ಕಲ್ಪ ಮೀಡಿಯಾ ಹೌಸ್ | ರಿಪ್ಪನ್ ಪೇಟೆ |
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಎಲ್ಲಾ ಸಮಾಜದ ಉನ್ನತಿಗಾಗಿ ಸಮುದಾಯ ಭವನಗಳ ನಿರ್ಮಾಣವಾಗಿದೆ. ಕೆಲವು ಮಾತ್ರ ನಿರ್ಮಾಣ ಹಂತದಲ್ಲಿದ್ದು, ಶೀಘ್ರ ಕೆಲಸವನ್ನು ಪೂರ್ಣಗೊಳಿಸಲು ಸೂಚಿಸಿದ್ದೇನೆ ಎಂದು ಸಂಸದ ಬಿ.ವೈ. ರಾಘವೇಂದ್ರ MP B Y Raghavendra ಹೇಳಿದರು.
ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಶಿವ ಮಂದಿರ ಹಾಗೂ ರಾಮ ಭವನದ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ನೂತನ ರೈಲ್ವೇ ಕಾಮಗಾರಿ, ವಿಮಾನ ನಿಲ್ದಾಣ, ನ್ಯಾಷನಲ್ ಹೈವೇ, ಸ್ಮಾರ್ಟ್ ಸಿಟಿ, ವಿಶ್ವ ವಿಖ್ಯಾತ ಜೋಗ ಜಲಪಾತದ ಅಭಿವೃದ್ಧಿ ಹಾಗೂ ಹೊಸನಗರ ತಾಲೂಕಿನ ಕೊಡಚಾದ್ರಿ – ಕೊಲ್ಲೂರು ಕೇಬಲ್ ಕಾರ್, ಮಾವಿನಕೊಪ್ಪದಿಂದ – ನಾಗೋಡಿ ವರೆಗೆ 766c ನೂತನ ಬೈಪಾಸ್ (ಕೊಲ್ಲೂರು ), ನಿರ್ಮಾಣದಿಂದ ಪ್ರವಾಸೋದ್ಯಮ ಬೆಳೆದು ಉದ್ಯೋಗ ಸೃಷ್ಟಿಯಾಗಲಿದೆ, ಈ ಮೂಲಕ ಸಮಗ್ರ ಜಿಲ್ಲೆ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ತಿಳಿಸಿದರು.

Also read: ವೈಯಕ್ತಿಕ ದ್ವೇಷ ಹಿನ್ನೆಲೆ ವ್ಯಕ್ತಿಗೆ ಚಾಕು ಇರಿತ: ಓರ್ವನ ಬಂಧನ
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸುರೇಶ್, ಪದ್ಮ, ನಾಗರಾಜ್, ಪ್ರೇಮಚಂದ್ರ, ರಿಪ್ಪನಪೇಟೆ ಗ್ರಾ.ಪಂ ಅಧ್ಯಕ್ಷರಾದ ಮಂಜುಳಾ, ಸ್ವಾಮಿ ಗೌಡ್ರು, ವರ್ತೆಶ್ ಹುಗುಡಿ, ರಾಜೇಂದ್ರ ಗಂಟೆ, ಯುವರಾಜ ಗೌಡ್ರು ಚಿಕ್ಕಮಣತಿ, ಅಶೋಕ ಬೆನವಳ್ಳಿ, ತಿರ್ತೆಶ್ ನಾಗಭೂಷಣ್ ಮುಡುಬ, ಶಾಂತಕುಮಾರ್ ಜಂಬಳ್ಳಿ, ನಿಂಗಪ್ಪ ಬೆನವಳ್ಳಿ, ನಿಂಗಪ್ಪ ಕಗ್ಲಿ ಉಪಸ್ಥಿತರಿದ್ದರು.











Discussion about this post