ಕಲ್ಪ ಮೀಡಿಯಾ ಹೌಸ್ | ಸಾಗರ |
ತಾಳಗುಪ್ಪದ ಅರೆಹದ ಗ್ರಾಮಪಂಚಾಯ್ತಿ ಗ್ರಾಮ ಲೆಕ್ಕಾಧಿಕಾರಿ ವಿಮಲಾ ಎಂಬಾಕೆ ತಹಶೀಲ್ದಾರ್ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಡೆತ್ ನೋಟ್’ನಲ್ಲಿ ಸಾಗರ ತಹಶೀಲ್ದಾರ್ ಹೆಸರು ಬರೆದಿಟ್ಟಿರುವುದು ಪತ್ತೆಯಾಗಿದೆ.
ನಿನ್ನೆ ಸಾಗರದ ತಹಶೀಲ್ದಾರ್ ಕಚೇರಿಗೆ ಬಂದಿದ್ದ ಈಕೆ ಅಸ್ವಸ್ಥರಾಗಿ ಬಿದ್ದಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಆಗಮಿಸಿದ ಅವರ ಪತಿ ತಮ್ಮ ಪತ್ನಿಯ ಪ್ಯಾಂಟ್ ಜೇಬು ಚೆಕ್ ಮಾಡಿದಾಗ ಎರಡು ಪುಟದ ಡೆತ್ ನೋಟ್ ದೊರೆತಿದೆ. ಇದರಲ್ಲಿ ತಮ್ಮ ಸಾವಿಗೆ ಸಾಗರ ತಹಶೀಲ್ದಾರ್ ಕಾರಣ ಎಂದು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
Also read: ರಿಪ್ಪನ್’ಪೇಟೆ | ವಿದ್ಯುತ್ ಪ್ರವಹಿಸಿ ಯುವಕ ಸಾವು | ಕರೆಂಟ್ ಶಾಕ್ ಹೊಡೆದಿದ್ದು ಹೇಗೆ?
ಈಕೆಯ ಆರೋಪವೇನು?
ಡೆತ್ ನೋಟ್’ನಲ್ಲಿ ತಹಶೀಲ್ದಾರ್ ಹೆಸರು ಬರೆದಿರುವ `ವಿಎ’ ತಹಶೀಲ್ದಾರ್ ಅವರು ಸಿಬ್ಬಂದಿಗಳ ನಡುವೆ ತಾರತಮ್ಯ ಮಾಡುತ್ತಾರೆ. ಈ ಹಿಂದೆ ಅವರಿಗೆ ಹೆರಿಗೆ ಆದಾಗ ಹೆರಿಗೆ ವೈದ್ಯಕೀಯ ಭತ್ಯೆ 60,140 ರೂ.ಗಳಾಗಿವೆ ಎಂದು ದಾಖಲಾತಿ ಸಮೇತ ನೀಡಿದರೂ, ನನ್ನ ಪತಿಗೆ ಭತ್ಯೆ ಬಿಡುಗಡೆಗೆ ತಹಶೀಲ್ದಾರ್ ಲಂಚ ನೀಡಲು ಒತ್ತಾಯಿಸಿರುವುದಾಗಿ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದೆ.
ತಾಲೂಕಿನ ತ್ಯಾಗರ್ತಿ ಮೂಲದ ವಿಮಲಾ ಅವರು ಕಳೆದ ಮೂರ್ನಾಲ್ಕು ವರ್ಷದಿಂದ ಅರೆಹದ ವೃತ್ತದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜತೆಯಲ್ಲಿ ಮರತ್ತೂರು ಗ್ರಾಮ ಲೆಕ್ಕಾಧಿಕಾರಿಯಾಗಿಯೂ ಕೆಲಸ ಮಾಡುವಂತೆ ತಹಸಿಲ್ದಾರರು ಅವರಿಗೆ ಸೂಚಿಸಿದ್ದರು.
ಆದರೆ ಚುನಾವಣೆ ಸಂದರ್ಭ ಆರೋಗ್ಯದ ಸಮಸ್ಯೆಯಿಂದಾಗಿ ರಜೆ ಹಾಕಿದ್ದು, ಬಳಿಕ ಅವರನ್ನು 150 ದಿನಗಳ ಕಾಲ ಬರೂರು ವೃತ್ತಕ್ಕೆ ವರ್ಗಾಯಿಸಲಾಗಿತ್ತು. ಆರೋಗ್ಯ ಸುಧಾರಿಸಿದ ಬಳಿಕ ಮೊದಲಿನ ಸ್ಥಾನಕ್ಕೆ ಕರ್ತವ್ಯಕ್ಕೆ ಹಾಜರಾಗುವಂತೆ ತಹಸೀಲ್ದಾರರು ಸೂಚಿಸಿದ್ದರು ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post