ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಲವು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಮಲೆನಾಡು #Malnad ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಆರಂಭವಾಗಿದ್ದು, ಆಗಸ್ಟ್ 31ರವರೆಗೂ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ #YellowAlert ಘೋಷಣೆ ಮಾಡಲಾಗಿದೆ.
ಈ ಕುರಿತಂತೆ ಹವಾಮಾನ ಇಲಾಖೆ ಮಾಹಿತಿ ಪ್ರಕಟಿಸಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 2ರವರೆಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಇನ್ನು, ಶಿವಮೊಗ್ಗ #Shivamogga ಹಾಗೂ ಚಿಕ್ಕಮಗಳೂರು #Chikkamagaluru ಜಿಲ್ಲೆಯಲ್ಲಿ ಆಗಸ್ಟ್ 30ರವರೆಗೂ ಆರೆಂಜ್ ಹಾಗೂ ಆಗಸ್ಟ್ 31ರಂದು ಯೆಲ್ಲೋ ಅಲರ್ಟ್, ಕೊಡಗು ಜಿಲ್ಲೆಯಲ್ಲಿ ಇಂದು ಹಾಗೂ ನಾಳೆ ಆರೆಂಜ್ ಮತ್ತು ಆಗಸ್ಟ್ 29-30ರಂದು ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ.
ಹಾಸನ #Hassan ಜಿಲ್ಲೆಯಲ್ಲಿ ಆಗಸ್ಟ್ 29-30ರಂದು ಆರೆಂರ್ಜ್, ಬೆಳಗಾವಿಯಲ್ಲಿ ಆಗಸ್ಟ್ 29ರವರೆಗೂ ಯೆಲ್ಲೋ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿಯಲ್ಲಿ ಆಗಸ್ಟ್ 30-31ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post