ಕಲ್ಪ ಮೀಡಿಯಾ ಹೌಸ್ | ಮೈಸೂರು |
ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವದ ಅಂಗವಾಗಿ ಮೈಸೂರಿನ ಚಾಮರಾಜ ಜೋಡಿ ರಸ್ತೆಯ ಭಂಡಾರಕೇರಿ ಮಠದ ವೇಂಕಟಾಚಲ ಧಾಮದಲ್ಲಿ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಪ್ರತಿಷ್ಠಾಪಿಸಿರುವ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ವೃಂದಾವನ ಕ್ಷೇತ್ರದಲ್ಲಿ ಆ. 20ರಿಂದ 3 ದಿನ ವಿಶೇಷ ಆರಾಧನೋತ್ಸವ ನೆರವೇರಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ ಸರಣಿಯಲ್ಲಿ 20ರ ಸಣಹೆ 6ಕ್ಕೆ ಎ.ಆರ್. ಕೌಸಲ್ಯಾ ರಘುರಾಂ ತಂಡದಿಂದ ವಿಶೇಷ ಭಜನೆ, 8ಕ್ಕೆ ರಥೋತ್ಸವ, ರಂಗಪೂಜೆ, 21 ರ ಸಂಜೆ 5.30ಕ್ಕೆ ಕಲಾವಿದೆ ಲಲಿತಾ ಉಳಿಯಾರು ತಂಡದಿಂದ ‘ರಾಘವೇದ್ರ ಮಹಾತ್ಮೆ’ ಹರಿಕಥೆ, 8ಕ್ಕೆ ಅಷ್ಟಾವಧಾನ ಮತ್ತು ರಂಗಸೇವೆ ನೆರವೇರಲಿದೆ.
22 ರ ಸಂಜೆ 6ಕ್ಕೆ ವಿದ್ವಾನ್ ಕೃಷ್ಣಕುಮಾರ ಆಚಾರ್ಯರಿಂದ ‘ಪ್ರಹ್ಲಾದ ಚರಿತ್ರೆ’ ವಿಶೇಷ ಉಪನ್ಯಾಸ, ರಾತ್ರಿ 8ಕ್ಕೆ ರಾಯರಿಗೆ ಮತ್ತು ಶ್ರೀನಿವಾಸ ದೇವರಿಗೆ ಮಹಾಮಂಗಳಾರತಿ ಸಂಪನ್ನಗೊಳ್ಳಲಿದೆ.ರಾಯರ ವೃಂದಾವನಕ್ಕೆ ಮೂರು ದಿನವೂ ಬೆಳಗ್ಗೆ ಅಷ್ಟೋತ್ತರ ಪಾರಾಯಣ ನಂತರ ಪಂಚಾಮೃತಾಭಿಷೇಕ, ಎಳನೀರು ಅಭಿಷೇಕ ಮಾಡಲಾಗುತ್ತದೆ. ವಿಶೇಷ ಹೂವಿನ ಅಲಂಕಾರ ನೆರವೇರಲಿದೆ.
ಭಕ್ತರಿಂದ ರಾಯರ ಪಾದುಕೆಗಳಿಗೆ ಪ್ರತ್ಯೇಕ ಪಾದಪೂಜೆ, ಕನಕಾಭಿಷೇಕ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಸಂಜೆ ಪ್ರಾಕಾರ ಉತ್ಸವ, ಅಷ್ಟಾವಧಾನ ಸೇವೆ ಮತ್ತು ರಂಗಪೂಜೆ ಸಂಪನ್ನಗೊಳ್ಳಲಿದೆ.
ಪ್ರಧಾನ ಅರ್ಚಕ ರಾಘವೇಂದ್ರಾಚಾರ್ ಪೂಜಾಕಾರ್ಯದ ನೇತೃತ್ವ ವಹಿಸಲಿದ್ದಾರೆ. ವಿವರಗಳಿಗೆ 98454 92732 ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post