ಕಲ್ಪ ಮೀಡಿಯಾ ಹೌಸ್ | ರಿಪ್ಪನ್‌ಪೇಟೆ |
ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ರೈತನೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹರತಾಳು ಗ್ರಾಪಂ ವ್ಯಾಪ್ತಿಯ ನಂಜವಳ್ಳಿ ಗ್ರಾಮದ ರೈತ ಶೇಷಗಿರಿ (45) ಮೃತ ದುರ್ದೈವಿಯಾಗಿದ್ದು ಬೆಳಗ್ಗೆ ಹೂ ಕೀಳಲು ಹೋದಾಗ ಈ ಘಟನೆ ನಡೆದಿದೆ.
ಮೂಲತಃ ರಿಪ್ಪನ್‌ಪೇಟೆ ಸಮೀಪದ ಚಿಕ್ಕಜೇನಿ ಗ್ರಾಮದ ಒಡ್ಡಿನಬೈಲು ನಿವಾಸಿಯಾದ ಈತ ಈಚೆಗೆ ಜಮೀನು ಖರೀದಿಸಿ ನಂಜವಳ್ಳಿಯಲ್ಲಿ ವಾಸಿಸುತ್ತಿದ್ದರು.

ವಿದ್ಯುತ್ ತಂತಿ ತುಂಡಾಗಿ ಐಬಿಎಕ್ಸ್ ತಂತಿ ಬೇಲಿ ಮೇಲೆ ಬಿದ್ದಿರುವ ಬಗ್ಗೆ ಮೃತರು ವಿದ್ಯುತ್ ಇಲಾಖೆಗೆ ಮೂರು ಬಾರಿ ದೂರು ಸಲ್ಲಿಸಿದ್ದರು ಎನ್ನಲಾಗುತ್ತಿದ್ದು ಇಲಾಖೆಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಕುಟುಂಬಸ್ಥರು ದೂರಿದ್ದಾರೆ.

ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











Discussion about this post