ಕಲ್ಪ ಮೀಡಿಯಾ ಹೌಸ್ | ರಿಪ್ಪನ್ ಪೇಟೆ |
ಇಲ್ಲಿನ ಸಮೀಪದ ಕಾನುಗೋಡು ಗ್ರಾಮದ ಬಳಿ ಇಂದು ಬೆಳಿಗ್ಗೆ ನರ್ಸರಿ ಮಕ್ಕಳನ್ನು ಕರೆದೊಯ್ಯುತಿದ್ದ ಶಾಲಾ ಬಸ್ ಪಲ್ಟಿಯಾದ #School Bus Accident ಘಟನೆ ನಡೆದಿದೆ.
ತಮ್ಮಡಿಕೊಪ್ಪ – ಮೂಗುಡ್ತಿ ಮಾರ್ಗದಲ್ಲಿ ಚಲಿಸುತ್ತಿದ್ದ ಶಾಲಾ ಬಸ್ ಕಾನುಗೋಡು ಬಳಿಯಲ್ಲಿ ಪಲ್ಟಿಯಾಗಿದೆ. ಗರ್ತಿಕೆರೆಯ ಖಾಸಗಿ ಶಾಲೆಯ ನರ್ಸರಿ ವಿಭಾಗದ 12 ಮಂದಿ ಮಕ್ಕಳು ಇದ್ದರು ಎನ್ನಲಾಗಿದೆ. ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ.

ಇಂತಹ ಘಟನೆಗಳು ಪೋಷಕರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸುವಂತದ್ದಾಗಿವೆ. ಮಕ್ಕಳನ್ನು ಹೊತ್ತೊಯ್ಯುವ ಶಾಲಾ ವಾಹನಗಳಿಗೆ ವಿಶೇಷ ಸುರಕ್ಷತಾ ಕ್ರಮಗಳು ಅವಶ್ಯಕ. ಬಸ್ ಚಾಲಕರು ಅತಿವೇಗ ತಪ್ಪಿಸಿ, ನಿಯಮ ಪಾಲನೆ ಮಾಡುವುದರ ಜೊತೆಗೆ, ರಸ್ತೆ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಸಾಗುವುದು ಅತ್ಯಂತ ಮುಖ್ಯ.

ಈ ಘಟನೆಯಲ್ಲಿ ಭಾರಿ ಅನಾಹುತವಾಗದಿದ್ದರೂ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಜಾಗೃತಿ ವಹಿಸಬೇಕಾಗಿದೆ.
“ಪ್ರತಿ ಮಗುವಿನ ಸುರಕ್ಷತೆ ನಮ್ಮೆಲ್ಲರ ಹೊಣೆಗಾರಿಕೆ – ಎಚ್ಚರಿಕೆ ಮಾತ್ರವೇ ಅಪಘಾತ ತಪ್ಪಿಸುವ ದಾರಿ.”
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post