ಕಲ್ಪ ಮೀಡಿಯಾ ಹೌಸ್ | ಸಾಗರ |
ಕೇಂದ್ರ ನಾಯಕರು ನಂಬಿರುವ ಕೆಲವು ರಾಜ್ಯ ನಾಯಕರುಗಳು ನಂಬಿಕೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ #Yadiyurappa ಕುಟುಂಬದ ವಿರುದ್ಧ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #K S Eshwarappa ಹೆಸರು ಹೇಳದೇ ವಾಗ್ದಾಳಿ ನಡೆಸಿದ್ದಾರೆ.
ಸಾಗರದಲ್ಲಿ ಮಾತನಾಡಿದ ಅವರು, ಕೇಂದ್ರದ ನಾಯಕರು ರಾಜ್ಯದಲ್ಲಿ ಕೆಲವರನ್ನ ನಂಬಿದ್ದಾರೆ. ಅವರ ನಂಬಿಕೆಯನ್ನ ದುರುಪಯೋಗ ಮಾಡಿಕೊಂಡು ಒಬ್ಬ ಮಗನ ಸಂಸದ ಮತ್ತೊಬ್ಬ ಮಗನನ್ನು ಆರು ತಿಂಗಳು ಕಾದು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದೆಲ್ಲಾ ಕೇಂದ್ರದವರಿಗೆ ಯಾರು ಹೇಳಬೇಕು ಕಾರ್ಯಕರ್ತರ ನೋವನ್ನು ಯಾರು ಕೇಳಬೇಕು. ಈಗಿನ ಪರಿಸ್ಥಿತಿಯಲ್ಲಿ ಇಂಥವರ ಹಿಂದೆ ಹೋಗಿ ಅಧಿಕಾರ ಹೊಡಿಯುತ್ತಿದ್ದಾರೆ ಶ್ರಮ ಹಾಕಿದ ಕಾರ್ಯಕರ್ತರು ಹಿಂದೆ ಸರಿದಿದ್ದಾರೆ ಎಂದರು.
ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಹೆಣ್ಣನ್ನು ಭೋಗದ ವಸ್ತುವಾಗಿ ನೋಡುತ್ತಾರೆ ಹೆಣ್ಣು ಮಕ್ಕಳನ್ನು ಹೇರುವ ಯಂತ್ರದಂತೆ ಕಾಣುತ್ತಾರೆ. ಆದರೆ ಭಾರತದಲ್ಲಿ ಮಾತ್ರ ಹೆಣ್ಣನ್ನು ತಾಯಿ ಎಂದು ಕರೆಯೋದು. ಹೆಣ್ಣಿಗೆ ತಾಯಿ ಸ್ಥಾನ ಸಿಕ್ಕಿರುವುದು ಭಾರತದಲ್ಲಿ ಮಾತ್ರ. ಅಂತಹ ತಾಯಂದಿರು ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ನನಗೆ ಆಶೀರ್ವಾದ ಮಾಡಲು ಬಂದಿರುವುದು ನನ್ನ ಭಾಗ್ಯ. ಸಾಗರ ಶಿವಮೊಗ್ಗ ಜಿಲ್ಲೆಗೆ ಒಳ್ಳೆಯದಾಗಲು ಮೋದಿಯವರನ್ನು ಪ್ರಧಾನಿ ಮಾಡಿದ ಸಂತೃಪ್ತಿಗಾಗಿ ಈಶ್ವರಪ್ಪನ ಗೆಲ್ಲಿಸಲು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬಂದಿದ್ದೀರಿ ಎಂದರು.
ಚುನಾವಣೆಯನ್ನು ಅನೇಕರು ವೃತ್ತಿ ದಂಧೆಯಾಗಿ ಮಾಡಿಕೊಂಡಿದ್ದಾರೆ. ರಾಜಕಾರಣಕ್ಕಾಗಿ ಅನೇಕ ಪಕ್ಷಗಳ ಮುಖವಾಡ ಹಾಕಿಕೊಳ್ಳುತ್ತಾರೆ. ಆದರೆ ಬಿಜೆಪಿ ಪಕ್ಷವನ್ನು ಕಾರ್ಯಕರ್ತರು ರಕ್ತವನ್ನು ಬೆವರಿನ ಹಾಗೆ ಸುರಿಸಿ ಪಕ್ಷ ಕಟ್ಟಿದ್ದರ ಫಲವಾಗಿ ಇಂದು ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಾರೆ ಎಂದರು.
ನರೇಂದ್ರ ಮೋದಿಯವರನ್ನು #PM Modi ಎಲ್ಲಾ ರಾಷ್ಟ್ರಗಳ ನಾಯಕರು ಒಪ್ಪಿಕೊಂಡಿದ್ದಾರೆ. ಅಂತಹ ಮೋದಿಯವರು ಬಿಜೆಪಿಯವರು ಎನ್ನುವುದು ನಮಗೆಲ್ಲಾ ಹೆಮ್ಮೆ. ಇಂದು ಬಿಜೆಪಿಯಲ್ಲಿ ಮೋದಿಯವರ ಹೆಸರು ದುರುಪಯೋಗ ಮಾಡಿಕೊಂಡು ಕಾರ್ಯಕರ್ತರ ಬೆವರನ್ನು ಗಮನಿಸದೆ ಅಧಿಕಾರಕ್ಕಾಗಿ ಕೆಲವು ವ್ಯಕ್ತಿಗಳು ಕೆಲವು ಕುಟುಂಬಗಳು ಮಾಡುತ್ತಿರುವ ಷಡ್ಯಂತ್ರದಿಂದಾಗಿ ರಾಜ್ಯದಲ್ಲಿ ಪಕ್ಷ ಕಟ್ಟಿದ ಅನೇಕ ಹಿರಿಯರು ಯುವಕರು ನೋವು ಪಡುತ್ತಿದ್ದಾರೆ ಟೀಕಿಸಿದರು.
Also read: ಶಿವಮೊಗ್ಗ | ಈ ಗ್ರಾಮದಲ್ಲಿ ನಾಳೆ ಯುಗಾದಿ ಆಚರಿಸಲಿದ್ದಾರೆ ನಟ ಶಿವರಾಜಕುಮಾರ್ | ಇಲ್ಲಿದೆ ವಿವರ
ಸಿ.ಟಿ. ರವಿ, ಪ್ರತಾಪ್ ಸಿಂಹ, ಸದಾನಂದ ಗೌಡರಂತ ಒಕ್ಕಲಿಗ ನಾಯಕರಿಗೆ ಟಿಕೆಟ್ ಕೊಡದೆ ಮೂಲೆಗುಂಪು ಮಾಡಿದ್ದಾರೆ. ಹಿಂದುತ್ವ ಬಗ್ಗೆ ಮಾತನಾಡಿದ ಅನಂತ್ ಕುಮಾರ್ ಹೆಗ್ಗಡೆ, ಬಸವನಗೌಡ ಪಾಟೀಲ್ ಯತ್ನಾಳ್’ರನ್ನೂ ಸಹ ಮೂಲೆ ಗುಂಪು ಮಾಡಿದ್ದಾರೆ ಹಿಂದುತ್ವ ಬಗ್ಗೆ ಮಾತನಾಡುವುದೇ ತಪ್ಪಾ ಎಂದರು.
ಚುನಾವಣೆಗೆ ನಿಂತ ಮೇಲೆ ಎಲ್ಲಾ ಜಾತಿಯ ಸಮಾಜದವರಿಂದ ನನಗೆ ಬೆಂಬಲ ಸಿಕ್ಕಿದೆ ಸ್ತ್ರೀ ಶಕ್ತಿ ಸಂಘಗಳಿAದ ಬೆಂಬಲ ಸಿಕ್ಕಿದೆ. ಇವರ ಋಣವನ್ನು ನಾನು ಹೇಗೆ ತೀರಿಸಲಿ ಗೊತ್ತಿಲ್ಲ. ಚುನಾವಣೆಗೆ ಸ್ಪರ್ಧೆ ಮಾಡುವ ತೀರ್ಮಾನ ಮಾಡಿ ಬಂದದ್ದೇ ಮೊದಲು ಶ್ರೀಧರ ಸ್ವಾಮಿಗಳ ಆಶ್ರಮಕ್ಕೆ ನಂತರ ಸಿಗಂಧೂರು ಚೌಡೇಶ್ವರಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಮಾಡಿದೆ. ತಾಯಿಯ ತಲೆಮೇಲಿಂದ ಹೂವಿನ ಪ್ರಸಾಧ ಸಿಕ್ಕಿತು. ಒಂದು ಕಡೆ ದೇವರ ಆಶೀರ್ವಾದ, ಇನ್ನೊಂದು ಕಡೆ ಶ್ರೀಸಾಮಾನ್ಯನ ಆಶೀರ್ವಾದ ಇವೆರಡೂ ನನಗೆ ಸಿಕ್ಕಿರುವಾಗ ಯಾವುದೇ ಕಾರಣಕ್ಕೂ ಕೆಲವು ವ್ಯಕ್ತಿಗಳಿಂದ ಕೆಲವು ಕುಟುಂಬಗಳಿಂದ ಕರ್ನಾಟಕ ರಾಜ್ಯದ ಭಾರತೀಯ ಜನತಾ ಪಾರ್ಟಿಯನ್ನು ಅಪಹರಿಸಲು ಬಿಡುವುದಿಲ್ಲ ಎಂದರು.
ರಾಜ್ಯದಲ್ಲಿ ಒಂದು ಕೋಟಿ ಸಾಮಾನ್ಯ ಜನರ ಸದಸ್ಯತ್ವ ಇದೆ. ಈಗ ಸದಸ್ಯತ್ವ ಮಾಡಿದ ವ್ಯಕ್ತಿಗಳಿಗೆ ನಮ್ಮ ಮಾತು ಯಾರು ಕೇಳುತ್ತಿಲ್ಲ ಎಂಬ ನೋವಿದೆ. ಹೊಂದಾಣಿಕೆ ರಾಜಕಾರಣ ಬಿಜೆಪಿ ರಕ್ತದಲ್ಲಿ ಬಂದಿಲ್ಲ ಬಿಜೆಪಿ ಜನರ ಮನಸ್ಸನ್ನು ಗೆದ್ದು ಅಧಿಕಾರಕ್ಕೆ ಬಂದಿದೆ ನನ್ನ ಜೀವನದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಲ್ಲ ಹೊಂದಾಣಿಕೆ ರಾಜಕಾರಣ ಮಾಡಲು ಯಡಿಯೂರಪ್ಪಗೆ ಪಕ್ಷ ಯಾಕೆ ಬೇಕೆ ಎಂದು ಖಾರವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ನವರು ಎಲ್ಲಾ ಈಡಿಗರು ನಮ್ಮ ಜೊತೆ ಇದ್ದಾರೆ ಎನ್ನುತ್ತಾರೆ. ಯಡಿಯೂರಪ್ಪ ಮಗ ಎಲ್ಲಾ ಲಿಂಗಾಯತರು ನಮ್ಮ ಕಡೆ ಇದ್ದಾರೆ ಎನ್ನುತ್ತಾರೆ ಆದರೆ ಈಡಿಗರು ಲಿಂಗಾಯತರು ಎಲ್ಲಾ ಸೇರಿ ಪೂರ್ತಿ ಹಿಂದೂ ಸಮಾಜ ನನ್ನ ಕಡೆ ಇದೆ ಎಂದರು.
ನಾನು ರಾಷ್ಟ್ರೀಯವಾದಿ ಎಂದು ಜನ ನನಗೆ ಬೆಂಬಲ ಕೊಡುತ್ತಿದ್ದಾರೆ. ಆದರೆ ಜಾತಿ ಹೆಸರು ಹೇಳಿಕೊಂಡು ಮೋಸ ಮಾಡಿದವರಿಗೆ ಈಶ್ವರಪ್ಪನ ಗೆಲ್ಲಿಸುವ ಮೂಲಕ ಉತ್ತರ ಕೊಡುತ್ತೇವೆ ಎಂದು ಭದ್ರಾವತಿಯ ಒಕ್ಕಲಿಗ ಸಮಾಜದವರು ಹೇಳಿದ್ದಾರೆ.
ಬೈಂದೂರಿನಲ್ಲಿಯೂ ಸಹ ಹಿಂದೂ ಸಂಘಟನೆಯ ಅನೇಕ ಪ್ರಮುಖರು ನಾವೆಲ್ಲರೂ ನಿಮಗೆ ಬೆಂಬಲವಾಗಿದ್ದೇವೆ ಚುನಾವಣೆಯಲ್ಲಿ ನೀವು ನೂರಕ್ಕೆ ನೂರು ಗೆಲ್ಲುತ್ತೀರ ಎಂದು ಆಶೀರ್ವಾದ ಮಾಡಿದ್ದಾರೆ ಎಂದರು.
ಒಬ್ಬ ಪಕ್ಷೇತರನಾಗಿ ನಿಂತಿರುವುದು ಚರ್ಚೆಯಾಗುತ್ತಿಲ್ಲ. ಬದಲಾಗಿ ನಲವತ್ತು ವರ್ಷ ಬಿಜೆಪಿಯಲ್ಲಿದ್ದು ಪಕ್ಷ ಕಟ್ಟಿದ ಈಶ್ವರಪ್ಪ ಪಕ್ಷೇತರನಾಗಿ ನಿಂತಿರುವುದು ರಾಜ್ಯದಲ್ಲಷ್ಟೆ ಅಲ್ಲದೆ ದೇಶದಲ್ಲಿಯೂ ಸಹ ಚರ್ಚೆಯಾಗುತ್ತಿದೆ. ನೀವೆಲ್ಲರೂ ನನ್ನ ಹೋರಟಾಕ್ಕೆ ಶಕ್ತಿ ತುಂಬಿ ಚುನಾವಣೆಯಲ್ಲಿ ಗೆಲ್ಲಿಸಿ ನಾನು ದೆಹಲಿಗೆ ಹೋಗಿ ಮೋದಿ ಪ್ರಧಾನಿಯಾಗಲು ಕೈ ಎತ್ತುತ್ತೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post