ಕಲ್ಪ ಮೀಡಿಯಾ ಹೌಸ್
ಸಾಗರ: ಕೊರೋನ ಲಾಕ್‌ಡೌನ್ ಸಮಸ್ಯೆಯಿಂದ ತುಂಬ ಕಷ್ಟದಲ್ಲಿ ಬಳಲುತ್ತಿದ್ದ ಹಾಗೂ ಸರ್ಕಾರದ ಯಾವುದೇ ರೀತಿಯ ಸಹಾಯ ಸಿಗದ ಹಂದಿಗೋಡು ಖಾಯಿಲೆ ಸಂತ್ರಸ್ತರಿಗೆ ಗೋಪಾಲಕೃಷ್ಣ ಬೇಳೂರು ಹಾಗೂ ಅವರ ಪತ್ನಿ ರಾಧಾ ಗೋಪಾಲಕೃಷ್ಣ ಬೇಳೂರು ಅವರು ಹಂದಿಗೋಡಿನಲ್ಲಿ ದಿನಸಿ ಕಿಟ್‌ಗಳನ್ನು ವಿತರಿಸಿದರು.

ಈ ಸಮಯದಲ್ಲಿ ಸಂತ್ರಸ್ತರ ಧ್ವನಿಯಾದ ರಾಜೇಂದ್ರ ಬಂದಗದ್ದೆ, ಮಾಲ್ವೆ ಗ್ರಾಪಂ ಉಪಾಧ್ಯಕ್ಷ ಪ್ರಕಾಶ್ ಮಾಲ್ವೆ, ಸದಸ್ಯರಾದ ನಾಗರತ್ನಮ್ಮ, ಮಹಾಬಲೇಶ್,ಗ್ರಾಪಂ ಸದಸ್ಯ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ ಬೇಳೂರು, ಗಣಪತಿ ಮಂಡಗಳಲೆ, ಸೋಮಶೇಖರ್ ಲಾವಿಗೆರೆ, ತೇಜನಾಥ್ ಮಾಲ್ವೇ, ಧರ್ಮ ಮಾಲ್ವೆ, ನಾಗರಜ್ ಜಿಕೆ, ನಾಗರಾಜ್ ಸ್ವಾಮಿ, ಸಂತೋಷ್ ವಿ ಶಂಕರ್ ಸದ್ಗುರು, ಸಣ್ಣಕ್ಕಿ ಮಂಜು, ಲಕ್ಷ್ಮಣ್ ಸಾಗರ್, ಸೋಮಶೇಖರ್ ಅರಮನೆಕೇರಿ, ಹಂದಿಗೋಡು ಗ್ರಾಮ ಸುಧಾರಣ ಸಮಿತಿ ಅಧ್ಯಕ್ಷ ಚಲುವ, ಗಣೇಶಣ್ಣ, ಪ್ರಸನ್ನ ಇತರರು ಭಾಗಿಯಾಗಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















