ಕಲ್ಪ ಮೀಡಿಯಾ ಹೌಸ್ | ಅರಸೀಕೆರೆ |
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ದಕ್ಷಿಣ ಮಧ್ಯ ರೈಲ್ವೆಯು ಸಿಕಂದರಾಬಾದ್ – ಅರಸೀಕೆರೆ ಮತ್ತು ಹೈದರಾಬಾದ್ – ಅರಸೀಕೆರೆ ನಡುವೆ ಸಾಪ್ತಾಹಿಕ ವಿಶೇಷ ರೈಲುಗಳನ್ನು ಓಡಿಸಲಿದೆ. ವಿವರಗಳು ಈ ಕೆಳಗಿನಂತಿವೆ:
ರೈಲು ಸಂಖ್ಯೆ 07079 ಸಿಕಂದರಾಬಾದ್ – ಅರಸೀಕೆರೆ ವಿಶೇಷ ರೈಲು ದಿನಾಂಕ 13.07.2025 ರಿಂದ 31.08.2025 ರವರೆಗೆ ಪ್ರತಿ ಭಾನುವಾರದಂದು (ಎಂಟು ಟ್ರಿಪ್‌ಗಳು ಮಾತ್ರ) ಸಾಯಂಕಾಲ 06:05 ಗಂಟೆಗೆ ಸಿಕಂದರಾಬಾದ್‌ನಿಂದ ಹೊರಟು ಮರುದಿನ (ಸೋಮವಾರ) ಮಧ್ಯಾಹ್ನ 12:45 ಗಂಟೆಗೆ ಅರಸೀಕೆರೆ ತಲುಪಲಿದೆ.
ರೈಲು ಸಂಖ್ಯೆ 07080 ಅರಸೀಕೆರೆ-ಸಿಕಂದರಾಬಾದ್ ವಿಶೇಷ ರೈಲು ದಿನಾಂಕ 14.07.2025 ರಿಂದ 01.09.2025 ರವರೆಗೆ ಪ್ರತಿ ಸೋಮವಾರದಂದು (ಎಂಟು ಟ್ರಿಪ್‌ಗಳು ಮಾತ್ರ) ಮಧ್ಯಾಹ್ನ 2 ಗಂಟೆಗೆ ಅರಸೀಕೆರೆಯಿಂದ ಹೊರಟು ಮರುದಿನ (ಮಂಗಳವಾರ) ಬೆಳಿಗ್ಗೆ 07:45 ಗಂಟೆಗೆ ಸಿಕಂದರಾಬಾದ್ ತಲುಪಲಿದೆ.

ಈ ರೈಲುಗಳು ಎರಡು ಎ.ಸಿ. 2- ಟೈರ್, ಆರು ಎ.ಸಿ. 3-ಟೈರ್, ಏಳು ಸ್ಲೀಪರ್ ಕ್ಲಾಸ್, ನಾಲ್ಕು ಜನರಲ್ ಸೆಕೆಂಡ್ ಕ್ಲಾಸ್, ಒಂದು ಲಗೇಜ್ ಕಮ್ ಜನರೇಟರ್ ಕಾರ್ ಮತ್ತು ಒಂದು ಎಸ್.ಎಲ್.ಆರ್.ಡಿ. ಬೋಗಿಗಳನ್ನು ಹೊಂದಿರಲಿದೆ.
ರೈಲು ಸಂಖ್ಯೆ. 07069 ಹೈದರಾಬಾದ್ – ಅರಸೀಕೆರೆ ವಿಶೇಷ ರೈಲು ದಿನಾಂಕ 08.07.2025 ರಿಂದ 26.08.2025 ರವರೆಗೆ ಪ್ರತಿ ಮಂಗಳವಾರದಂದು (ಎಂಟು ಟ್ರಿಪ್‌ಗಳು ಮಾತ್ರ) ಹೈದರಾಬಾದ್‌ನಿಂದ ರಾತ್ರಿ 07:20 ಗಂಟೆಗೆ ಹೊರಟು ಮರುದಿನ (ಬುಧವಾರ) ಮಧ್ಯಾಹ್ನ 12:45 ಗಂಟೆಗೆ ಅರಸೀಕೆರೆಯನ್ನು ತಲುಪಲಿದೆ.

ಈ ರೈಲುಗಳಿಗೆ ಸಿಕಂದರಾಬಾದ್, ಕಾಚಿಗೂಡ, ಉಮ್ದಾನಗರ, ಶಾದ್‌ನಗರ, ಜಡ್ಚೆರ್ಲಾ, ಮಹೆಬೂಬ್‌ನಗರ, ವನಪರ್ತಿ ರೋಡ್, ಗದ್ವಾಲ್, ಕರ್ನೂಲ್ ಸಿಟಿ, ಡೋನ್, ಅನಂತಪುರ, ಧರ್ಮಾವರಂ, ಹಿಂದೂಪುರ, ಯಲಹಂಕ ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆಯನ್ನು ಒದಗಿಸಲಾಗಿದೆ.
ಈ ರೈಲುಗಳು ನಾಲ್ಕು ಎಸಿ-2 ಟೈರ್, ಎಂಟು ಎ.ಸಿ. 3-ಟೈರ್, ಆರು ಸ್ಲೀಪರ್ ಕ್ಲಾಸ್, ಎರಡು ಜನರಲ್ ಸೆಕೆಂಡ್ ಕ್ಲಾಸ್, ಒಂದು ಲಗೇಜ್ ಕಮ್ ಜನರೇಟರ್ ಕಾರ್ ಮತ್ತು ಒಂದು ಎಸ್.ಎಲ್.ಆರ್.ಡಿ. ಬೋಗಿಗಳನ್ನು ಹೊಂದಿರಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post