ಶಿವಮೊಗ್ಗ: ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರೌಡಿಗಳ ಪೆರೇಡ್ ನಡೆಸಿರುವ ಜಿಲ್ಲಾ ರಕ್ಷಣಾಧಿಕಾರಿ ಡಾ. ಅಶ್ವಿನಿ, ಸಮಾಜದಲ್ಲಿ ಶಾಂತಿ ಕದಡುವ ಕೃತ್ಯಗಳಿಗೆ ಕೈ ಹಾಕದಂತೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಎಸ್’ಪಿಯವರು, ಶಿವಮೊಗ್ಗ ಉಪವಿಭಾಗ ವ್ಯಾಪ್ತಿಗೆ ಸುಮಾರು 1002 ರೌಡಿಗಳು ಇದ್ದು ಅವರ ಚಟುವಟಿಕೆಗಳ ಮೇಲೆ ತೀವ್ರಗಮನ ಹರಿಸಲಾಗಿದೆ. ಮುಂಬರುವ ರಂಜಾನ್ ಹಾಗೂ ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮತ್ತು ರೌಡಿಗಳ ಪೈಲ್’ಗಳನ್ನು ಆಗಾಗ ಅಪ್’ಡೇಟ್ ಮಾಡಲು ಪರೇಡ್ ನಡೆಸಲಾಗಿದೆ ಎಂದಿದ್ದಾರೆ.
ಮುಂದೆಯೂ ಸಹ ರೌಡಿ ಚಟುವಟಿಕೆ ಹತ್ತಿಕ್ಕಲು ಇಲಾಖೆ ಸನ್ನದ್ಧವಾಗಿದೆ ಎಂದಿರುವ ಅವರು, ಯಾವುದೇ ಕಾರಣಕ್ಕೆ ಸಮಾಜದ ಶಾಂತಿ ಕದಡಲು ಬಾಲ ಬಿಚ್ಚೀರಿ ಜೋಕೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಈ ಸಂದರ್ಭದಲ್ಲಿ ಎಎಸ್’ಪಿ ಶೇಖರ್, ಡಿವೈಎಸ್’ಪಿ ಈಶ್ವರನಾಯಕ್ ಇದ್ದರು.
Discussion about this post