ಕಲ್ಪ ಮೀಡಿಯಾ ಹೌಸ್ | ರಿಪ್ಪನ್‌ಪೇಟೆ |
ತಡರಾತ್ರಿ ಬೀಸಿದ ಏಕಾಏಕಿ ಬಿರುಗಾಳಿಗೆ ಮನೆ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಬಿದ್ದ ಘಟನೆ ಕೋಡೂರು ಗ್ರಾಪಂ ವ್ಯಾಪ್ತಿಯ ಕಾರಕ್ಕಿ ಗ್ರಾಮದಲ್ಲಿ ನಡೆದಿದೆ.
ಪ್ರೇಮ ನಾಗಪ್ಪ ಕುಂಬತ್ತಿ ಎಂಬುವವರಿಗೆ ಸೇರಿದ ವಾಸದ ಮನೆ ಇದಾಗಿದ್ದು, ಮನೆ ಮೇಲ್ಛಾವಣಿ ಹಾಗೂ ಗೋಡೆ ಬೀಳುತ್ತಿದ್ದಂತೆ ಮನೆ ಒಳಗಿದ್ದವರು ಹೊರಗೆ ಓಡಿ ಬಂದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ವೇಳೆ ಓರ್ವನಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಮನೆಯಲ್ಲಿದ್ದ ದವನ ಧಾನ್ಯಗಳು ಸೇರಿದಂತೆ ಇನ್ನಿತರ ವಸ್ತುಗಳು ಹಾಳಾಗಿದ್ದು ಅಪಾರ ಹಾನಿ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಕೋಡೂರು ಗ್ರಾ.ಪಂ ಸದಸ್ಯ ಯೋಗೇಂದ್ರಪ್ಪ ಮತ್ತು ಪಿಡಿಒ ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ.
Also read: ಗಮನಿಸಿ! ಜೂ.18ರಂದು ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post