ಬೆಂಗಳೂರು: ಮೊನ್ನೆಯಷ್ಟೆ ಕಲಿಯುಗ ಕಾಮಧೇನು, ಕಲ್ಪವೃಕ್ಷ, ನಂಬಿದವರ ಕರುಣಾಸಿಂಧು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳು ಆರಾಧನಾ ಮಹೋತ್ಸವ ವಿಶ್ವದೆಲ್ಲೆಡೆ ಶ್ರದ್ಧಾ ಭಕ್ತಿಗಳಿಂದ ನಡೆದಿದೆ.
ಇದರ ನಡುವೆಯೇ, ರಾಯರ ಭಕ್ತರೊಬ್ಬರು ಕೈಬೆರಳುಗಳ ಸಹಾಯದಿಂದ ರೂಪಿಸಿರುವ ಬೃಂದಾವನದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ರಾಯರ ಭಕ್ತರೊಬ್ಬರು ಈ ವೀಡಿಯೋವನ್ನು ಟ್ವೀಟರ್’ನಲ್ಲಿ ಶೇರ್ ಮಾಡಿದ್ದು, ಒಟ್ಟು 52 ಸೆಕೆಂಡ್’ನ ಇದರಲ್ಲಿ ಕೈಬೆರಳುಗಳ ಸಹಾಯದಿಂದ ರಾಯರ ಬೃಂದಾವನವನ್ನು ರೂಪಿಸಲಾಗಿದೆ.
ವೀಡಿಯೋ ನೋಡಿ:
ಕೈ ಬೆರಳುಗಳ ಸಹಾಯದಿಂದ ರಾಯರ ಬೃಂದಾವನ ಬಿಡಿಸಿದ ಚಮತ್ಕಾರದ ಚಿತ್ರಣ..
ಓಂ ನಮೋ ಗುರು ರಾಘವೇಂದ್ರಾಯ🙏 @Jaggesh2 @27parims pic.twitter.com/VeuEWaU9Zo— Deepak srinivas (@dubonasrini) August 19, 2019
ಈ ವೀಡಿಯೋದಲ್ಲಿರುವ ಅಪ್ರತಿಮ ಕಲಾವಿದರು ಯಾರು ಎಂದು ತಿಳಿಯದೇ ಇದ್ದರೂ, ಕೈಬೆರಳುಗಳ ಸಹಾಯದಿಂದ ಮಾತ್ರವೇ ಈ ರೀತಿ ಬೃಂದಾವನ ರೂಪಿಸಿರುವ ಅವರ ಪ್ರತಿಭೆಗೆ ನಿಜಕ್ಕೂ ಹ್ಯಾಟ್ಸಾಫ್.







Discussion about this post