ಸದಾ ಹೊಸತನದ ಹಾದಿಯಲ್ಲಿರುವ ರುಧಿರ ಫಿಲಂಸ್ ಮೊತ್ತ ಮೊದಲ ಬಾರಿಗೆ ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು, ಸ್ಯಾಂಡಲ್ ವುಡ್ ಹಾಗೂ ಮ್ಯೂಸಿಕ್ ಕ್ಷೇತ್ರದಲ್ಲಿ ಸಂಚಲನ ಸೃಷ್ಠಿಸುತ್ತಿದೆ.
ಸದ್ಯದಲ್ಲೇ ರುಧಿರ ಫಿಲಂಸ್ ಸಂಸ್ಥೆಯ ಮೊದಲ ಕನ್ನಡ ಚಲನಚಿತ್ರ ನಿಲುಕದ ನಕ್ಷತ್ರ ಬಿಡುಗಡೆಯ ಹಾದಿಯಲ್ಲಿದ್ದು, ಇತ್ತೀಚಿಗೆ ತಾನೇ ಕರಾವಳಿಯಲ್ಲಿ ತನ್ನದೇ ಸ್ವಂತ ಸ್ಟುಡಿಯೋ ಸ್ಥಾಪಿಸಿರುವ ರುಧಿರ ಫಿಲಂಸ್ ಸಂಸ್ಥೆ ಇದೀಗ ತನ್ನ ನೂತನ ರುಧಿರ ಫಿಲಂಸ್ ಆಂಡ್ ಎಂಟರ್ಟೈನ್ಮೆಂಟ್ ಸ್ಟುಡಿಯೋ ಪ್ರಚಾರಕ್ಕಾಗಿ R7 ಅನ್ನುವ ನೂತನ ಆಲ್ಬಮ್ ಸಾಂಗ್‌ಸ್ ಸರಣಿಯನ್ನು ಹೊರತರಲಿದೆ.
R7 ಎಂದರೆ ರುಧಿರ 7 ಎಂದಾಗಿದ್ದು, 7 ಹಾಡುಗಳ ಸಂಗಮವಾಗಲಿದೆ. ಪ್ರತಿ ಒಂದು ಹಾಡು ವಿಭಿನ್ನ ಭಾಷೆಯಲ್ಲಿ ಆ ಭಾಷೆಯ ಸಂಸ್ಕೃತಿಗೆ ಅನುಗುಣವಾಗಿ ಇರಲಿದೆ. ಒಂದೇ ಟ್ಯೂನ್ ನ ಬಳಕೆಯೊಂದಿಗೆ 7 ಭಾಷೆಗಳಲ್ಲಿ 7 ಹಾಡುಗಾರರಿಂದ ಹಾಡಲ್ಪಡುತ್ತಿರುವುದು ಮೊದಲ ದಾಖಲೆಯ ಪ್ರಯತ್ನವಾಗಿದೆ.
ಕೊಂಕಣಿ, ತುಳು, ಕನ್ನಡ, ಇಂಗ್ಲಿಷ್, ಮಲಯಾಳಂ, ಹಿಂದಿ ಹಾಗು ಬ್ಯಾರಿ ಭಾಷೆಯಲ್ಲಿ ಹಾಡುಗಳು ಮೂಡಿ ಬರಲಿದ್ದು, ಎಲ್ಲ ವಿಡಿಯೋ ಆಲ್ಬಮ್ ಗಳಲ್ಲಿ ವಿಭಿನ್ನ ನವ ಪ್ರತಿಭೆಗಳು ನಟಿಸಲಿದ್ದಾರೆ. ಮಂಗಳೂರು, ಬೆಂಗಳೂರು. ಗೋವಾ, ಮುಂಬೈ, ಕೇರಳ ಹೀಗೆ ವಿಭಿನ್ನ ಜಾಗದಲ್ಲಿ ಚಿತ್ರೀಕರಣ ನಡೆಸಲಾಗುವದು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೊಸ ಪ್ರಯತ್ನಕ್ಕೆ ಶುಭವಾಗಲಿ.. R7 ಆವೃತ್ತಿಯ ಮೊದಲ ಕನ್ನಡ ಆಲ್ಬಮ್ ನ ಪೋಸ್ಟರ್ ಬಿಡುಗಡೆ ಗೊಂಡಿದ್ದು ನೀನು ಎಂದು ಹೆಸರಿಡಲಾಗಿದೆ. ಇದರಲ್ಲಿ ಹರ್ಷಿಣಿ ದೇವಾಡಿಗ ಕಾರ್ಕಳ ನಟಿಸಿದ್ದು, ಸಚಿನ್ ಮಂಗಳೂರ್ ಹಾಡು ಹಾಡಿದ್ದಾರೆ. ಆನಂದ್ ಪೆರ್ಡೂರ್ ಪ್ರೋಗ್ರಾಮಿಂಗ್ ಮಾಡಿದ್ದು, ಗಣಿ ದೇವ್ ಕಾರ್ಕಳ ಸಂಗೀತ ಸಾಹಿತ್ಯ ನಿರ್ದೇಶನದ ಜೊತೆಗೆ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.
ರುಧಿರ ಫಿಲಂಸ್ ಇನ್ನಷ್ಟು ಹೊಸ ಪ್ರಯತ್ನ ಪ್ರಯೋಗಗಳನ್ನು ಪರಿಚಯಿಸಲಿ, ಯುವ ಕಲಾವಿದ ಹಾಗೂ ತಂತ್ರಜ್ಞರ ಭರವಸೆಯ ಬೆಳಕಾಗಿರಲೆಂದು ಆಶಿಸೋಣ.
Discussion about this post