ಕಲ್ಪ ಮೀಡಿಯಾ ಹೌಸ್ | ರಾಯಚೂರು |
ಬೀದರ್ ಹಾಗೂ ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಜನಿವಾರ #Janivara ತೆಗೆಸಿದ ವಿಚಾರಕ್ಕೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ #Subudhendra Theertha Swamiji of Mantralaya Shri Raghavendra Swamy Mutt ತೀವ್ರವಾಗಿ ಖಂಡಿಸಿದ್ದಾರೆ.
ಜನಿವಾರವೆಂಬುದು ಧರ್ಮ, ಸಂಪ್ರದಾಯ ಹಾಗೂ ಬ್ರಾಹ್ಮಣತ್ವದ #Brahmana ಪ್ರತೀಕವಾಗಿದೆ. ಜನಿವಾರ ತೆಗೆಸಿದ್ದರಿಂದ ವಿದ್ಯಾರ್ಥಿಯ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿರುವುದು ಸಂವಿಧಾನ ವಿರೋಧಿ ನಡೆ ಆಗಿದ್ದು, ಸಂವಿಧಾನದಲ್ಲಿ ಎಲ್ಲ ಧರ್ಮವನ್ನೂ ಆಚರಿಸುವ ಅವಕಾಶ ಕಲ್ಪಿಸಲಾಗಿದೆ. ಆದರೆ ಘಟನೆಯಲ್ಲಿ ಧರ್ಮ ವಿರೋಧಿ ನೀತಿ ಅನುಸರಿಸಲಾಗಿದ್ದು, ಇಂತಹ ದ್ವಂದ್ವ ನಿಲುವು ಖಂಡನೀಯ ಎಂದು ಹೇಳಿದ್ದಾರೆ.
ಸಚಿವರು ಹಾಗೂ ಶಾಸಕರು ವಿದ್ಯಾರ್ಥಿಗಳನ್ನು ಭೇಟಿ ಮಾಡಿ ತಪ್ಪಾಯಿತು ಎಂದು ಹೇಳುವುದು ಕಣ್ಮರೆಸುವ ತಂತ್ರವಾಗಿದೆ. ಮುಂದೆ ಇಂತಹ ಘಟನೆ ಪುನರಾವರ್ತನೆಯಾದರೆ ಸರ್ಕಾರದ ವಿರುದ್ಧ ಸಮಸ್ತ ಹಿಂದೂಗಳು ಜಾತಿ ಬೇಧ ಮರೆತು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಧರ್ಮ ವಿರೋಧಿ ಚಟುವಟಿಕೆ ನಡೆಯಬಾರದು. ಬೇರೆ ಬೇರೆ ಧರ್ಮದವರು ತಮ್ಮ ಧರ್ಮ ಹಾಗೂ ಚಿಹ್ನೆಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ಆದರೆ ವಿಪ್ರ ಸಮುದಾಯಕ್ಕೆ ಮಾತ್ರ ಈ ರೀತಿಯಾಗಿ ಅನ್ಯಾಯ ಮಾಡಲಾಗಿದೆ. ಜನಿವಾರ ತೆಗೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಹಾಗೂ ವಿದ್ಯಾರ್ಥಿಗೆ ಸೂಕ್ತ ನಷ್ಟ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post