ಕಲ್ಪ ಮೀಡಿಯಾ ಹೌಸ್ | ರಾಯ್ಪುರ್ |
ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಹತ್ತು ಮಾವೋವಾದಿಗಳು #Naxal encounter ಹತ್ಯೆಗೀಡಾಗಿರುವ ಘಟನೆ ಛತ್ತೀಸ್ಗಢದ ಕೊಂಟಾದಲ್ಲಿ ನಡೆದಿದೆ.
ಮುಂಜಾನೆ ಭೇಜ್ಜಿ ಪ್ರದೇಶದಲ್ಲಿ ಎನ್ಕೌಂಟರ್ ನಡೆದಿದ್ದು, ನಕ್ಸಲರು ಒಡಿಶಾ ಮೂಲಕ ಛತ್ತೀಸ್ಗಢ ಪ್ರವೇಶಿಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ಜಿಲ್ಲಾ ಮೀಸಲು ಪಡೆ (ಡಿಆರ್ಜಿ) ಕಾರ್ಯಾಚರಣೆ ನಡೆಸಿದೆ. ಈ ವೇಳೆ 10 ನಕ್ಸಲರು ಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದಾರೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್ ತಿಳಿಸಿದ್ದಾರೆ.
Also read: ಮಕ್ಕಳ ಮೇಲೆ ಕೈ ಮಾಡುವ ಮುನ್ನ ಯೋಚಿಸಿ | ವ್ಯಕ್ತಿಯ ತಮಾಷೆ ಬಲಿ ಪಡೆಯಿತು ಕಂದಮ್ಮನ ಜೀವ
ಕಾರ್ಯಾಚರಣೆ ನಡೆದ ಸ್ಥಳದಲ್ಲಿ ಭದ್ರತಾ ಪಡೆಗಳು ಮೂರು ಸ್ವಯಂಚಾಲಿತ ಬಂದೂಕುಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ. ಕಾರ್ಯಾಚರಣೆ ವೇಳೆ ಗಾಯಗೊಂಡವರ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post