ಬೆಂಗಳೂರು: ಪ್ರಧಾನಿಯವರನ್ನು ಕಳ್ಳ(ಚೋರ್) ಎಂದು ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾದ ನಂತರವೂ ಸಹ ಮಾಜಿ ನಟಿ, ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ಮತ್ತೆ ಪ್ರಧಾನಿಯವರನ್ನು ಚೋರ್ ಎಂದು ಟ್ವೀಟ್ ಮಾಡಿದ್ದಾರೆ.
ನನ್ನ ಟ್ವೀಟನ್ನು ಇಷ್ಟಪಡದವರಿಗೆ ನನ್ನ ಧನ್ಯವಾದಗಳು. ಇಂತಹವರಿಗೆ ನಾನು ಏನು ಹೇಳುವುದು ಸಾಧ್ಯ. ಭಾರತದಿಂದ ದೇಶದ್ರೋಹದ ಕಾನೂನನ್ನು ದೂರಿವಿರಸಬೇಕು. ಪುರಾತನ ಕಾಲದಿಂದಲೂ ಸಹ ಇದರ ದುರುಪಯೋಗ ನಿರಂತರವಾಗಿ ನಡೆಯುತ್ತಲೇ ಇದೆ ಎಂದು ಟ್ವೀಟ್ ಮಾಡಿ ಕೊನೆಯಲ್ಲಿ ಪಿಎಂಚೋರ್‌ಹೈ ಎಂದು ನಮೂದಿಸಿದ್ದಾರೆ.
Thank you guys for extending your support and for those who didn’t like the tweet, well, what can I say? Will keep it ‘classy’ next time 😊
India should do away with the sedition law, it’s archaic and misused.
To the folks who filed the FIR- #PMChorHai 🤭😀— Divya Spandana/Ramya (@divyaspandana) September 26, 2018
ದೇಶದ ಪ್ರಧಾನಿಯವರ ವಿರುದ್ಧ ಇಂತಹ ಕೃತ್ಯವನ್ನು ಮುಂದುವರೆಸಿರುವ ರಮ್ಯಾ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಇನ್ನು, ರಫೇಲ್ ಒಪ್ಪಂದ ವಿವಾದಕ್ಕೆ ಸಂಬಂಧಿಸಿ ರವ್ಯಾ ಪ್ರಧಾನಿ ಮೋದಿ ಅವರನ್ನು ಟೀಕಿಸಿ ರವ್ಯಾ ಮಾಡಿದ ಟ್ವೀಟ್ ಮಾಡಿದ್ದರು. ಈ ಟ್ವೀಟ್ ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಮೋದಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ತೀವ್ರ ಕಿಡಿ ಕಾರಿದ್ದರು.
ಇದರ ಬೆನ್ನಲ್ಲೇ, ಲಕ್ನೋ ಮೂಲದ ಸಾಮಾಜಿಕ ಕಾರ್ಯಕರ್ತ ಸೈಯ್ಯದ್ ಎನ್ನುವವರು ಗೋಮತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಸೆಕ್ಷನ್ 67 ಮಾಹಿತಿ ತಂತ್ರಜ್ಞಾನ ತಿದ್ದುಪಡಿ ಕಾಯ್ದೆ, 2008 ಮತ್ತು ಸೆಕ್ಷನ್ 124ಎ ಅಡಿ ಎಫ್‌ಐಆರ್ ದಾಖಲಿಸಿದ್ದಾರೆ.






Discussion about this post