ಕಲ್ಪ ಮೀಡಿಯಾ ಹೌಸ್ | ಸಾಗರ |
ಕರ್ಕಿಕೊಪ್ಪ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಮಾರ್ಚ್ ೯ರಂದು ನಡೆಯಲಿರುವ ಆರ್ಮಿ ಕಪ್ 2024 ನಿಮಿತ್ತ ಪ್ರಥಮ ವರ್ಷದ ತಾಲೂಕು ಮಟ್ಟದ ಹೊನಲು ಬೆಳಕಿನ ಪುರುಷರ ಹಗ್ಗ ಜಗ್ಗಾಟ ಪಂದ್ಯಾವಳಿ ಆಯೋಜಿಸಲಾಗಿದೆ.
ಕರ್ಕಿಕೊಪ್ಪ ಸ.ಹಿ ಪ್ರಾ.ಶಾಲೆ ಆವರಣದಲ್ಲಿ ಸಂಜೆ 6 ಗಂಟೆಗೆ ಕ್ರೀಡಾಕೂಟ ಜರುಗಲಿದ್ದು, ಇದೇ ಸಂದರ್ಭದಲ್ಲಿ ಹಾಲಿ ಹಾಗೂ ಮಾಜಿ ಯೋಧರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಯಲ್ಲಿ ಜಯಗಳಿಸುವವರಿಗೆ ಪ್ರಥಮ ಬಹುಮಾನ: 10,000, ದ್ವಿತೀಯ ಬಹುಮಾನ: 5000, ತೃತೀಯ ಬಹುಮಾನ : 2500 ಹಾಗೂ ಆಕರ್ಷಕ ಪಾರಿತೋಷಕ ಪ್ರದಾನ ಮಾಡಲಾಗುವುದು ಎಂದು ಸಮಿತಿ ತಿಳಿಸಿದೆ.
ವಿಷೇಶ ಸೂಚನೆ
- 888 ರೂ. ಪ್ರವೇಶ ಶುಲ್ಕ ನಿಗಧಿಪಡಿಸಲಾಗಿದೆ
- ಪ್ರತಿ ತಂಡದಲ್ಲಿ 8 ಜನರಿಗೆ ಮಾತ್ರ ಅವಕಾಶ
- ಪ್ರತಿ ತಂಡದ ಒಟ್ಟು ತೂಕ 650 ಕೆಜಿಗಿಂತ ಜಾಸ್ತಿ ಇರಬಾರದು
- ತಂಡದ ಆಟಗಾರರು ಸಾಗರ ತಾಲ್ಲೂಕಿನವರಾಗಿರಬೇಕು
- ಅಂಪೈರ್ ಹಾಗೂ ವ್ಯವಸ್ಥಾಪಕರ ತೀರ್ಮಾನವೇ ಅಂತಿಮವಾಗಿರುತ್ತದೆ
- ಗಲಾಟೆ ಮಾಡಿದ ತಂಡವನ್ನು ಅಡ್ವಾನ್ಸ್ ನೀಡದೆ ಹೊರಹಾಕಲಾಗುವುದು
- ಆಟಗಾರರು ಕಡ್ಡಾಯವಾಗಿ ಐಡಿ ಕಾರ್ಡ್ ತರತಕ್ಕದ್ದು
- ಆಟಗಾರರಿಗೆ ಉಪಹಾರದ ವ್ಯವಸ್ಥೆ ಇರುತ್ತದೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post