ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಂಡಿಯನ್ ಪ್ರೀಮಿಯರ್ ಲೀಗ್ 2025ರ #IPL2025 ಆರಂಭಕ್ಕೂ ಮುನ್ನ ಬೆಂಗಳೂರು ರಾಯಲ್ ಚಾಲೆಂಜರ‍್ಸ್ ಹೊಸ ಬ್ಯಾಟ್ಸ್ಮನ್’ಗಳ ಬ್ಯಾಟಿಂಗ್’ಗೆ ಬೌಲರ‍್ಸ್ ಬೆಚ್ಚಿ ಬಿದ್ದಿದ್ದು, ಈ ಬೆಳವಣಿಗೆ ಹೊಸ ಭರವಸೆಯನ್ನು ಹುಟ್ಟು ಹಾಕಿದೆ.
ಇಲ್ಲಿಯವರೆಗೂ ಆರ್’ಸಿಬಿ #RCB ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. ಆದರೆ, ಈಗಿನ ಭರವಸೆಯ ಈ ತಂಡವು ಐಪಿಎಲ್ 2025ರಲ್ಲಿ ಟ್ರೋಫಿ ಗೆಲ್ಲುವ ಅವಕಾಶ ಎದುರಾಗಿದೆ ಎಂದೇ ವಿಶ್ಲೇಷಣೆ ಮಾಡಲಾಗಿದೆ.
Also Read>> ಜೈಲಿನಿಂದ ಬಿಡುಗಡೆಯಾದ ನಂತರ ನಟ ದರ್ಶನ್ ಮೊದಲ ಪ್ರತಿಕ್ರಿಯೆ | ಏನೆಂದರು?
ಇದಕ್ಕೂ ಮೊದಲು, ಆರ್’ಸಿಬಿಯ ಹೊಸ ಬ್ಯಾಟ್ಸ್ಮನ್ ಜಾಕೋಬ್ ಬೆಥೆಲ್ ಬಿಗ್ ಬ್ಯಾಷ್ ಲೀಗ್ 2025 ರಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದರು.
ಐಪಿಎಲ್ 2025ರ ಹರಾಜಿನಲ್ಲಿ ಬೆಂಗಳೂರು ತಂಡಕ್ಕೆ ಸೇರ್ಪಡೆಗೊಂಡಿದ್ದರು. ಇಂದು, ಮೆಲ್ಬೋರ್ನ್ ರೆನೆಗೇಡ್ಸ್ ಹೋಬಾರ್ಟ್ ಹರಿಕೇನ್ಸ್ ನಡುವಿನ ಪಂದ್ಯದಲ್ಲಿ ಬೆಥೆಲ್ ಬಿರುಗಾಳಿಯ ಇನ್ನಿಂಗ್ಸ್ ಆಡುವ ಮೂಲಕ ಎಲ್ಲರ ಗಮನ ಸೆಳೆದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೆಲ್ಬೋರ್ನ್ ರೆನೆಗೇಡ್ಸ್ 7 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. ಈ ಸಮಯದಲ್ಲಿ, ಜಾಕೋಬ್ ಬೆಥೆಲ್ ರೆನೆಗೇಡ್ಸ್ ಪರ ಬಿರುಗಾಳಿಯ ಅರ್ಧಶತಕದ ಇನ್ನಿಂಗ್ಸ್ ಆಡಿದರು.
ಬೆಥೆಲ್ 50 ಎಸೆತಗಳನ್ನು ಎದುರಿಸಿ 8 ಬೌಂಡರಿ ಮತ್ತು 4 ಸಿಕ್ಸರ್’ಗಳ ಸಹಾಯದಿಂದ 174.00 ಸ್ಟ್ರೈಕ್ ರೇಟ್’ನಲ್ಲಿ 87 ರನ್ ಗಳಿಸಿದರು. ಬೆಥೆಲ್ ಕೇವಲ 13 ರನ್’ಗಳಿಂದ ಶತಕವನ್ನು ತಪ್ಪಿಸಿಕೊಂಡರು. ಮಿಚೆಲ್ ಓವನ್ ಅವರ ಎಸೆತದಲ್ಲಿ ಅವರು ರನೌಟ್ ಆಗಿ ಪೆವಿಲಿಯನ್’ಗೆ ಮರಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post