ಕಲ್ಪ ಮೀಡಿಯಾ ಹೌಸ್ | ಉಡುಪಿ |
144 ವರ್ಷದ ನಂತರ ಪ್ರಯಾಗರಾಜ್’ನಲ್ಲಿ #Prayagraj ನಡೆಯುತ್ತಿರುವ ಮಹಾಕುಂಭಕ್ಕೆ #Mahakumbha ಬೆಂಗಳೂರಿನಿಂದ ಆರಂಭಿಸಿದಂತೆ ಕರಾವಳಿ ಭಾಗದಿಂದಲೂ ಸಹ ವಿಶೇಷ ರೈಲು ಸಂಚಾರ ಆರಂಭಿಸುವಂತೆ ಸಾರ್ವಜನಿಕ ವಲಯದಿಂದ ಬೇಡಿಕೆ ಕೇಳಿಬಂದಿದೆ.
ಮಹಾಕುಂಭಕ್ಕೆ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ನೈಋತ್ಯ ರೈಲ್ವೆ ವ್ಯಾಪ್ತಿಯ ಹಲವು ಕಡೆಗಳಿಂದ ವಿಶೇಷ ರೈಲುಗಳನ್ನು ಓಡಿಸಲಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗಿದೆ.
Also Read>> ಕೃಷಿ – ತೋಟಗಾರಿಕೆ ಪದವೀಧರರು ಸ್ಮಾರ್ಟ್ ಅಗ್ರಿಕಲ್ಚರ್ ಕಡೆ ಗಮನಹರಿಸಿ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಕರೆ
ಆದರೆ, ಉಡುಪಿ #Udupi ಸೇರಿದಂತೆ ಕರಾವಳಿ ಭಾಗದಿಂದ ಪ್ರಯಾಗರಾಜ್’ಗೆ ಮಹಾಕುಂಭಕ್ಕೆ ತೆರಳಲು ವಿಶೇಷ ರೈಲುಗಳ #Train ವ್ಯವಸ್ಥೆಯಿಲ್ಲ ಎನ್ನುವುದು ಸಾರ್ವಜನಿಕರ ಅಹವಾಲಾಗಿದೆ.

ಉಡುಪಿ, ಕುಂದಾಪುರ, ಬೈಂದೂರು, ಮರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ, ಕಾರವಾರ, ಮಡಗಾವ್, ಲೋಡಾ ಜಂಕ್ಷನ್ ಸೇರಿದಂತೆ ಈ ಭಾಗದ ಮೂಲಕ ವಿಶೇಷ ರೈಲು ಓಡಿಸಲು ಇಲಾಖೆ ಸಚಿವರು ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post