ಕಲ್ಪ ಮೀಡಿಯಾ ಹೌಸ್
ಸಾಗರ: ಕೋವಿಡ್ -19 ರ ಎರಡನೇ ಅಲೆಯಲ್ಲಿ ನೊಂದವರ ಕುಟುಂಬಸ್ಥರಿಗೆ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಸಾಂತ್ವನ ನೀಡುವ ಮೂಲಕ ನೈತಿಕ ಸ್ಥ್ರೈರ್ಯವನ್ನು ತುಂಬಿ ಆಹಾರ ಕಿಟ್ ಗಳನ್ನು ನೀಡಿದರು.
ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೋನಾ ಮಹಾಮಾರಿಯಿಂದ ಮೃತಪಟ್ಟ ಅವಲಂಬಿತರ ಕುಟುಂಬಗಳನ್ನು ಅವರ ಮನೆಗಳಲ್ಲಿ ಬೇಟಿಯಾಗಿ ಕಷ್ಟ ವಿಚಾರಿಸಿದರು. ಕೈಲಾಗುವ ಸಹಾಯವನ್ನು ನೀಡಿ ಕತ್ತಲಲ್ಲಿ ಬದುಕು ಸಾಗಿಸುತ್ತಿದ್ದ ಕುಟುಂಬಸ್ಥರಿಗೆ ಭರವಸೆಯ ಬೆಳಕನ್ನು ಚೆಲ್ಲಿದರು.
ನಮ್ಮ ಕುಟುಂಬಗಳಲ್ಲಿ ದುಡಿಯುವ ಕೈಗಳನ್ನು ಕಳೆದುಕೊಂಡು ಮುಂದೇನು? ಎಂಬುದನ್ನು ಕಾಣದೇ ದಿಗ್ಬ್ರಾಂತರಾಗಿದ್ದೇವೆ. ಮಕ್ಕಳ ಭವಿಷ್ಯದ ಬಗ್ಗೆ ಸರ್ಕಾರದಿಂದ ಯಾವುದಾದರು ಯೋಜನೆಗಳನ್ನು ರೂಪಿಸಿಕೊಡಿ’’ ಎಂದು ಅಂಗಲಾಚಿದರು. ಈ ಬಗ್ಗೆ ಸಂಯಮದಿಂದ ನೊಂದವರ ನುಡಿಗಳನ್ನು ಕೇಳಿದ ಗೋಪಾಲ ಕೃಷ್ಣ ಬೇಳೂರು ಕೈಲಾಗುವ ಸಹಕಾರವನ್ನು ಸರ್ಕಾರದ ಮಟ್ಟದಲ್ಲಿ ಮತ್ತು ವೈಯುಕ್ತಿಕವಾಗಿ ಸಲ್ಲಿಸುವ ಭರವಸೆ ನೀಡಿದರು.
ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರು, ಪಾದ್ರಿಗಳು, ಮುಲ್ಲಾಗಳು, ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು, ಟ್ಯಾಕ್ಸಿ ಚಾಲಕರು, ಗೂಡ್ಸ್ ವಾಹನ ಚಾಲಕರು, ದೀನ ದಲಿತರನ್ನು ಗುರುತಿಸಿ 150 ಕ್ಕೂ ಹೆಚ್ಚು ಆಹಾರ ಕಿಟ್ ವಿತರಿಸಿದರು.
ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯಿತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಸಂತೋಷ್ ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯರಾದ ಎಂ. ರಾಜೂ, ಪ್ರಮುಖರಾದ ಹೆಚ್.ಎಸ್. ಸಾಧಿಖ್, ಬಿ. ಉಮೇಶ್, ಸಚಿನ್, ಜಾನ್ ಲಿಂಗನಮಕ್ಕಿ, ಶ್ರೀಧರ, ಸತೀಶ್ ಮಲ್ಲಕ್ಕಿ, ವಿಜಯಕುಮಾರ ಶ್ರೀಪುರ, ಜಯಮ್ಮ ಜೋಗ ಮುಂತಾದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ತಾಲ್ಲೂಕು ಮುಖಂಡರಾದ ಗಣಪತಿ ಮಂಡಗಳಲೆ, ಅಶೋಕ್ ಬೇಳೂರು, ನಾಗರಾಜ್ ಸ್ವಾಮಿ, ರವಿ ಲಿಂಗನಮಕ್ಕಿ, ಸಂತೋಷ್ ಸದ್ಗುರು, ಅನಿತಾ ಕುಮಾರಿ, ಯಶ್ವಂತ್ ಫಣಿ, ರಾಕೆಶ್ ಗೌತಮಪುರ, ಸಾಮಾಜಿಕ ಜಾಲತಾಣದ ಚಿನ್ಮಯ್ ಮುಂತಾದವರು ಜೊತೆಯಲ್ಲಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post