ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣಾ #RajyasabhaElection ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್’ನ #Congress ಮೂವರು ಹಾಗೂ ಬಿಜೆಪಿಯ #BJP ಒಬ್ಬರು ಜಯಗಳಿಸಿದ್ದಾರೆ. ಈ ಮೂಲಕ ಮೈತ್ರಿಗೆ ಮುಖಭಂಗವಾಗಿದೆ.
ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್’ನ ಮೂವರು ಹಾಗೂ ಬಿಜೆಪಿಯ ಒಬ್ಬರು ಗೆಲವು ಸಾಧಿಸಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಐದನೇ ಅಭ್ಯರ್ಥಿಯಾಗಿದ್ದ ಕುಪೇಂದ್ರ ರೆಡ್ಡಿ ಸೋತಿದ್ದಾರೆ.
ಯಾರಿಗೆಲ್ಲಾ ಗೆಲುವು?
- ಅಜಯ್ ಮಕೇನ್: ಕಾಂಗ್ರೆಸ್-47 ಮತಗಳು
- ನಾಸಿರ್ ಹುಸೇನ್: ಕಾಂಗ್ರೆಸ್-47 ಮತಗಳು
- ಜಿ.ಸಿ. ಚಂದ್ರಶೇಖರ್: ಕಾಂಗ್ರೆಸ್-45 ಮತಗಳು
- ನಾರಾಯಣಸಾ ಭಾಂಡ: ಬಿಜೆಪಿ-47 ಮತಗಳು
ಮೈತ್ರಿ ಪಕ್ಷದಿಂದ 5ನೇ ಅಭ್ಯರ್ಥಿಯಾಗಿದ್ದ ಕುಪೇಂದ್ರ ರೆಡ್ಡಿ ಅವರಿಗೆ 38 ಮತಗಳು ಬಿದ್ದಿವೆ. ಜೆಡಿಎಸ್’ನಿಂದ 19 ಹಾಗೂ ಬಿಜೆಪಿಯಿಂದ 16 ಮತಗಳು ಇವರಿಗೆ ದೊರೆತಿವೆ.
ರಾಜ್ಯಸಭೆ ಚುನಾವಣೆಯಲ್ಲಿ ಶೇ.99.5ರಷ್ಟು ಮತದಾನವಾಗಿದ್ದು, ಒಟ್ಟು 223 ಮತಗಳ ಪೈಕಿ 222 ಶಾಸಕರು ತಮ್ಮ ಮತದಾನ ಮಾಡಿದ್ದಾರೆ.
ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಮತದಾನಕ್ಕೆ ಗೈರಾಗಿದ್ದಾರೆ. ಕಾಂಗ್ರೆಸ್ ಪಕ್ಷದ 135 ಶಾಸಕರು, ಮೂವರು ಪಕ್ಷೇತರ ಶಾಸಕರು, ಬಿಜೆಪಿಯ 65 ಶಾಸಕರು, ಜೆಡಿಎಸ್’ನ 19 ಶಾಸಕರು ಸಹ ಮತದಾನ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post