ಭದ್ರಾವತಿ: ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ತನ್ನ ವ್ಯಾಪ್ತಿಯನ್ನು ಹೊಂದಿರುವ ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯದಿಂದ ಇಂದು ಮಧ್ಯಾಹ್ನ 12 ಗಂಟೆಯಿಂದ ನೀರು ಹೊರಬಿಡಲಾಗುತ್ತಿದೆ.
ಅಣೆಕಟ್ಟೆಯಲ್ಲಿ 183.3ಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಡ್ಯಾಂನಿಂದ ನೀರು ಹೊರಬಿಡಲು ನಿರ್ಧರಿಸಲಾಗಿದೆ. ಈ ಕುರಿತಂತೆ ಭದ್ರಾ ಡ್ಯಾಂ ಅಥಾರಿಟಿ ಅಧಿಕೃತ ಘೋಷಣೆ ಮಾಡಿದೆ.
Also Read: ಭದ್ರಾ ಡ್ಯಾಂ ತುಂಬಲು 2.7 ಅಡಿ ಮಾತ್ರ ಬಾಕಿ: ಭದ್ರಾವತಿ ಸೇತುವೆ ಈ ಬಾರಿ ಮುಳುಗುವುದೇ?
https://kalpa.news/bhadra-dam-to-fill-in-only-2-7-feet-bhadravati-bridge-will-sink-this-time/
ಅಣೆಕಟ್ಟೆಯಿಂದ ನೀರು ಹೊರಕ್ಕೆ ಬಿಡುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನತೆ ಎಚ್ಚರಿಕೆಯಿಂದ ಇರುವುದು ಸೂಕ್ತ. ನದಿ ಪ್ರದೇಶದಲ್ಲಿ ಇಳಿಯುವುದು, ಜಾನುವಾರುಗಳನ್ನು ಬಿಡುವುದು ಸೂಕ್ತವಲ್ಲ.
Discussion about this post