ಕೊಡಗು: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದನಂತೆ ಎನ್ನುವುದನ್ನು ಇಂಹತವನ್ನು ನೋಡಿಯೇ ಮಾಡಿರಬೇಕು…
ಹೌದು… ಕೇವಲ ಜಸ್‌ಟ್ ಪಾಸಾಗಿ, ಅಪವಿತ್ರ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದು ಮಂತ್ರಿಯಾದವರಿಗೇನು ಗೊತ್ತು ಜನರ ಸ್ವಾಭಿಮಾನ.. ಅದರಲ್ಲೂ ಕೊಡಗಿನ ಜನರನ್ನು ನೀವು ಏನೆಂದುಕೊಂಡಿದ್ದೀರಿ..
ಪ್ರವಾಹದಿಂದ ಕಂಗೆಟ್ಟು, ನೆಲೆ ಕಳೆದುಕೊಂಡು ಪರಿತಪಿಸುತ್ತಿರುವ ಜನರ ಕಣ್ಣೀರು ಒರೆಸಿ, ಅವರಿಗೆ ಹೆಗಲು ಕೊಡಬೇಕಾದ ಸ್ಥಾನದಲ್ಲಿ ಕುಳಿತು ನೀವು ಮಾಡಿದ್ದೇನು ರೇವಣ್ಣನವರೇ?
ಸಂತ್ರಸ್ತರಾಗಿರಬಹುದು ಕನ್ನಡಿಗರು, ಆದರೆ ಎಂದಿಗೂ ಸ್ವಾಭಿಮಾನ ಬಿಟ್ಟು ಬದುಕಿದವರಲ್ಲಿ ನಮ್ಮ ಜನ. ಅಂತಹ ಜನಕ್ಕೆ ರಾಮನಾಥ ಪುರ ಪ್ರವಾಹ ನಿರಾಶ್ರಿತರ ಕ್ಯಾಂಪ್‌ನಲ್ಲಿ ನಾಯಿಗಳಿಗೆ ಎಸೆದಂತೆ ಬಿಸ್ಕೆಟ್ ಎಸೆಯುತ್ತೀರಾ ನಮ್ಮ ಜನಕ್ಕೆ? ನಿಮ್ಮನ್ನು ನೀವು ಏನೆಂದುಕೊಂಡಿದ್ದೀರಿ? ನಮ್ಮ ಜನರನ್ನು ನೀವು ಏನು ಎಂದುಕೊಂಡಿದ್ದೀರಿ?
We as citizens of Karnataka had to stand in solidarity with victims of flood disaster & show compassion,! but look how district incharge minister of Hassan Mr Revanna throws biscuits at the victims displaying sheer arrogance. He needs to first learn to respect human sentiments. pic.twitter.com/KkNmDtJnHK
— Balaji Srinivas (@BuzzInBengaluru) August 20, 2018
ಕೊಡಗು ಹಾಗೂ ಸುತ್ತಮುತ್ತಲ ಮಂದಿ ಈ ದೇಶಕ್ಕಾಗಿ ನಿರಂತರವಾಗಿ ಹೋರಾಡುತ್ತಾ ಬಂದಿರುವವರು. ಆ ಭಾಗದ ಬಹುತೇಕ ಜನರು ಸೇನೆಯಲ್ಲಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ನಮ್ಮನ್ನು ಕಾಯುತ್ತಿರುವವರು. ಇಂತಹ ಜನರಿಗೆ ನೀವು ನಾಯಿಗಳಿಗೆ ಎಸೆದಂತೆ ಬಿಸ್ಕಟ್ ಪ್ಯಾಕ್ ಎಸೆಯುತ್ತೀರಲ್ಲ, ನಿಮಗೆ ಮನುಷ್ಯತ್ವ ಇದೆಯೇನ್ರಿ.
ನಿಮ್ಮ ದುರಹಂಕಾರ, ನಿಮ್ಮ ದಾರ್ಷ್ಟ್ಯ ಇದ್ದರೆ ಅದನ್ನು ನಿಮ್ಮ ಮನೆಯಲ್ಲಿಟ್ಟುಕೊಳ್ಳಿ. ಅದರ ಬದಲಾಗಿ ಜನರ ಮುಂದೆ ತೋರಿಸಲು ಬರಬೇಡಿ. ನೀವೇನು ಸರ್ವಾಧಿಕಾರಿಯಲ್ಲ. ಜನರಿಂದ ಆಯ್ಕೆಯಾದ ಪ್ರಜಾ ಸೇವಕರಷ್ಟೇ.
ಇಷ್ಟಕ್ಕೂ ನೀವು ಎಸೆದಿರುವ ಬಿಸ್ಕೆಟ್ ಯಾವನಿಗೆ ಬೇಕ್ರಿ.. ನಮ್ಮ ಕರುನಾಡಿನ ಮಂದಿ ಒಗ್ಗಟ್ಟಾಗಿ ನಿಂತು ಕೊಡಗಿನ ಸಹೋದರರಿಗೆ ಸಹಾಯ ಮಾಡುತ್ತಿದ್ದಾರೆ. ಚಿತ್ರನಟರಿಂದ ಹಿಡಿದು, ಚಪ್ಪಲಿ ಹೊಲೆಯುವ ಬಡವ ಸಹ ತನ್ನ ಕೈಯಲ್ಲಾದಷ್ಟು ಸಹಾಯ ಮಾಡಿ, ನಮ್ಮ ಸಹೋದರಗೆ ತಲುಪಿಸಿ ಎಂದು ಕೋರುತ್ತಿದ್ದಾರೆ. ಅದೂ ಎಷ್ಟು?
ಕೋಟಿಗಟ್ಟಲೆ ಬೆಲೆ ಬಾಳುವ ಆಹಾರ, ಬಟ್ಟೆ, ಅಗತ್ಯ ವಸ್ತುಗಳು, ಹಣ ಸೇರಿದಂತೆ ನಮ್ಮ ಸಹೋದರರಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ನಮ್ಮ ಜನ ನೀಡುತ್ತಿದ್ದಾರೆ. ಅದೂ ಅಲ್ಲಿಗೆ ಹೆಚ್ಚಾಗಿ ಉಳಿಯುವಷ್ಟು. ನಮಗಿಷ್ಟು ಸಾಕು, ಕಳುಹಿಸಬೇಡಿ ಎಂದು ಅಲ್ಲಿನ ಮಂದಿಯೇ ಹೇಳುವಷ್ಟು.
ಕರುಣೆಯ ಬೀಡು ನಮ್ಮ ಕರುನಾಡು.. ಎಲ್ಲೆಂಲ್ಲಿಂದಲೋ ಬಂದವರನ್ನೆಲ್ಲಾ ತಾಯಿ ಭುವನೇಶ್ವರಿ ತನ್ನ ಮಡಿಲಲ್ಲಿ ಆಶ್ರಯ ನೀಡುತ್ತಿದ್ದಾಳೆ. ಯಾವುದೇ ಜಾತಿ, ಧರ್ಮ, ಭಾಷೆ ನೋಡದೇ ಕರುನಾಡಿಗರು ಬಂದವರಿಗೆಲ್ಲ ಆಶ್ರಯ ನೀಡಿ ಪ್ರೀತಿ ಧಾರೆಯೆರೆದ ರಾಜ್ಯ ನಮ್ಮದು.
ಇಂತಹ ರಾಜ್ಯದಲ್ಲಿ ಜನಿಸಿ, ಜನರಿಂದಲೇ ಮತ ಹಾಕಿಸಿಕೊಂಡ ನಿಮಗೆ ಬಹುಮತ ಬರದೇ ಇದ್ದರೂ ಸಹ ಅಪವಿತ್ರ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದ ನೀವು ಇಂದು ಮಾಡಿರುವುದೇನು ಸ್ವಾಮಿ? ನಾವು ಸಾಕಿರುವ ನಾಯಿಗೂ ಸಹ ಆ ರೀತಿ ಬಿಸ್ಕೆಟ್ ಎಸೆಯಬಾರದು ಎನ್ನುವಂತಹ ಮಮಕಾರವಿರುವ ರಾಜ್ಯ ನಮ್ಮದು. ಇಂತಹ ರಾಜ್ಯದಲ್ಲಿ ಹುಟ್ಟಿ ನೀವು ಮಾಡಿದ್ದೇನು?
ನಿಜವಾಗಲೂ ಜೀವನದಲ್ಲಿ ಕಷ್ಟಪಟ್ಟು ಬೆವರು ಸುರಿಸಿ ದುಡಿದಿದ್ದರೆ ಒಂದೊಂದು ರೂಪಾಯಿಗೂ, ತಿನ್ನುವ ಪ್ರತಿ ಆಹಾರದ ಬೆಲೆ ಗೊತ್ತಿರುತ್ತಿತ್ತು. ಹುಟ್ಟುತ್ತಲೇ ಶ್ರೀಮಂತಿಕೆ, ಮಾಜಿ ಪ್ರಧಾನಿಗಳ ಪುತ್ರ, ಕೋಟ್ಯಂತರ ರೂ ಬೆಲೆಬಾಳುವ ಆಸ್ತಿ… ಹೀಗಿದ್ದಾಗ ಬೆಲೆ ಹೇಗೆ ಗೊತ್ತಾಗುತ್ತದೆ.
ನಾವು ಕನ್ನಡಿಗರು, ಸ್ವಾಭಿಮಾನಿಗಳು, ಹಸಿದು ಸತ್ತರೂ ಸರಿ ದುರಹಂಕಾರದ ದಾನವನ್ನು ನಾವು ಸ್ವೀಕರಿಸುವುದಿಲ್ಲ. ಹೀಗಿರುವಾಗ ನಿಮ್ಮ ಈ ದಾಷ್ಟ್ಯ ನಿಮ್ಮ ಮನಃಸ್ಥಿತಿಯನ್ನು ತೋರಿಸಿದೆ.
ಚುನಾವಣೆಯಲ್ಲಿ 37 ಸ್ಥಾನ ಪಡೆದಿದ್ದರೂ, ಅಪವಿತ್ರ ಮೈತ್ರಿ ಮಾಡಿಕೊಂಡು, ಅಧಿಕಾರಕ್ಕೆ ಬರುವ ವೇಳೆ ನಿಮಗೆ ನಾಚಿಕೆ, ಸ್ವಾಭಿಮಾನವಿಲ್ಲದೇ ಇದ್ದಿರಬಹುದ. ಆದರೆ, ಕರುನಾಡಿನ ಜನರಿಗೆ ಇದೆ ಎನ್ನುವುದನ್ನು ಮರೆಯದಿರಿ.
ಅಂತಿಮವಾಗಿಯಿಷ್ಟೇ ರೇವಣ್ಣನವರೇ, ನಿಮಗೆ ನಿಜಕ್ಕೂ ನೈತಿಕತೆಯಿದ್ದರೆ, ನಿಮಗೆ ನಿಜಕ್ಕೂ ಬಡವರ ಪರ ಕಾಳಜಿಯಿದ್ದರೆ, ಕನ್ನಡಿಗರ ಕುರಿತು ಗೌರವವಿದ್ದರೆ ತತಕ್ಷಣವೇ ರಾಜ್ಯದ ಮುಂದೆ ಬಹಿರಂಗ ಕ್ಷಮೆ ಕೇಳಿ… ಇಲ್ಲವೇ ಹೋದಲ್ಲಿ ರಾಜ್ಯದ ಜನರ ಶಾಪ ನಿಮ್ಮ ಬೆನ್ನು ಹತ್ತದೇ ಬಿಡುವುದಿಲ್ಲ ನೆನಪಿಡಿ.
#ಕ್ಷಮೆಕೇಳಿರೇವಣ್ಣ
Discussion about this post