ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರೈಲು ಪ್ರಯಾಣವನ್ನು ಹೆಚ್ಚು ಅನುಕೂಲಕರ, ಪರಿಣಾಮಕಾರಿ ಮತ್ತು ಪ್ರಯಾಣಿಕ ಸ್ನೇಹಿಯಾಗಿಸಲು, ಭಾರತೀಯ ರೈಲ್ವೆಯು ರೈಲ್‌ಒನ್ ಮೊಬೈಲ್ ಅಪ್ಲಿಕೇಷನ್ ಅನ್ನು ಪ್ರಾರಂಭಿಸಿದೆ. ಇದು ಎಲ್ಲಾ ರೈಲ್ವೆ ಸೇವೆಗಳನ್ನು ಒಂದೇ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಸಂಯೋಜಿಸುವ ಸಮಗ್ರ ಆಲ್-ಇನ್-ಒನ್ ಮೊಬೈಲ್ ಅಪ್ಲಿಕೇಶನ್ ಆಗಿದೆ.
ಪ್ರಯಾಣಿಕರು ಈ ರೈಲ್ ಒನ್ ಮೊಬೈಲ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗವು ಮನವಿ ಮಾಡುತ್ತದೆ. ದೀರ್ಘ ಅಥವಾ ದೈನಂದಿನ ಪ್ರಯಾಣವನ್ನು ಸರಳಗೊಳಿಸುವ ನಿಟ್ಟಿನಲ್ಲಿ ರೈಲ್‌ಒನ್ ಮೊಬೈಲ್ ಅಪ್ಲಿಕೇಷನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಏಕೀಕೃತ ಅಪ್ಲಿಕೇಷನ್ IRCTC ರೈಲ್ ಕನೆಕ್ಟ್, ಯುಟಿಎಸ್ ಆನ್ ಮೊಬೈಲ್, NTES, ರೈಲ್ ಮದದ್ ಮತ್ತು ಫುಡ್ ಟ್ರ್ಯಾಕ್ ನಂತಹ ಮೊಬೈಲ್ ಅಪ್ಲಿಕೇಷನ್‌ಗಳ ವೈಶಿಷ್ಟ್ಯಗಳನ್ನು ಒಟ್ಟುಗೂಡಿಸಿ ಬಿಡುಗಡೆಗೊಳಿಸಲಾಗಿದೆ.
ರೈಲ್‌ಒನ್ ಅಪ್ಲಿಕೇಷನ್ ಮೂಲಕ  ಪ್ರಯಾಣಿಕರು ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ಟಿಕೆಟ್‌ಗಳ ಬುಕ್ಕಿಂಗ್ , ರೈಲಿನ ಲೈವ್ ಟ್ರ್ಯಾಕಿಂಗ್, ಪಿಎನ್‌ಆರ್ ಪರಿಶೀಲನೆ, ಕೋಚ್ ಸ್ಥಾನಗಳ ಮಾಹಿತಿ, ಆಹಾರ ಆರ್ಡರ್, ದೂರುಗಳ ನೋಂದಣಿ, ಟಿಕೇಟ್  ಮರುಪಾವತಿ ಮುಂತಾದವುಗಳನ್ನು ನಿರ್ವಹಿಸಬಹುದು.

ಭಾರತೀಯ ರೈಲ್ವೆಯ ಆಂತರಿಕ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಆರ್ ವ್ಯಾಲೆಟ್ ನೊಂದಿಗೆ ರೈಲ್‌ಒನ್‌ನ ಅಪ್ಲಿಕೇಷನ್ ಮೂಲಕ ಮೂಲಕ ಬುಕ್ ಮಾಡಿದ ಕಾಯ್ದಿರಿಸದ ಟಿಕೆಟ್‌ಗಳ ಮೇಲೆ 3% ರಿಯಾಯಿತಿ ದೊರೆಯಲಿದ್ದು, ಬಯೋಮೆಟ್ರಿಕ್ ಅಥವಾ mPIN ಮೂಲಕ ಪಾವತಿಗಳನ್ನು ದೃಢೀಕರಿಸಬಹುದು.
ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ಎರಡರಲ್ಲೂ ರೈಲ್ ಒನ್ ಮೊಬೈಲ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಲು ಲಭ್ಯವಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
 
	    	







 Loading ...
 Loading ... 
							



 
                
Discussion about this post