ಕಲ್ಪ ಮೀಡಿಯಾ ಹೌಸ್ | ಸಾಗರ |
ಪಟ್ಟಣದಲ್ಲಿ ದಿನೇ ದಿನೇ ಸಂಚಾರ ದಟ್ಟಣೆ ಹೆಚ್ಚುತ್ತಿರುವ ಕಾರಣ ಸಾಗರ ಉಪವಿಭಾಗಕ್ಕೊಂದು ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರು ಮಾಡುವಂತೆ ಶಾಸಕರಿಗೆ ಡಿಎಸ್‌ಎಸ್ ಮನವಿ ಮಾಡಿದೆ.
ಪಟ್ಟಣ ಪುರಸಭೆಯಿಂದ ನಗರಸಭೆಯಾಗಿ ಪರಿವರ್ತನೆಯಾಗಿದೆ. ಹಾಗೂ ಜನಸಂಖ್ಯೆಯೂ ಸುಮಾರು 65 ರಿಂದ 70 ಸಾವಿರ ದಾಟಿದೆ. ತಾಲೂಕು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದರೂ ರಸ್ತೆಗಳು ಚಿಕ್ಕದಾಗಿವೆ. ಇಲ್ಲಿ ವ್ಯಾಪಾರ ವ್ಯವಹಾರದ ವಹಿವಾಟು ಹೆಚಿದ್ದು, ಪ್ರತಿ ಮನೆಯಲ್ಲಿಯೂ 2, 3 ವಾಹನಗಳು ಇರುವುದನ್ನು ಕಾಣುತ್ತವೆ.
ಸಾಗರ ಉಪವಿಭಾಗೀಯ ಕೇಂದ್ರವಾಗಿರುವುದರಿಂದ ಬೇರೆ ಊರುಗಳಿಂದ ಸಾರ್ವಜನಿಕರು ಕೆಲಸದ ನಿಮಿತ್ತ ಆಗಮಿಸುತ್ತಾರೆ. ಹಾಗೂ ತಾಲ್ಲೂಕಿನ ಜನರು ತಮ್ಮ ದೈನಂದಿನ ಕಚೇರಿ ಕೆಲಸಕ್ಕೆ ಪಟ್ಟಣಕ್ಕೆ ಆಗಮಿಸುವುದು ಅನಿವಾರ್ಯವಾಗಿದೆ.
ತಾಲ್ಲೂಕಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಾಲಾ ಕಾಲೇಜುಗಳಿಗೆ ಬಹು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇದಲ್ಲದೇ ಸರಕು ಸಾಗಾಟದ ವಾಹನಗಳು, ಸಾರ್ವಜನಿಕ ವಾಹನಗಳನ್ನು ರಸ್ತೆಯಲ್ಲಿ ಎಲ್ಲೆಂದರಲ್ಲಿ ಆಡಾ ದಿಡ್ಡಿಯಾಗಿ ನಿಲ್ಲಿಸಿ ಕಿರಿ ಕಿರಿ ಉಂಟು ಮಾಡುತ್ತಿದ್ದಾರೆ.
ನಾಲ್ಕು ವೃತ್ತಗಳು ಸೇರುವ ಜಾಗದಲ್ಲಿ ಟ್ರಾಫಿಕ್ ಕಂಟ್ರೋಲ್ ಇಲ್ಲದೆ ಇರುವುದರಿಂದ ಮತ್ತು ಅದನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಗಿದೆ. ಎಲ್ಲಾ ಭಾಗದ ವಾಹನಗಳು ಒಮ್ಮೆಲೆ ನುಗ್ಗಿ ಆಪಾಘಾತಕ್ಕೆ ಕಾರಣವಾಗಿದೆ. ರಸ್ತೆಯನ್ನು ದಾಟುವ ಪಾದಚಾರಿಗಳಿಗೂ ಯಮಯಾತನೆಯಾಗಿದೆ ಎಂದು ಮನವಿಯಲ್ಲಿ ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post