ಕಲ್ಪ ಮೀಡಿಯಾ ಹೌಸ್
ರಾಮನಗರ: ರಾಮನಗರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜಯಭೇರಿ ಸಾಧಿಸಿದೆ.
ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿಸಿಎಂ ಅಶ್ವಥ್ ನಾರಾಯಣ್ ಅಬ್ಬರದ ಪ್ರಚಾರ ನಡುವೆಯೂ ರಾಮನಗರ ನಗರಸಭೆಯ ಚುನಾವಣೆಯಲ್ಲಿ ಒಟ್ಟಾರೆ 31 ವಾರ್ಡ್‌ಗಳ ಪೈಕಿ ಕಾಂಗ್ರೆಸ್-19, ಜೆಡಿಎಸ್-11, ಪಕ್ಷೇತರ-1 ವಾರ್ಡ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಧೂಳೀಪಟವಾಗಿದೆ.
ಗೆಲುವು ಸಂಭ್ರಮಿಸಲು ಅಭ್ಯರ್ಥಿಯೇ ಇಲ್ಲ:
ನಗರಸಭೆಯ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ ವಿಪರ್ಯಾಸವೆಂದರೆ ಗೆಲುವಿನ ಸಂಭ್ರಮಾಚರಣೆ ಮಾಡಲು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ.
ಹೌದು, ನಿನ್ನೆ ಕಾಂಗ್ರೆಸ್ ಅಭ್ಯರ್ಥಿ ಲೀಲಾ ಗೋವಿಂದರಾಜು ಕೊರೋನಾಗೆ ಬಲಿಯಾಗಿದ್ದರು. ಇಂದು ಮತ ಎಣಿಕೆ ನಡೆದು ಲೀಲಾ ಗೋವಿಂದರಾಜು ಗೆಲುವು ಸಾಧಿಸಿದ್ದಾರೆ. ಆದರೆ ಚುನಾವಣೆಯ ಗೆಲುವನ್ನು ಸಂಭ್ರಮಿಸಬೇಕಾದ ಅಭ್ಯರ್ಥಿಯೇ ಇಲ್ಲದಿರುವುದು ವಿಷಾದದ ಸಂಗತಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post