗೂ ಒಣ ಕಸವನ್ನು ಒಂದೇ ಸಲಕ್ಕೆ ಹೀರಿಕೊಳ್ಳುವಂತೆ ರೂಪಿಸಿರುವ ಡೈಸನ್ ವಾಷ್ ಜಿ1 ಕಠಿಣ ಕಲೆಗಳು ಮತ್ತು ಕೂದಲು ಕೂಡಾ ಸಂಗ್ರಹಿಸುವಂತೆ ಹೈಡ್ರೇಷನ್ ಹೀರಿಕೊಳ್ಳುವಿಕೆ ಮತ್ತು ಹೊರತೆಗೆಯುವ ತಂತ್ರಜ್ಞಾನಗಳನ್ನು ಹೊಂದಿದೆ.
ವಿಶೇಷವೆಂದರೆ, ಈ ಯಂತ್ರ ಶೇ.30ರಷ್ಟು ಕಲೆಗಳನ್ನು ನಿವಾರಿಸುತ್ತದೆ ಮತ್ತು ನೆಲವನ್ನು ಸಾಂಪ್ರದಾಯಿಕ ಮಾಪಿಂಗ್’ಗೆ ಹೋಲಿಸಿದರೆ ಶೇ.80ರಷ್ಟು ವೇಗದಲ್ಲಿ ಒಣಗಿಸುತ್ತವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post