ಕಲ್ಪ ಮೀಡಿಯಾ ಹೌಸ್ | ಸಾಗರ |
ಇಲ್ಲಿನ ಮಾರ್ಕೆಟ್ ರಸ್ತೆಯಲ್ಲಿರುವ ಪುರಾತನ ಶ್ರೀ ವೀರೇಶ್ವರ ದೇವಾಲಯದ ಪುನರ್ ನಿರ್ಮಾಣಕ್ಕೆ ಜ್ಯುವೆಲರ್ಸ್ ಮಾಲೀಕರೊಬ್ಬರು ಭೂಮಿ ದಾನ ನೀಡಿ ಮಾದರಿಯಾಗಿದ್ದಾರೆ.
ರಾಘವೇಂದ್ರ ಜ್ಯುವೆಲರ್ಸ್ ಮಾಲೀಕರಾದ ಅಶೋಕ್ ವಿ. ಶೇಟ್ ಅವರು 7 ಚದರ ಅಡಿ ಜಾಗವನ್ನು ಶ್ರೀ ವೀರೇಶ್ವರ ದೇವಾಲಯದ ಪುನರ್ ನಿರ್ಮಾಣಕ್ಕೆ ತಮ್ಮ ಜಾಗವನ್ನು ದಾನ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಸಕ ಎಚ್. ಹಾಲಪ್ಪ MLA Halappa ಅವರು ಅಶೋಕ್ ಶೇಟ್ ಅವರನ್ನು ಭೇಟಿಯಾಗಿ ಶ್ಲಾಘಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
Also read: ಒಂದು ತಿಂಗಳಲ್ಲಿ ಮಂತ್ರಾಲಯ ಮಠಕ್ಕೆ ಭಕ್ತರು ಸಲ್ಲಿಸಿದ ಕಾಣಿಕೆ ಮೊತ್ತ ಎಷ್ಟು ಗೊತ್ತಾ?
ಈ ವೇಳೆ ಟಿ.ಡಿ. ಮೇಘರಾಜ್, ರಾಜೇಂದ್ರ ಪೈ, ಸಂತೋಷ್ ರಾಯಲ್, ಶಿವಾನಂದ್, ವಿನಾಯಕ ರಾವ್, ಬಿ.ಟಿ. ರವೀಂದ್ರ, ಸಂತೋಷ್ ಶೇಟ್, ರವಿ ಗೌಡ್ರು, ನಾಗರಾಜ, ರಾಮು ಸೂರನಗದ್ದೆ, ನಾಗರಾಜ ಕೆಂಭಾವಿ, ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post