No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Thursday, April 30, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಪ್ರಸ್ತುತ ದಿನಮಾನದ ಕಥಾಹಂದರ ಹೊಂದಿರುವ ‘ನಾಯಿ ಕಳೆದಿದೆ’

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 22, 2025
in Special Articles
0
ಪ್ರಸ್ತುತ ದಿನಮಾನದ ಕಥಾಹಂದರ ಹೊಂದಿರುವ ‘ನಾಯಿ ಕಳೆದಿದೆ’
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

” ನಾಯಿ ಕಳೆದಿದೆ” ಎಂಬ ನಾಟಕದ ಹೆಸರೇ ಹೇಳುತ್ತದೆ ಇದು ಪ್ರಸ್ತುತ ದಿನಮಾನದ ಕಥಾಹಂದರ ಹೊಂದಿರುವಂತದ್ದು ಎಂದು. ಒಂದು ನಾಟಕ ಮನಸ್ಸಿಗೆ ನಾಟುವುದು ಕಥೆ ನಮ್ಮ ನಡುವೆ ನಡೆಯುತ್ತಿರುವುದೇನೋ ಎಂದು ಅನಿಸಿದಾಗ. ಅದರಂತೆ ಇದು ಕೂಡ ನೋಡಿದಾಗ ನಮ್ಮ ನಡುವೆಯೇ ನಡೆಯುತ್ತಿರುವ ಸನ್ನಿವೇಶಗಳೋ ಎಂಬಂತೆ ಖಂಡಿತವಾಗಿಯೂ ಭಾಸವಾಗುತ್ತದೆ. ಹಾಗಾಗಿ ಅದು ನೋಡುಗನನ್ನು ಸೆಳೆದುಬಿಡುತ್ತದೆ. ಅಜೇಯ ಸಂಸ್ಕೃತಿ ಬಳಗ ಶಿವಮೊಗ್ಗ ಆಯೋಜಿಸಿದ ಲಾವಣ್ಯ ಬೈಂದೂರು, ಕಲಾ ತಂಡ ಅಭಿನಯಿಸಿದ ‘ನಾಯಿಕಳೆದಿದೆ’ ಎಂಬ ನಾಟಕ ಇತ್ತೀಚೆಗಷ್ಟೇ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶಿತಗೊಂಡಿತು.

ಒಂದು ಸೊಗಸಾದ ಜಿ. ಎಸ್. ಎಸ್ ರವರ ಭಾವಗೀತೆಯಾದ ‘ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ…’ಎಂಬುದರಿಂದ ಆರಂಭವಾಗುವ ನಾಟಕ ವೃದ್ಧ ದಂಪತಿಗಳು, ಅವರಿಗಿರೋ ಒಬ್ಬನೇ ಮಗ, ವಾರಾಂತ್ಯಕ್ಕೆ ಅವನು ಅಪ್ಪ ಅಮ್ಮನನ್ನು ನೋಡಲು ತನ್ನ ಪತ್ನಿ ಹಾಗೂ ಪತ್ನಿಯ ಪ್ರೀತಿಯ ನಾಯಿಯೊಂದಿಗೆ ಬರುವುದು, ಅದನ್ನೇ ಹಬ್ಬವೆನ್ನುವ ರೀತಿಯಲ್ಲಿ ಸಂಭ್ರಮಿಸುವ ತಾಯಿ. ಮಗ-ಸೊಸೆ ಬೇಕು ಆದರೆ, ಅವರು ತರುವ ನಾಯಿ ತನ್ನ ಜಾತಿಯ ಮಡಿಯ ಕಾರಣಕ್ಕಾಗಿ ಅದನ್ನು ವರ್ಜ್ಯ ಎನ್ನುವುದು, ನಂತರದ ಮಗ ಸೊಸೆಯರ ವಿದೇಶ ಪಯಣ,ಅವರನ್ನು ಒಲ್ಲದ ಮನಸ್ಸಿನಿಂದ ಕಳುಹಿಸಿಕೊಟ್ಟರೂ ನಾಯಿಯನ್ನು ತಮ್ಮ ಮನೆಯಲ್ಲಿ ಇಟ್ಟು ಕೊಳ್ಳಬೇಕಾಗಿ ಬಂದಾಗ ನಡೆಯುವ ಕಥಾವಸ್ತುವನ್ನು ಆಧರಿಸಿರುವ ನಾಟಕ ಇದಾಗಿದೆ.
ಈ ನಾಟಕದಲ್ಲಿ ಗಮನಿಸಬೇಕಾದ ಅಂಶಗಳೆಂದರೆ ಸಂಬಂಧಗಳ ಸೂಕ್ಷ್ಮತೆ, ಮಾತಾ ಪಿತೃಗಳ ಪ್ರೇಮ, ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿನ ಮಕ್ಕಳಿಗಿಂತ ಸಾಕುಪ್ರಾಣಿಗಳ ಮೇಲಿನ ಅತಿಯಾಗಿ ಹಚ್ಚಿಕೊಳ್ಳುವ ಸಂಸ್ಕೃತಿ, ಮನೆಗೆ ಮನೆ ಮಗನಿಗಿಂತ ರೇಷನ್ ಹಾಕುವವನೇ ಹೆಚ್ಚಿನ ಸ್ಥಾನ ಸಂಪಾದಿಸುವುದು, ನಡುನಡುವೆ ಬೊಗಳುವ ನಾಯಿಯಂತೆ ಬಂದು ಹೋಗುವ ಮುನಿ ವೆಂಕಟಮ್ಮ ಅಲಿಯಾಸ್ ನಾಗವೇಣಿ, ಎಲ್ಲವೂ ಸಹ ಪ್ರಸ್ತುತವನ್ನು ಚೆನ್ನಾಗಿ ಕಟ್ಟಿಕೊಟ್ಟಿದೆ. ಇದರ ನಡುವೆಯೂ ಮನೆಯಲ್ಲಿ ಮಗ ಸೊಸೆ ಪ್ರೀತಿಸುವ ನಾಯಿ (ರಾಗಾ) ಮಕ್ಕಳ ಬದಲಿಗೆ ಬಂದು ಉಳಿದು ಆದ ರಗಳೆಗಳ ನಡುವೆ ಅದು ಇಲ್ಲವಾದಾಗ ಅದರ ಮೇಲಿನ ಪ್ರೇಮ ವ್ಯಕ್ತವಾಗುವ ರೀತಿ ಬಹಳ ಚೆನ್ನಾಗಿ ಮೂಡಿ ಬಂದಿದೆ.

ಇಡೀ ನಾಟಕವನ್ನು ಮನಮುಟ್ಟುವಂತೆ ಕೊಂಡೊಯ್ದದ್ದು ಒಂದು ಮುಗ್ಧ ವೃದ್ಧ ದಂಪತಿಗಳು. ಅವರಿಬ್ಬರೂ ಸಹ ತಮ್ಮ ಪಾತ್ರಕ್ಕೆ ಶೇಕಡಾ ನೂರಕ್ಕೆ ನೂರರಷ್ಟು ನ್ಯಾಯ ಒದಗಿಸಿದ್ದಾರೆ. ಕೆಲವು ದೃಶ್ಯಗಳಂತೂ ನೋಡುಗರನ್ನು ಭಾವುಕರನ್ನಾಗಿಸಿದ ಅಭಿನಯ ಅವರದಾಗಿತ್ತು. ಇದರ ಯಶಸ್ಸಿಗೆ ನಿಧಿ ಹಾಗೂ ಸುಬ್ರಹ್ಮಣ್ಯ ಉಪ್ಪುಂದ ಈ ಇಬ್ಬರು ಪಾತ್ರಧಾರಿಗಳನ್ನು ಮೆಚ್ಚಲೇಬೇಕು. ಇನ್ನು ಸಭ್ಯ ಗಯ್ಯಾಳಿ ಸೊಸೆ, ಅವನ ತಾಳಕ್ಕೆ ಕುಣಿಯುವ ಮಗ ಕೂಡ ತಮ್ಮ ಪಾತ್ರಕ್ಕೆ ಬೇಕಾದ ಜೀವ ತುಂಬಿದ್ದಾರೆ. ಮಧ್ಯದಲ್ಲಿ ಬಂದು ಹೋಗುವ ಭಾವನಾಗಿ ಗಣೇಶ್ ಕಾರಂತ್, ಮಗನಾಗಿ ಗುರು ಕೂಡ ಅವರ ಪಾತ್ರ ಅಚ್ಚುಕಟ್ಟಾಗಿ ನಿರ್ವಹಿಸಿದವರೇ ಆಗಿದ್ದಾರೆ. ರೇಷನ್ ಅಂಗಡಿ ಅಶೋಕ, ಆತ ಮನೆ ಮಗನಂತೆ ಜವಾಬ್ದಾರಿ ನಿರ್ವಹಿಸಿದ ಸಜ್ಜನ ವ್ಯಕ್ತಿತ್ದೊಂದಿಗೆ ಮನಸ್ಸಿನಲ್ಲಿ ಉಳಿಯುವಂತೆ ಆದರೆ, ಬಿಗ್ ಬಾಸ್ ಸ್ಪರ್ಧಿಯಾಗಿ ತಾನು ಮಾಡಿದ ರಾಜಕೀಯದಿಂದಲೇ ಗೆದ್ದು ಬಂದು ಸೆಲೆಬ್ರೇಟಯಂತಾದ ಮುನಿ ವೆಂಕಟಮ್ಮ (ನಾಗವೇಣಿ) ಹಾಗೂ ಆಕೆಯ ಅಸಿಸ್ಟೆಂಟ್ ಕೂಡ ತನ್ನ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ನಾಗವೇಣಿ ತಾನೇ ಶ್ರೇಷ್ಠ ಎನಿಸಿಕೊಂಡು, ಸಮಾಜ ಸೇವೆಯ ಹೆಸರಲ್ಲಿ ಹಣ ಸುಲಿಗೆ ಮಾಡುವ ಕಾಯಕ. ಅದರಿಂದ ಮುಗ್ದ ದಂಪತಿಗಳ ಮೇಲಾದ ಪರಿಣಾಮ ಕಂಡಾಗ ಪ್ರಸ್ತುತ ದಿನಗಳಲ್ಲಿ ಅಸಹಾಯಕರ ಮೇಲೆಯೇ ಇಂಥವರ ದಬ್ಬಾಳಿಕೆ ಹೆಚ್ಚು ಎನ್ನುವುದನ್ನು ಪ್ರಾತಿನಿಧಿಕವಾಗಿ ಅಭಿನಯಿಸಿ ತೋರಿಸಿದ್ದಾಳೆ.
ಮುಗ್ಧರ ಮೇಲೆ ಮಾಡುವ ದಬ್ಬಾಳಿಕೆ ಒಂದು ಕಡೆಯಾದರೆ, ಅದಕ್ಕೆ ಎದುರಾಗಿ ಅವರಿಗೆ ಸಹಕರಿಸಲು ಬರುವ ಪಾತ್ರ ಮತ್ತೊಂದೆಡೆ. ಈ ಸನ್ನಿವೇಶ ನೋಡುವನಿಗೆ ಆಪ್ತವಾಗಿತ್ತು. ಮಗ ಸೊಸೆಯರು ವಿದೇಶದಿಂದ ಬಂದಾಗ ಅವರ ಆಡುವ ಮಾತುಗಳು, ಅವರು ತಂದೆ ತಾಯಿಯರನ್ನು ನೋಯಿಸಿ ನಾಯಿಯನ್ನೇ ಆದರಿಸುವುದು ಇದೆಯಲ್ಲ ಆ ಸನ್ನಿವೇಶವು ಇಂದಿನ ದಿನಗಳಲ್ಲಿ ನಡೆಯುವುದನ್ನು ಸಾಂಕೇತಿಕವಾಗಿ ತೋರಿಸಿದಂತಿತ್ತು.

ಒಂದು ಅಂಕದಿಂದ ಮತ್ತೊಂದು ಅಂಕಕ್ಕೆ ಬರುವಾಗ ನಡು ನಡುವೆ ದೃಶ್ಯಕ್ಕೆ ತಕ್ಕಂತೆ ಬರುವ ಭಾವಗೀತೆಗಳನ್ನು ಬಹು ಜತನದಿಂದ ಆಯ್ಕೆ ಮಾಡಿ ಬಳಸಿಕೊಳ್ಳಲಾಗಿದೆ. ಎಲ್ಲವೂ ಚಂದ ಅನಿಸುವಾಗ ಸ್ವಲ್ಪ ಜಾತಿಯ ಕುರಿತು ಮಾತನಾಡಿದ್ದು ಹಾಗೂ ಡಬಲ್ ಮೀನಿಂಗ್ ಹೊರತುಪಡಿಸಿದರೆ ರಾಜೇಂದ್ರ ಕಾರಂತರ ಈ ನಾಟಕ ಅದ್ಭುತ ಪ್ರದರ್ಶನವಾಗಿಯೇ ಕಂಡುಬಂದಿತು. ಬೆಳಕಿನ ನಿರ್ವಹಣೆ, ರಂಗಸಜ್ಜಕೆ, ಕನಸಿನಲ್ಲಿ ಬಂದು ಕಾಡುವ ನಾಯಿ, ಅತ್ಯುತ್ತಮ ಪ್ರಸಾದನ ಈ ಎಲ್ಲವೂ ನಾಟಕದ ಅಂದವನ್ನು ಮತ್ತಷ್ಟು ಹೆಚ್ಚಿಸಿತು.

http://kalpa.news/wp-content/uploads/2025/03/PES-Video.mp4

ಸಾಮಾಜಿಕ ನಾಟಕಗಳು ನಮ್ಮನ್ನು ನಾವಿರುವ ರೀತಿಯನ್ನು ಪ್ರಶ್ನಿಸುವಂತೆಯೇ ಇದ್ದು, ವೃದ್ಧಾಪ್ಯದ ದಿನಗಳನ್ನು ನಮ್ಮ ಹಿರಿಯರಿಗೆ ನಾವು ಯಾವ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂಬುದು ಸಹ ನಮಗೆಲ್ಲ ಪಾಠವಾಗುವಂತೆ ಈ ನಾಟಕ ಇತ್ತು. ಮತ್ತೊಮ್ಮೆ ಹೇಳಬೇಕೆಂದರೆ ಎಲ್ಲರ ಅಭಿನಯವೂ ಮನಮುಟ್ಟುವಂತಿತ್ತು. ಈ ನಾಟಕ ಪ್ರದರ್ಶನ ಆಯೋಜಕರ ಅತ್ಯುತ್ತಮ ಆಯ್ಕೆ ಎನ್ನಬಹುದು.

ಡಾ. ಮೈತ್ರೇಯಿ ಆದಿತ್ಯ ಪ್ರಸಾದ್
ಸಂಸ್ಕೃತ ಉಪನ್ಯಾಸಕರು
ಪೇಸ್ ಕಾಲೇಜ್ ಶಿವಮೊಗ್ಗ
ಚಿತ್ರಕೃಪೆ: ಆದಿತ್ಯಪ್ರಸಾದ್ ಎಂ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news       

http://kalpa.news/wp-content/uploads/2025/02/Kumadvati-College-Shikaripura-2025-Video.mp4
http://kalpa.news/wp-content/uploads/2024/04/VID-20240426-WA0008.mp4

                         

Tags: Kannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaSpecial Articleವಿಶೇಷ ಲೇಖನ
Share196Tweet123Send
Previous Post

ಜನಿವಾರ ತೆಗೆಸಿದ್ದರಿಂದ ವಿದ್ಯಾರ್ಥಿಯ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ

Next Post

ಅಪಘಾತದಲ್ಲಿ ಗಾಯಗೊಂಡ ಕುಟುಂಬಕ್ಕೆ ನೆರವಾಗಿ ಮಾನವೀಯತೆ ಮೆರೆದ ಶಿಕ್ಷಣ ಸಚಿವರು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಅಪಘಾತದಲ್ಲಿ ಗಾಯಗೊಂಡ ಕುಟುಂಬಕ್ಕೆ ನೆರವಾಗಿ ಮಾನವೀಯತೆ ಮೆರೆದ ಶಿಕ್ಷಣ ಸಚಿವರು

ಅಪಘಾತದಲ್ಲಿ ಗಾಯಗೊಂಡ ಕುಟುಂಬಕ್ಕೆ ನೆರವಾಗಿ ಮಾನವೀಯತೆ ಮೆರೆದ ಶಿಕ್ಷಣ ಸಚಿವರು

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಜೋಗಕ್ಕೆ ಸಂಸದ ರಾಘವೇಂದ್ರ ಭೇಟಿ | ಅಧಿಕಾರಿಗಳಿಗೆ ಕೊಟ್ಟ ಸೂಚನೆಯೇನು?

ಜೋಗಕ್ಕೆ ಸಂಸದ ರಾಘವೇಂದ್ರ ಭೇಟಿ | ಅಧಿಕಾರಿಗಳಿಗೆ ಕೊಟ್ಟ ಸೂಚನೆಯೇನು?

April 30, 2026
ಗಮನಿಸಿ! ಈ ಎರಡು ದಿನ ಮೈಸೂರು-ಶಿವಮೊಗ್ಗ ರೈಲು ಸಂಚಾರದಲ್ಲಿ ಬದಲಾವಣೆ

ಯಶವಂತಪುರ-ಶಿವಮೊಗ್ಗ-ತಾಳಗುಪ್ಪ ನಡುವೆ ಸ್ಪೆಷಲ್ ಎಕ್ಸ್’ಪ್ರೆಸ್ ರೈಲು | ಇಲ್ಲಿದೆ ಡೀಟೇಲ್ಸ್

April 30, 2026
ದ್ವಿತೀಯ ಪಿಯುಸಿ ಮರುಮೌಲ್ಯಮಾಪನ | ಕ್ರೈಸ್ಟ್‌ಕಿಂಗ್ ಕಾಲೇಜಿನ ವಿದ್ಯಾರ್ಥಿ ರಾಜ್ಯಕ್ಕೆ 4ನೇ ರ‍್ಯಾಂಕ್

ದ್ವಿತೀಯ ಪಿಯುಸಿ ಮರುಮೌಲ್ಯಮಾಪನ | ಕ್ರೈಸ್ಟ್‌ಕಿಂಗ್ ಕಾಲೇಜಿನ ವಿದ್ಯಾರ್ಥಿ ರಾಜ್ಯಕ್ಕೆ 4ನೇ ರ‍್ಯಾಂಕ್

April 30, 2026
ತೀರ್ಥಹಳ್ಳಿ-ಮಂಗಳೂರು ಸೇರಿ 3 ರೈಲ್ವೆ ಮಾರ್ಗದ ಒಪ್ಪಿಗೆಗೆ ಎಂಪಿ ರಾಘವೇಂದ್ರ ಆಗ್ರಹ

ಅಕಾಲಿಕ ಗಾಳಿ ಮಳೆ ಬೆಳೆ ಹಾನಿ ಹೆಕ್ಟೆರ್ ತೋಟಕ್ಕೆ 1ಲಕ್ಷ ರೂ. ಪರಿಹಾರ ಘೋಷಿಸಿ: ಬಿವೈಆರ್

April 30, 2026
ಸಿಇಟಿ ಪರೀಕ್ಷೆ ವೇಳೆ ಜನಿವಾರ, ಹಿಜಾಬ್ ವಿಚಾರ | ನಾಲ್ಕು ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ಘೋಷಣೆ

ಸಿಇಟಿ ಪರೀಕ್ಷೆ ವೇಳೆ ಜನಿವಾರ, ಹಿಜಾಬ್ ವಿಚಾರ | ನಾಲ್ಕು ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ಘೋಷಣೆ

April 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL