ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮಹಿಳೆಯೊಬ್ಬರಿಂದ ಅಪರಹಣಗೊಂಡಿದ್ದ ಮಗುವನ್ನು ಕೇವಲ 30 ನಿಮಿಷಗಳಲ್ಲಿ ರೈಲ್ವೆ ಸುರಕ್ಷತಾ ಪಡೆ #RailwayProtectionForce ಸಿಬ್ಬಂದಿ ಪತ್ತೆ ಮಾಡಿ, ಪೋಷಕರ ಮಡಿಲು ಸೇರಿಸಿರುವ ಪ್ರಕರಣ ನಡೆದಿದೆ.
ಏನಿದು ಪ್ರಕರಣ?
ಅ.22ರಂದು ಬೆಳಗಿನ ಜಾವ 5:20ರ ಸುಮಾರಿಗೆ, ಆರ್’ಪಿಎಫ್/ಮೈಸೂರು #Mysore ಕಾನ್ಸ್ಟೇಬಲ್ ಸಿ.ಎಂ. ನಾಗರಾಜು ಅವರು ಮೈಸೂರು ರೈಲು ನಿಲ್ದಾಣದ ಪ್ರವೇಶ ದ್ವಾರದ ಬಳಿ ಮಗು ನಾಪತ್ತೆಯಾದ ಬಗ್ಗೆ ತಿಳಿಸಿ ಅಳುತ್ತಿದ್ದ ಮಹಿಳೆಯನ್ನು ಗಮನಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಅವರು, ಈ ವಿಷಯವನ್ನು ಎಎಸ್’ಐ ಪ್ರಾಸಿ ಮತ್ತು ಇನ್ಸ್ಪೆಕ್ಟರ್ ದಿನೇಶ್ ಕುಮಾರ್ ಅವರಿಗೆ ತಿಳಿಸಿದ್ದಾರೆ. ಕೂಡಲೇ ಅಧಿಕಾರಿಗಳು ಸಿಸಿಟಿವಿ ಹುಡುಕಾಟ ಆರಂಭಿಸಿದ್ದಾರೆ.
ತುರ್ತು ಕಾರ್ಯಾಚರಣೆ ಆರಂಭಿಸಿದ ರೈಲ್ವೆ ಪೊಲೀಸರು, ಸಿಸಿಟಿವಿ #CCTV ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಸುಮಾರು 50 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಮಗುವನ್ನು ಎತ್ತಿಕೊಂಡು ಪ್ಲಾಟ್’ಫಾರ್ಮ್ ನಂ. 6 ರ ಮೂಲಕ ರೈಲು ಸಂಖ್ಯೆ 16206 ಅನ್ನು ಹತ್ತಲು ಹೋಗುವುದು ಕಂಡುಬಂದಿತು.

ಆರೋಪಿ ದೇವಿಕಾ (ಹೆಸರು ಬದಲಾಯಿಸಲಾಗಿದೆ), ಹಾಸನದ ನಿವಾಸಿಯಾಗಿದ್ದು, ಆಕೆಯನ್ನು ಜಿಆರ್’ಪಿ/ಮೈಸೂರಿಗೆ ಒಪ್ಪಿಸಲಾಯಿತು.
ಜಿಆರ್’ಪಿಯವರು, ಆಕೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 137(ಚಿ) ಅಡಿಯಲ್ಲಿ ಪ್ರಕರಣವನ್ನು (ಅಪರಾಧ ಸಂಖ್ಯೆ 25/2025) ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಈ ರಕ್ಷಣಾ ಕಾರ್ಯವು, ನಾಪತ್ತೆಯಾದ ಅಥವಾ ಅಪಹರಣಕ್ಕೊಳಗಾದ ಮಕ್ಕಳನ್ನು ಪತ್ತೆಹಚ್ಚಿ ಅವರ ಕುಟುಂಬಗಳೊಂದಿಗೆ ಪುನಃ ಸೇರಿಸಲು ಮೀಸಲಾದ ‘ಆಪರೇಷನ್ ನನ್ಹೆ ಫರಿಶ್ತೆ’ ಉಪಕ್ರಮದ ಅಡಿಯಲ್ಲಿ ಆರ್’ಪಿಎಫ್ ಸಿಬ್ಬಂದಿಯ ಜಾಗರೂಕತೆ, ತಂಡದ ಕಾರ್ಯ ಮತ್ತು ಸಿಸಿಟಿವಿ ಕಣ್ಗಾವಲು ಬಳಕೆಯನ್ನು ಎತ್ತಿ ತೋರಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post