ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಮಹಾತ್ಮ ಗಾಂಧಿಯವರನ್ನು ಕೊಂದ ನಾಥೂರಾಮ್ ಗೋಡ್ಸೆ ಪರವಾಗಿ ಜೈಕಾರ ಕೂಗಿದ ಸಾಧ್ವಿ ಪ್ರಜ್ಞಾ ಸಿಂಗ್ ಅವರಿಗೆ ರಾಜ್ಯಕ್ಕೆ ಬರಲು ಅನುಮತಿ ನೀಡಬಾರದು ಎಂದು ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ಆಗ್ರಹಿಸಿದ್ದಾರೆ.
ಅಧಿವೇಶನದಲ್ಲಿ ಬೇಡಿಕೆಯನ್ನು ಮಂಡಿಸಿದ ಅವರು, ನಾಥೂರಾಮ್ ಗೋಡ್ಸೆ ಪರವಾಗಿ ಜೈಕಾರ ಕೂಗಿದ ಸಾಧ್ವಿ ಪ್ರಜ್ಞಾ ಸಿಂಗ್ ರಾಜ್ಯಕ್ಕೆ ಬಂದರೆ ಇಲ್ಲ ಸಲ್ಲದ ಹೇಳಿಕೆಯಿಂದ ಅನಾವಶ್ಯಕ ಕಲಹ ಉಂಟು ಮಾಡಬಹುದು. ಹೀಗಾಗಿ, ಅವರಿಗೆ ರಾಜ್ಯಕ್ಕೆ ಬರದಂತೆ ತಡೆಯೊಡ್ಡಬೇಕು ಎಂದು ಒತ್ತಾಯಿಸಿದ್ದಾರೆ.
ಸಿಎಎ, ಎನ್‌ಆರ್‌ಸಿ ಸಂವಿಧಾನಕ್ಕೆ ವಿರುದ್ಧವಾಗಿದೆ. ದೇಶದ ಭದ್ರತೆಗೆ ನಾವೆಲ್ಲರೂ ಒಂದಾಗುತ್ತೇವೆ. ಸಂವಿಧಾನ ವಿರೋಧಿ ಕಾನೂನಿಗೆ ನಮ್ಮ ಒಪ್ಪಿಗೆ ಇಲ್ಲ. ನನ್ನ ಕ್ಷೇತ್ರದಲ್ಲೇ ಅನಕ್ಷರಸ್ಥ, ಅವಿದ್ಯಾವಂತ ಅದೆಷ್ಟೋ ಬಡ ಕುಟುಂಬಗಳು ಇನ್ನು ಕೂಡ ದಾಖಲೆಗಳು ಇಲ್ಲದೆ ಅಲೆದಾಡುತ್ತಿದ್ದಾರೆ ಎಂದು ಉದಾಹರಣೆ ಸಮೇತ ಸದನದಲ್ಲಿ ಖಾದರ್ ವಿಚಾರ ಮಂಡಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post