ಶಿವಮೊಗ್ಗ: ನಗರದ ಜನನಿಬಿಡ ಪ್ರದೇಶದಲ್ಲಿ ರೌಡಿ ಶೀಟರ್ ಮಾರ್ಕೆಟ್ ಗಿರಿ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಇಂದು ರಾತ್ರಿ 9.45ಕ್ಕೆ ಜ್ಯುವೆಲ್ ರಾಕ್ ಹೋಟೆಲ್ ರಸ್ತೆಯಲ್ಲಿರುವ ದೇನಾ ಬ್ಯಾಂಕ್ ಬಳಿ ದುಷ್ಕರ್ಮಿಗಳು ಗಿರಿ ಮೇಲೆ ಭೀಕರವಾಗಿ ದಾಳಿ ಮಾಡಿದ್ದು, ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಈತನನ್ನು ಹತ್ಯೆ ಮಾಡಿರುವ ರೀತಿಗೆ ಇಡಿಯ ನಗರವೇ ಬೆಚ್ಚಿ ಬಿದ್ದಿದೆ. ಹಳೆಯ ದ್ವೇಷ ಹತ್ಯೆಗೆ ಕಾರಣ ಎನ್ನಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ…

















