ಕಲ್ಪ ಮೀಡಿಯಾ ಹೌಸ್
ಸಾಗರ: ಗ್ರಾಮೀಣ ಭಾಗದಲ್ಲಿ ಕೊರೋನಾ ನಿಯಂತ್ರಿಸಲು ತಾಲೂಕಿನ ಆನಂದಪುರದಲ್ಲಿ ಮೇ ೨೬ರ ಬುಧವಾರದಿಂದ 1 ವಾರದವರೆಗೆ ಸಂಪೂರ್ಣ ಕಠಿಣ ಲಾಕ್ ಡೌನ್ ಘೋಷಣೆ ಜಾರಿ ಮಾಡಲಾಗಿದೆ.
ತಾಲೂಕು ಆಡಳಿತ ಹಾಗೂ ಗ್ರಾಮಾಡಳಿತ ಈ ಕಠಿಣ ಕ್ರಮಕ್ಕೆ ಮುಂದಾಗಿದ್ದು, ದಿನೇದಿನೆ ಗ್ರಾಮದಲ್ಲಿ ಕೊರೋನ ಹೆಚ್ಚುತ್ತಿರುವುದನ್ನು ತಡೆಯಲು ಹಾಗೂ ರಸ್ತೆಯಲ್ಲಿ ಜನಸಂದಣ ಕಡಿಮೆ ಮಾಡಲು ಕೊರೋನ ಟಾಸ್ಕ್ ಫೋರ್ಸ್ ಸಭೆಯಲ್ಲಿ ಆನಂದಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯನ್ನು ಬುಧವಾರದಿಂದ ಸತತ 7 ದಿನಗಳವರೆಗೆ ಕಾಲ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ.
ತಹಶೀಲ್ದಾರ್ ಕೆ.ಬಿ. ಚಂದ್ರಶೇಖರ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಕೊರೋನವನ್ನು ಸಂಪೂರ್ಣವಾಗಿ ನಿಯಂತ್ರಿಸುವ ಉದ್ದೇಶದಿಂದ ಗ್ರಾಮಾಡಳಿತವು ಈ ಕಠಿಣ ಕ್ರಮವನ್ನು ಕೈಗೊಂಡಿದೆ. ಸಾರ್ವಜನಿಕರು ಲಾಕ್ ಡೌನ್ ಸಂದರ್ಭದಲ್ಲಿ ಅನಗತ್ಯವಾಗಿ ರಸ್ತೆಗಿಳಿದರೆ ನಿಮ್ಮ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಈ 1 ವಾರದಲ್ಲಿ ಯಾರು ಕೂಡ ರಸ್ತೆಗೆ ಇಳಿಯಬಾರದು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.
ಒಟ್ಟಾರೆ ಗ್ರಾಮಾಡಳಿತ ಹಾಗೂ ತಾಲೂಕು ಆಡಳಿತ ಕೊರೋನಾ ನಿಯಂತ್ರಿಸಲು ಈಗ ಸಂಪೂರ್ಣವಾಗಿ ಸಿದ್ಧವಾಗಿದ್ದು, ಬಿಗಿಯಾದ ಕ್ರಮವನ್ನು ಕೈಗೊಳ್ಳಲಾಗಿದೆ. ಹಾಗೂ ಕೊರೊನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತರಿಗೆ ಆನಂದಪುರಂ ಗ್ರಾಮ ಪಂಚಾಯಿತಿ ವತಿಯಿಂದ ಆಕ್ಸಿಮೀಟರ್ ಸಹ ವಿತರಿಸಲಾಯಿತು.
ವರದಿ: ಪವನ್ ಕುಮಾರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post