Read - < 1 minute
ನವದೆಹಲಿ: ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ನಿಧನರಾದ ಹಿನ್ನೆಲೆಯಲ್ಲಿ ಅವರ ಗೌರವಾರ್ಥ ಸಂಸತ್ ಉಭಯ ಸದನಗಳ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
ಇಂದು ಕಲಾಪ ಆರಂಭವಾದ ನಂತರ ಕರುಣಾನಿಧಿ ಅವರ ನಿಧನದ ವಿಚಾರವನ್ನು ಪ್ರಸ್ತಾಪ ಮಾಡಿ, ಮೌನಾಚರಣೆ ಮಾಡಲಾಯಿತು. ಅವರ ಗೌರವಾರ್ಥ ಉಭಯ ಕಲಾಪಗಳನ್ನು ನಾಳೆಗೆ ಮುಂದೂಡಲಾಯಿತು.
ವಯೋ ಸಹಜ ಅಸ್ವಸ್ಥತೆ ಹಾಗೂ ಅನಾರೋಗ್ಯದಿಂದ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಕರುಣಾನಿಧಿ ನಿನ್ನೆ ಸಂಜೆ ಕೊನೆಯುಸಿರೆಳಿದ್ದಾರೆ.
Discussion about this post