ಕಲ್ಪ ಮೀಡಿಯಾ ಹೌಸ್ | ಸಾಗರ |
ಒಂದು ಕುಟುಂಬದಿಂದ ಬಿಜೆಪಿ #BJP ಪಕ್ಷವನ್ನು ಅಪಹರಣ ಆಗಲು ನಾವು ಬಿಡುವುದಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #KSEshwarappa ಗುಡುಗಿದ್ದಾರೆ.
ರಾಷ್ಟ್ರ ಭಕ್ತರ ಬಳಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ #LoksabhaElection2024 ಸ್ಪರ್ಧಿಸುತ್ತಿರುವ ಕೆ.ಎಸ್. ಈಶ್ವರಪ್ಪ ಪರವಾಗಿ ಸಾಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚುನಾವಣೆ ಎಂದರೆ ಜಾತಿ ಹಣ ತೋಳ್ಬಲದಿಂದ ನಡೆಯುತ್ತೆ ಎಂದು ತಿಳಿದಿದ್ದೆ. ಆದರೆ ಇಂದು ನಿಮ್ಮನ್ನೆಲ್ಲಾ ನೋಡಿದರೆ ಜಾತಿ ಹಣ ಎಲ್ಲಾ ಪಕ್ಕಕ್ಕೆ ಇಟ್ಟು ಬಡವರು ಧರ್ಮದ ಪರವಾಗಿ ನಿಂತು ಧರ್ಮ ಗೆಲ್ಲಿಸಲು ಬಂದಿದ್ದೀರ ಎಂದು ತಿಳಿಯುತ್ತದೆ ಎಂದರು.

ಸಾಗರ ನಗರ ಸಭಾ ಮಾಜಿ ಸದಸ್ಯರುಗಳಾದ ಮಂಜುನಾಥ್ ಕೆ.ಎಲ್. ಕಸ್ತೂರಿ ಸಾಗರ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಗೌಡ್ರು, ಕೆಳದಿ ಗ್ರಾಮ ಪಂಚಾಯತಿ ಸದಸ್ಯರಾದ ಗೋಪಾಲ್, ವೀಣಾ ಸತೀಶ್, ರಜನೀಶ್ ಹಕ್ರೆ, ಸುರೇಶ್ ವಾಟ್ಗೋಡು, ಹೇಮ ರವಿ, ಚೇತನ್ ಗೌಡ ಹರತಾಳು, ಆನಂದ ಪುರ ನಾರಾಯಣ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post