ಕಲ್ಪ ಮೀಡಿಯಾ ಹೌಸ್ | ರಿಪ್ಪನ್’ಪೇಟೆ |
ಮೋದಿ #Modi ಹೆಸರಿನಲ್ಲಿ ಗೆಲ್ಲುವ ಸಂಸದರು ಮುಂದಿನ ದಿನಗಳಲ್ಲಿ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿಸಿ ಘೋಷಿಸುವಂತೆ ಲೋಕಸಭೆಯಲ್ಲಿ ಒತ್ತಾಯಿಸಬೇಕು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ನಾಯಕ ಪ್ರಮೋದ್ ಮುತ್ತಾಲಿಕ್ #Pramod Muthalik ಹೇಳಿದರು.
ಇಂದು ಹೊಸನಗರದ ರಾಮಚಂದ್ರಪುರ ಮಠಕ್ಕೆ #Ramachandrapura Mutt ಭೇಟಿ ನೀಡಿ ಹಿಂದಿರುಗುವಾಗ ಮಾರ್ಗ ಮಧ್ಯೆ ರಿಪ್ಪನ್’ಪೇಟೆಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ನಮ್ಮದು 10 ಅಂಶಗಳ ಬೇಡಿಕೆ ಇದ್ದು ಅದನ್ನು ಆಯ್ಕೆಯಾಗುವ ಸಂಸದರು ಸಂಪುಟದಲ್ಲಿ ಚರ್ಚಿಸಿ ಈಡೇರಿಸುವ ಭರವಸೆ ನೀಡಿದಲ್ಲಿ ಬೆಂಬಲಿಸುವುದಾಗಿ ಅವರು ಘೋಷಿಸಿದರು.
Also read: ರಣಮಳೆಗೆ ದುಬೈ ತತ್ತರ | ಒಂದು ವರ್ಷದ ಮಳೆ ಒಂದೇ ದಿನದಲ್ಲಿ ತಂದ ಅವಾಂತರ
ಗೋ ಮಾತೆಯನ್ನು ರಾಷ್ಟ್ರೀಯ ಪ್ರಾಣಿಗಳನ್ನಾಗಿ ಘೋಷಿಸಬೇಕು. ವಕ್ಫ್ ಬೋರ್ಡ್ ಅನ್ನುವುದು ಒಂದು ಲ್ಯಾಂಡ್ ಮಾಫಿಯಾವಾಗಿದ್ದು, ಅದರ ಸಮಗ್ರ ತನಿಖೆ ನಡೆಸುವುದು. ಹಿಂದೂ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ, ಹಿಂದೂ ಕಾರ್ಯಕರ್ತರ ಮೇಲೆ ಹಾಕಲಾದ ಕೇಸ್ ವಾಪಾಸ್ಸು ಪಡೆಯುವುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಸದಿದ್ದರೆ ಮೋದಿ ಹೆಸರಿನಲ್ಲಿ ಮತ ಪಡೆದು ಸಂಸದರಾದವರ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮೋದಿ ಹೆಸರಿನಲ್ಲಿ ಮೇಲೆ ಆಗುವ ಸಂಸದರಿಗೆ ಹಿಂದುತ್ವದ ಪರವಾಗಿ ನಿಲ್ಲುವಂತೆ ಎಚ್ಚರಿಕೆಯನ್ನು ನೀಡಿದರು. ಚುನಾವಣೆ ಗೆದ್ದ ನಂತರ ಕಾರ್ಯಕರ್ತರಿಗೆ ಸ್ಪಂದಿಸಿ ಕನಿಷ್ಠ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವAತೆ ಸಂಸದರಿಗೆ ಕರೆ ನೀಡಿದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ #K S Eshwarappa ಸ್ಪರ್ಧೆಯ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ತ.ಮ. ನರಸಿಂಹ, ಎಂ.ಬಿ. ಮಂಜುನಾಥ, ಕುಷನ್ ದೇವರಾಜ್, ಸುರೇಶ್ ಸಿಂಗ್, ಕಗ್ಗಲಿ ನಿಂಗಪ್ಪ, ಅಶೋಕ ಹಾಲುಗುಡ್ಡೆ ಇನ್ನಿತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post