ನವದೆಹಲಿ: ಪ್ರಯಾಣಿಕ ಸ್ನೇಹಿಯಾಗಿರುವ ಮೆಟ್ರೋ ರೈಲಿನಲ್ಲಿ ಸೀಟು ಸಿಗಲಿಲ್ಲ ಎಂದು ನೆಲದ ಮೇಲೆಯೇ ಕುಳಿತುಕೊಳ್ಳುತ್ತೀರಾ? ಹಾಗಾದರೆ ನೀವು ಈ ಸುದ್ದಿ ಓದಲೇ ಬೇಕು.
ಕಳೆದ 11 ತಿಂಗಳ ಅವಧಿಯಲ್ಲಿ ದೆಹಲಿ ಮೆಟ್ರೋ ರೈಲಿನಲ್ಲಿ ಸೀಟು ಸಿಗದೇ ನೆಲದ ಮೇಲೆ ಕುಳಿತಿದ್ದ ಬರೋಬ್ಬರಿ 19,026 ಸಾವಿರ ಪ್ರಯಾಣಿಕರಿಗೆ ದಂಡ ವಿಧಿಸಿ ವಸೂಲಿ ಮಾಡಲಾದ ಒಟ್ಟು ಮೊತ್ತ 38 ಲಕ್ಷ ರೂ.ಗಳು..
ಈ ಕುರಿತಂತೆ ಆರ್‌ಟಿಐ ಕಾರ್ಯಕರ್ತರೊಬ್ಬರು ಪಡೆದಿರುವ ಮಾಹಿತಿಯಂತೆ, 11 ತಿಂಗಳ ಅವಧಿಯಲ್ಲಿ 51 ಸಾವಿರ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ.
ಇನ್ನು, ದೆಹಲಿ ಮೆಟ್ರೋ ರೈಲಿನಲ್ಲಿ ಕಸ ಹಾಕಿದ್ದು, ಉಪದ್ರವ ಸೃಷ್ಠಿಸಿದ್ದು, ಕಡಿಮೆ ಮೌಲ್ಯ ನೀಡಿ ವಂಚಿಸಿ ಪ್ರಯಾಣಿಸಿದ್ದು ಹಾಗೂ ಕರ್ತವ್ಯ ನಿರತ ಅಧಿಕಾರಿಗಳಿಗೆ ತೊಂದರೆ ಮಾಡಿದ ಪ್ರಕರಣಗಳಲ್ಲೂ ಸಹ ಬರೋಬ್ಬರಿ 51 ಸಾವಿರ ಮಂದಿಗೆ ದಂಡ ವಿಧಿಸಲಾಗಿದ್ದು, 2017ರ ಜೂನ್ ನಿಂದ 2018ರ ಮೇವರೆಗಿನ ಅವಧಿಯಲ್ಲಿ 90 ಲಕ್ಷ ರೂ.ಗಳನ್ನು ವಸೂಲಿ ಮಾಡಲಾಗಿದೆ.
ಈ 90 ಲಕ್ಷ ರೂ.ಗಳಲ್ಲಿ ಅತ್ಯಂತ ದೊಡ್ಡ ಮೊತ್ತ ರೈಲಿನಲ್ಲಿ ನೆಲದ ಮೇಲೆ ಕುಳಿತು ಪ್ರಯಾಣಿಸಿದ್ದಕ್ಕಾಗಿ ವಿಧಿಸಲಾದ 38 ಲಕ್ಷ ರೂ.ಗಳು.
Discussion about this post