ನವದೆಹಲಿ: ಅವಿಶ್ವಾಸ ನಿರ್ಣಯ ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಮಾತಿನ ನಂತರ ಪ್ರಧಾನಿ ಮೋದಿ ಅವರನ್ನು ಆಲಂಗಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ನೀಡಿರುವ ಗೃಹ ಸಚಿವ ರಾಜನಾಥ್ ಸಿಂಗ್, ಲೋಕಸಭೆಯಲ್ಲಿ ರಾಹುಲ್ ಚಿಪ್ಕೋ ಆಂದೋಲನ ಆರಂಭಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ತಮ್ಮ ಭಾಷಣದ ವೇಳೆ ರಾಹುಲ್ ವಿರುದ್ಧ ವ್ಯಂಗ್ಯ ಮಿಶ್ರಿತ ಚಾಟಿ ಬೀಸಿದ ಸಿಂಗ್, ಕೆಲವರು ಬೆಳ್ಳಿ, ಚಿನ್ನದ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡೇ ಜನಿಸಿರುತ್ತಾರೆ. ಅವರಿಗೆ ಈ ದೇಶದ ರೈತರ ಸಮಸ್ಯೆಗಳು, ಬಡವರ ಸಮಸ್ಯೆಗಳನ್ನು ಅವರು ಏನೆಂದು ಅರಿಯುತ್ತಾರೆ. ಇಂತಹವರಿಗೆ ತಿಳಿಸಿ, ಅರ್ಥ ಮಾಡಿಸಬೇಕಷ್ಟೇ ಎಂದು ಕಟಕಿಯಾಡಿದರು.
Discussion about this post