No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
  • Advertise With Us
  • Grievances
  • About Us
  • Contact Us
Wednesday, September 16, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಜನಪ್ರತಿನಿಧಿಗಳ ಅಧಿಕ ಪ್ರಸಂಗದ ಮಾತು ಅಭಿವೃದ್ಧಿಗೆ ಮಾರಕ: ಹೇಗೆ ಗೊತ್ತಾ?

ಯಾರು ಯಾರ ಬಗ್ಗೆ ವಾಗ್ಯುದ್ಧ ಮಾಡಬೇಕು ಎಂಬ ಪ್ರಜ್ಞೆ ಅಗತ್ಯ

kalpa News by kalpa News
August 26, 2019
in Army
0
ಜನಪ್ರತಿನಿಧಿಗಳ ಅಧಿಕ ಪ್ರಸಂಗದ ಮಾತು ಅಭಿವೃದ್ಧಿಗೆ ಮಾರಕ: ಹೇಗೆ ಗೊತ್ತಾ?
Share on FacebookShare on TwitterShare on WhatsApp

ದಿನ ನಿತ್ಯ ನೋಡುತ್ತೇವೆ. ಒಂದು ಪಕ್ಷವು ಇನ್ನೊಂದು ಪಕ್ಷವನ್ನು ಬೈಯುವುದು, ನಿಂದಿಸುವುದನ್ನು. ಮಾಡ್ಕೊಳ್ಳಿ ಬಿಡಿ. ಆದರೆ ಯಾರು ಮಾಡಬೇಕಾದದ್ದು ಎಂದು ಯೋಚಿಸಬೇಕು. ನಿನ್ನ ನಾಲಿಗೆ ಸೀಳ್ತೇನೆ, ಕೈ ಕಡ್ದಾಕಿ ಬಿಡ್ತೇನೆ ಎಂಬ ಡೈಲಾಗಿಗೆ ದರಿದ್ರ ಇಲ್ಲ. ಯಾರು ಇದನ್ನು ಹೇಳಬೇಕಾದವರು?

ಒಂದು ಕ್ಷೇತ್ರಕ್ಕೆ ಒಬ್ಬ ಜನಪ್ರತಿನಿಧಿ ಬೇಕೇಬೇಕು. ಇದು ಪ್ರಜಾಪ್ರಭುತ್ವದ ನಿಯಮ. ಇದು ಯಾವ ಪಕ್ಷದಿಂದಲೂ ಪ್ರತಿನಿಧಿಸುವ ಹಕ್ಕು ಇದೆ. ಅಂತಹ ಪ್ರತಿನಿಧಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕಾರವು ಕೇವಲ ಪ್ರಜೆಗಳಿಗೆ ಇರುತ್ತದೆ. ಆ ಆಯ್ಕೆಯಾದ ಪ್ರತಿನಿಧಿಯು ದೇಶಕ್ಕೆ ಒಂದು ನಿಗದಿತ(ಈಗ ಐದು ವರ್ಷ) ಅವಧಿಯವರೆಗೆ ಆ ಕ್ಷೇತ್ರಕ್ಕೆ ಅರ್ಪಣೆಯಾಗುತ್ತಾನೆ. ಯಾವಾಗ ಅರ್ಪಣೆ ಆಗುತ್ತಾನೋ ಅಂದಿನಿಂದ ಆ ಅವಧಿ ಪೂರ್ಣವಾಗುವವರೆಗೆ ಆ ಪ್ರತಿನಿಧಿಯು ಕೇವಲ ದೇಶದ, ಕ್ಷೇತ್ರದ ಅಭಿವೃದ್ಧಿಗೆ, ರಕ್ಷಣೆಗೆ ಮಾತ್ರ ಸೀಮಿತ ಆಗಿರುತ್ತಾನೆ.

ಪ್ರಮುಖವಾಗಿ ಈಗ ಆ ಪ್ರತಿನಿಧಿಯು ಪಕ್ಷಾತೀತವಾಗಿರಬೇಕು. ಅವರು ನನಗೆ ವಿರುದ್ದವಾಗಿದ್ದರು, ನನ್ನನ್ನು ಸೋಲಿಸಲು ಬಯಸಿದರು ಎಂಬ ಚಿಂತನೆ ಇರಬಾರದು. ನನ್ನ ಕೆಲಸ ಏನಿದೆಯೋ ಅದನ್ನು ಪಕ್ಷಾತೀತವಾಗಿ ಮಾಡಲೇಬೇಕು. ಇಲ್ಲಿ ಅವನ ಮನೆಯ ಸಂಸಾರವೂ ಕೂಡಾ ಸಮಾನವೇ ಆಗುತ್ತದೆಯೇ ಹೊರತು, ಮನೆಯ, ಸಂಸಾರದ ಪರವಾಗಿ ಕೆಲಸ ಮಾಡಬಾರದು. ಇದು ಪ್ರತಿನಿಧಿಗೆ ವಿಧಿಸಲ್ಪಟ್ಟ ಪ್ರಜಾತಾಂತ್ರಿಕ ನಿಯಮ. ಇದರ ಉಲ್ಲಂಘನೆ ಮಾಡಿದರೆ ಇದರಷ್ಟು ದೊಡ್ಡ ದ್ರೋಹ ಇನ್ನೊಂದಿಲ್ಲ. ಆದರೆ ಈಗ ಅನೇಕಾನೇಕ ಪ್ರತಿನಿಧಿಗಳು ಈ ನಿಯಮಕ್ಕೆ ಬದ್ಧವಾಗಿಲ್ಲ. ಹಳೆಯ ವೈಯಕ್ತಿಕ, ಪಕ್ಷದೊಳಗಿನ ದ್ವೇಷವನ್ನೇ ಪ್ರತಿನಿಧಿಯಾದ ಮೇಲೆ ಮುಂದುರೆಸುತ್ತಾರೆ. ಇಷ್ಟಕ್ಕೇ ಮುಗಿಯುವುದಿಲ್ಲ. ಬಾಯಿಗೆ ಬಂದಂತೆ ಬೈಯುತ್ತಾ, ತನ್ನ ಕರ್ತವ್ಯವನ್ನೇ ಮರೆತು, ಪ್ರಜೆಗಳಿಗೆ ಹಿಂಸೆಯಾಗುವ ತರಹ ನಡೆದುಕೊಳ್ಳುತ್ತಾರೆ.

ಪ್ರತೀ ಪಕ್ಷದಲ್ಲಿ ಕ್ಷೇತ್ರ ಕ್ಷೇತ್ರಕ್ಕೊಬ್ಬ ವಕ್ತಾರನನ್ನು ಇಟ್ಟಿರುತ್ತಾರೆ. ಆದರೆ ಅವನು ಮಾಡುವ ಕೆಲಸವನ್ನು ಪ್ರತಿನಿಧಿಗಳೇ ಮಾಡಲು ಹೋಗಿ, ತಾನು ಮಾಡುವ ಕೆಲಸವನ್ನು, ಮಾಡಬೇಕಾದ ಕೆಲಸವನ್ನು ಬಿಟ್ಟು ಬಿಡುತ್ತಾರೆ. ಪಕ್ಷ ಇರುವುದು ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಕ್ಕಾಗಿ. ತಾನು ಕಳುಹಿಸಿದ ಅಭ್ಯರ್ಥಿಯು ಚುನಾಯಿತ ಪ್ರತಿನಿಧಿ ಆದಮೇಲೆ, ಅವನಿಗೇನಾದರೂ ಇನ್ನೊಂದು ಪಕ್ಷವು ಅವಹೇಳನವೋ, ಹಿಂಸೆಯೋ ಮಾಡಿದಾಗ ಅವನ ಪಕ್ಷದ ಪದಾಧಿಕಾರಿಗಳು ಉತ್ತರಿಸಬೇಕೇ ಹೊರತು ಆ ಪ್ರತಿನಿಧಿಯು, ತನ್ನನ್ನು ಆರಿಸಿದ ಉದ್ದೇಶವನ್ನು ಮರೆತು ಅವನೇ ಕಾಳಗಕ್ಕಿಳಿದಾಗಲೇ ಅಭಿವೃದ್ಧಿ ಕುಂಠಿತವಾಗುವುದು. ಆತನಿಗೆ ಹಿಂಸೆಯಾದಾಗ, ಅವನು ಅವನ ಪಕ್ಷದ ಅಧ್ಯಕ್ಷರಿಗೆ, ’ಹೀಗೆ ತೊಂದರೆಯಾಗುತ್ತಿದೆ’ ಎಂದು ತಿಳಿಸಬೇಕು. ಆಗ ಪಕ್ಷವು ಯಾವುದಾದರೊಂದು ತೀರ್ಮಾನಕ್ಕೆ ಬರಲಿ. ಆದರೆ ಆ ಚುನಾಯಿತ ಪ್ರತಿನಿಧಿ ಕಾಳಗಕ್ಕಿಳಿದರೆ ಆ ಪ್ರತಿನಿಧಿತ್ವದ ಉದ್ದೇಶ ಹಾಳಾಗುತ್ತದೆ. ಯಾವ ಕಾಲು ಜಾರಿದರೂ ಸೊಂಟಕ್ಕೇ ಪೆಟ್ಟು ಎಂಬಂತೆ, ಈ ಸ್ಥಿತಿಯೂ ಪ್ರಜೆಗಳಿಗೇ ಮಾರಕ.

ಹಾಗಾಗಿ, ಯಾವುದೇ ಪಕ್ಷವಿರಲಿ ಆ ಪಕ್ಷವು ಕಳುಹಿಸುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕ ಪ್ರಸಂಗ ಮಾತನಾಡಲು ಬಿಡಬಾರದು. ಆ ಪ್ರತಿನಿಧಿಯು ಆಡಳಿತಾತ್ಮಕ ವಿಚಾರಗಳನ್ನು ಮಾತನಾಡುವಲ್ಲಿಗೇ ಸೀಮಿತವಾಗಿರಬೇಕು. ಪಕ್ಷವು ತನ್ನ ಪ್ರತಿನಿಧಿಗೆ ತೊಂದರೆಯಾದಾಗ ಅಧಿಕೃತವಾಗಿ ಕ್ರಮ ತೆಗೆದುಕೊಳ್ಳುವಂತಾಗಬೇಕು. ಉದಾ: ಒಬ್ಬ ಮುಖ್ಯಮಂತ್ರಿಯೋ, ಪ್ರಧಾನಮಂತ್ರಿಗೋ ಆಡಳಿತಾತ್ಮಕವಾಗಿ ನಿಂದನೆಗಳು ಬಂದಾಗ ಅದನ್ನು ಸಮರ್ಥನೆ ಮಾಡಿಕೊಳ್ಳಬೇಕಾದದ್ದು ಆ ಪಕ್ಷದ ಒಳಗಿರುವ ಜವಾಬ್ದಾರಿಯುತ ನಾಯಕರದ್ದು. ಪ್ರತಿನಿಧಿಗಳು ಕಲಹಕ್ಕಿಳಿದರೆ ಅಭಿವೃದ್ಧಿ ಕುಂಠಿತವಾಗುತ್ತದೆ.

ಈ ರೀತಿಯ ನಿಯಮ ಪಾಲನೆ ಮಾಡಿದರೆ ಪಕ್ಷಗಳ ವರ್ಚಸ್ಸು ಉತ್ತಮವಾಗುತ್ತದೆ, ಪ್ರತಿನಿಧಿಗಳ ಮೇಲೆ ಪ್ರಜೆಗಳ ಪ್ರೀತಿಯೂ ಹೆಚ್ಚಾಗುತ್ತದೆ. ‘ನೀವು ಏನು ನಿರ್ಧಾರ ತೆಗೆದುಕೊಳ್ಳುವಿರಿ’ ಎಂದು ಮಾಧ್ಯಮಗಳು ಪ್ರಶ್ನಿಸಿದರೆ, ನಮ್ಮ ಪಕ್ಷದ ವಕ್ತಾರರು ಉತ್ತರಿಸುತ್ತಾರೆ ಎಂದಷ್ಟೇ ಹೇಳಿದರೆ ಸಮಸ್ಯೆ ಅಲ್ಲಿಗೇ ನಿಲ್ಲುತ್ತದೆ.

ಇದನ್ನು ಎಲ್ಲ ರಾಜಕೀಯ ಪಕ್ಷಗಳು ಎಂದಿಗೆ ಅರ್ಥ ಮಾಡಿಕೊಂಡು, ಕಾರ್ಯಗತ ಮಾಡುತ್ತವೆಯೋ?

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: Developmental WorkHate SpeechJyotirvigyanamPeople RepresentativesPolitical PartyPrakash AmmannayaSpecial ArticleSpokespersonಅಭಿವೃದ್ಧಿಪ್ರಕಾಶ್ ಅಮ್ಮಣ್ಣಾಯಪ್ರತಿನಿಧಿರಾಜಕೀಯ ಪಕ್ಷವಕ್ತಾರ
Share199Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಚಳ್ಳಕೆರೆ: ಬಯಲುಸೀಮೆಯ ಜನರು ಕರುಣಾಮಯಿಗಳು

Next Post

ಮೋದಿ ಹಳಿಯಲು ಚೀಪ್ ಟ್ರಿಕ್ಸ್‌ ಬಳಸಿ ತಾವೇ ಮರ್ಯಾದೆ ಹರಾಜು ಹಾಕಿಕೊಂಡ ರಾಹುಲ್?

kalpa News

kalpa News

Next Post
ಮೋದಿ ಹಳಿಯಲು ಚೀಪ್ ಟ್ರಿಕ್ಸ್‌ ಬಳಸಿ ತಾವೇ ಮರ್ಯಾದೆ ಹರಾಜು ಹಾಕಿಕೊಂಡ ರಾಹುಲ್?

ಮೋದಿ ಹಳಿಯಲು ಚೀಪ್ ಟ್ರಿಕ್ಸ್‌ ಬಳಸಿ ತಾವೇ ಮರ್ಯಾದೆ ಹರಾಜು ಹಾಕಿಕೊಂಡ ರಾಹುಲ್?

Leave a Reply Cancel reply

Your email address will not be published. Required fields are marked *

No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL