ಕಲ್ಪ ಮೀಡಿಯಾ ಹೌಸ್ | ಪತ್ತನಂತಿಟ್ಟ |
ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ #AyyappaSwamy ಸನ್ನಿಧಾನಕ್ಕೆ ದೇಶದ ವಿವಿಧ ಭಾಗಗಳಿಂದ ಭಕ್ತರು ಹರಿದುಬರುತ್ತಿದ್ದು, ಕಳೆದ 39 ದಿನಗಳಲ್ಲಿ ಬರೋಬ್ಬರಿ 204.30 ಕೋಟಿ ರೂ. ಆದಾಯ ಸಂಗ್ರಹವಾಗಿದೆ.
ಈ ಕುರಿತಂತೆ ತಿರುವಾಂಕೂರು ದೇವಸ್ವಂ ಬೋರ್ಡ್ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಶಬರಿಮಲೆಯಲ್ಲಿ #Shabarimalai ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ವರ್ಷಕ್ಕಿಂತ ಈ ಬಾರಿ 222,98,70,250 (222.98 ಕೋಟಿ ರೂ.) ಆದಾಯ ಬಂದಿದ್ದು, ಈ ಬಾರಿ 18,67,93, 546 ರೂ. ಇಳಿಕೆಯಾಗಿದೆ. ಇನ್ನು ನಾಣ್ಯಗಳನ್ನು ಎಣಿಸಿದ ನಂತರ ಕುತಕ ಲೇಲಂ ಆದಾಯವನ್ನು #Income ಸೇರಿಸಿದರೆ ಆದಾಯ ಹೆಚ್ಚಾಗಬಹುದು ಎಂದು ತಿಳಿಸಿದ್ದಾರೆ.
ಭಕ್ತರು ಸಲ್ಲಿಸಿರುವ ಕಾಣಿಕೆಯಿಂದ 63.89 ಕೋಟಿ ರೂ. ಸಂಗ್ರಹವಾಗಿದೆ. ಅರವಣ ಪ್ರಸಾದದಿಂದ 96.32 ಕೋಟಿ ರೂ., ಅಪ್ಪಂ ಪ್ರಸಾದ ಮಾರಾಟದಿಂದ 12.39 ಕೋಟಿ ರೂ. ಆದಾಯ ಬಂದಿದೆ ಎಂದರು.
ಈ ಋತುವಿನಲ್ಲಿ 31 ಲಕ್ಷ ಯಾತ್ರಾರ್ಥಿಗಳು ಬೆಟ್ಟದ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಕಳೆದ ಋತುವಿನಲ್ಲಿ ಸುಮಾರು 30 ಲಕ್ಷ ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದರು. ಹಿಂದಿನ ವರ್ಷ 50 ಲಕ್ಷ ಭಕ್ತರು ಇಡೀ ತೀರ್ಥೋದ್ಭವದಲ್ಲಿ ಪಾಲ್ಗೊಂಡಿದ್ದರು. ಈ ಬಾರಿ 50 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ನಿರೀಕ್ಷಿಸುತ್ತಿದ್ದೇವೆ ಎಂದಿದ್ದಾರೆ.
ಶಬರಿಮಲೆ ದೇಗುಲದಲ್ಲಿ 41 ದಿನಗಳ ಕಾಲ ನಡೆದ ಮಂಡಲಂ-ಮಕರವಿಳಕ್ಕು ಯಾತ್ರೆಯ ಮೊದಲ ಹಂತ ಇಂದು ಮುಕ್ತಾಯಗೊಳ್ಳಲಿದೆ.
ಮೊದಲ 39 ದಿನಗಳ ಕಾಲ ಅಂದರೆ ಡಿ.25ರವರೆಗೆ ಬೆಟ್ಟದ ದೇಗುಲದ ಆದಾಯವು 204,30,76,704 ರೂ.ಗೆ ತಲುಪಿದೆ. ಆದಾಯದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಯಾಗಿದೆ. ಆದರೆ ಮೊದಲ 39 ದಿನಗಳಲ್ಲಿ ದೇವಾಲಯಕ್ಕೆ ಭೇಟಿ ನೀಡಿದ ಯಾತ್ರಾರ್ಥಿಗಳ ಸಂಖ್ಯೆ ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















