ಸಾಗರ: ತಾಲೂಕಿನ ಆನಂದಪುರ ಸಮೀಪದ ಹೊಸಗುಂದ ಹಂದಿಗಿನೂರ ಸಂಪರ್ಕಿಸುವ ನಂದಿಹೊಳೆಗೆ ಓಡಾಡಲು ಅಡ್ಡಲಾಗಿ ಹಾಕಿರುವ ಮರದ ದಿಮ್ಮಿಗಳು (ಸಾರ್ವೆ) ಮುರಿದು ಹೋಗುವ ಸ್ಥಿತಿ ತಲುಪಿದ್ದು ಇದಕ್ಕೆ ಕಾಲು ಸುಂಕದ ಅವಶ್ಯಕತೆ ಇರುತ್ತದೆ. ಎಂದು ಗ್ರಾಮಸ್ಥರು ದೂರಿದ್ದಾರೆ.
ಹೊಸಗುಂದ ಮುಖ್ಯ ರಸ್ತೆ, ಆನಂದಪುರ-ಹೆಬೈಲ್ ರಸ್ತೆಗೆ ಸಂಪರ್ಕಿಸುವ ಹೊಸಗುಂದದ ದೊಡ್ಡ ಜಂಕ್ಷನ್, ಇದು ಇಲ್ಲಿ ನಾಲ್ಕು ರಸ್ತೆ ಹಾಗೂ ಮೂರು ಹೊಳೆ ಸೇರುತ್ತವೆ. ಇದು ಹೊಸಗುಂದದಲ್ಲಿಯೇ ಅತಿ ಹೆಚ್ಚು ಜನ ದಟ್ಟಣೆ ಇರುವ ಪ್ರದೇಶವಾಗಿದೆ. ಆದರೂ ಇಲ್ಲಿ ಹೊಳೆ ದಾಟಲು ಜನರಿಗೆ ಯೋಗ್ಯವಾದ ಸೇತುವೆಯ ವ್ಯವಸ್ಥೆ ಇಲ್ಲದೆ ಜನರು ಪ್ರತಿನಿತ್ಯ ಸಂತೆ ಮತ್ತು ಪಟ್ಟಣಕ್ಕೆ ಹೋಗಲು ಹಾಗೂ ಹಂದಿಗಿನೂರಿನಿಂದ ಹೊಸಗುಂದ ಶಾಲೆಗೆ ತೆರಳಲು ಶಾಲಾ ಮಕ್ಕಳು ಜೀವಭಯದಲ್ಲಿ ಹೊಳೆ ದಾಟುತ್ತಿದ್ದಾರೆ. ತಿಂಗಳ ಪಡಿತರ ತರಲು ಹಾಗೂ ಅಂಚೆ ಕಚೇರಿಗೆ ತೆರಳಲು ಸಹ ಇದೆ ದಾರಿಯನ್ನೆ ಅವಲಂಬಿಸಬೇಕಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಹಿಂದೆ ಮಹಿಳೆಯೊಬ್ಬರು ಈ ಹೊಳೆ ದಾಟುವಾಗ ಆಯತಪ್ಪಿ ಬಿದ್ದಿದ್ದಾರೆ ಅದೃಷ್ಠವಷಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಇಷ್ಟೇ ಅಲ್ಲದೇ ಹೊಸಗುಂದ ಮುಖ್ಯ ರಸ್ತೆ ಇಲ್ಲೆ ಕೆಳಗಡೆ ಸುಮಾರು 500 ಮೀಟರ್’ಗಳಷ್ಟು ರಸ್ತೆ ಡಾಂಬರೀಕರಣ ಮಾಡಿಲ್ಲ. ಗೊಚ್ಚು ಮಣ್ಣು ಹಾಕಿ ಮಳೆಗಾಲದಲ್ಲಿ ಈ ರಸ್ತೆಯೂ ಕೆಸರು ಗದ್ದೆಯಾಗಿ ಬೈಕ್ ಓಡಿಸುವಾಗ ಜಾರಿ ಬೀಳುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರಾದ ಸುರೇಶ್, ಶೇಖರಪ್ಪ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದ್ಧಾರೆ.
ಈ ಹಿಂದೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಎಷ್ಟೇ ಮನವರಿಕೆ ಮಾಡಿದ್ದರೂ ಏನೂ ಪ್ರಯೋಜನವಾಗಲಿಲ್ಲ ಎಂದು ಸಹ ತಮ್ಮ ದೂರಿನಲ್ಲಿ ವ್ಯಕ್ತಪಡಿಸಿದ್ದಾರೆ.
ಮಾಹಿತಿ: ರಾಮಚಂದ್ರ ಹೊಸಗುಂದ ಸುರೇಶ್ ಹೊಸೂರು
ವರದಿ: ಮಹೇಶ ಹಿಂಡ್ಲೆಮನೆ
Discussion about this post