ಕಲ್ಪ ಮೀಡಿಯಾ ಹೌಸ್ | ಸಾಗರ |
ಎಸ್.ಎನ್ ನಗರ ರಾಮೇಶ್ವರ ವೃತ್ತದ ಬಳಿ ಇಬ್ಬರು ಅಪರಿಚಿತರು ಬಂಗಾರದ ಸರ ಪಾಲಿಶ್ ಮಾಡುವ ನೆಪದಲ್ಲಿ 58 ಗ್ರಾಂ ತೂಕದ ಮಾಂಗಲ್ಯ ಸರ ಅಪಹರಿಸಿರುವ ಘಟನೆ ನಡೆದಿದೆ.

ಒಂಟಿ ಮಹಿಳೆ ಇರುವ ಮನೆಗೆ ಬಂದಿದ್ದಾರೆ ಬಂದು ಪಾಲಿಶ್ ಮಾಡಿಕೊಡುವ ನೆಪದಲ್ಲಿ ಅವರಿಗೆ ಅರಿವಿಲ್ಲದೇ ಸರ ಎಗರಿಸಿಕೊಂಡು ಪರಾರಿಯಾಗಿದ್ದಾರೆ.

ಇವರು ಹಿಂದಿ ಭಾಷೆ ಮಾತನಾಡುತ್ತಿದ್ದರು ಎಂದು ಗೊತ್ತಾಗಿದೆ ತಿಳಿದುಬಂದಿದೆ. ಮಹಿಳೆಯರೇ ಅಪರಿಚಿತರ ಬಳಿ ವ್ಯವಹರಿಸುವಾಗ ಎಚ್ಚರ ವಹಿಸಿ. ಅನುಮಾನ ಬಂದಲ್ಲಿ ಠಾಣೆಗೆ ಮಾಹಿತಿ ನೀಡಿ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















