ಕಲ್ಪ ಮೀಡಿಯಾ ಹೌಸ್ | ರಾಯ್’ಗರ್ (ಛತ್ತೀಸ್’ಗಢ) |
ಕರುವೊಂದಕ್ಕೆ ಡಿಕ್ಕಿ #Collide with Calf ಹೊಡೆದ ಕಾರನ್ನು ಆಕಳುಗಳು #Cow ಬೆನ್ನಟ್ಟಿ ನಿಲ್ಲಿಸಿದ ಕುತೂಹಲಕಾರಿ ಹಾಗೂ ಸಿನಿಮೀಯ ಶೈಲಿಯ ಘಟನೆ ಛತ್ತಿಸ್’ಗಢ ರಾಜ್ಯದ ರಾಯ್’ಗರ್ ಎಂಬಲ್ಲಿ ನಡೆದಿದೆ.
ರಾಯ್’ಗರ್ ಸ್ಟೇಷನ್ ಚೌಕ್ ಬಳಿ ವೇಗವಾಗಿ ಆಗಮಿಸಿದ ಕಾರೊಂದು, ರಸ್ತೆಯಲ್ಲಿದ್ದ ಕರುವಿಗೆ ಡಿಕ್ಕಿ ಹೊಡೆದಿತ್ತು. ಕಾರಿನಡಿ ಕರು ಸಿಲುಕಿದ್ದರೂ ಚಾಲಕ ಕಾರನ್ನು ನಿಲ್ಲಿಸದೆ ಮುಂದೆ ಚಲಾಯಿಸಿದ್ದ. ಕಾರಿನಡಿ ಕರು ಸಿಲುಕಿ ಬಿದ್ದಿರುವುದನ್ನು ಗಮನಿಸಿದ ಅದರ ತಾಯಿ ಹಾಗೂ ಇತರೆ ಆಕಳುಗಳು, ಕಾರನ್ನು ಬೆನ್ನಟ್ಟಿ ಬಂದಿವೆ. ಆಕಳುಗಳು ಬರುತ್ತಿರುವುದನ್ನು ಗಮನಿಸಿದ ಚಾಲಕ ಕಾರನ್ನು ನಿಲ್ಲಿಸಿದ್ದಾನೆ. ಆಕಳುಗಳು ಕಾರನ್ನು ಸುತ್ತುವರಿದು ನಿಂತಿವೆ. ಆಕಳುಗಳು ಕರುವಿಗಾಗಿ ಕಾರಿನ ಸುತ್ತ ಓಡಾಡಲಾರಂಭಿಸಿದೆ.
Also read: ಸೊರಬ | ಲಂಚ ಪಡೆಯುತ್ತಿದ್ದ ಗ್ರಾಪಂ ಪಿಡಿಓ ಲೋಕಾಯುಕ್ತ ಬಲೆಗೆ

ಸದರಿ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು,, ನೆಟ್ಟಿಗರ ಗಮನ ಸೆಳೆದಿದೆ. ಜೊತೆಗೆ ವ್ಯಾಪಕ ಮೆಚ್ಚುಗೆ, ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಆದರೆ ಸದರಿ ಘಟನೆ ನಡೆದಿದ್ದು ಯಾವಾಗ? ಎಂಬುವುದರ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post