No Result
View All Result
Bengaluru Gets a World-Class Electronics Co-Innovation Hub as Henkel Launches Advanced Application Center
English Articles

Bengaluru Gets a World-Class Electronics Co-Innovation Hub as Henkel Launches Advanced Application Center

by ಕಲ್ಪ ನ್ಯೂಸ್
March 17, 2026
0

Kalpa Media House  |  Bengaluru | Henkel today announced the launch of its Customer Application Center in Bengaluru, reinforcing its...

Read moreDetails
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
ಕಾನಹಳ್ಳಿಯಲ್ಲಿ ಹಾನಗಲ್ಲಿನ ಕದಂಬ ಹೆಮ್ಮಾಡಿದೇವನ ಅವಧಿಯ ವೀರಗಲ್ಲು ಪತ್ತೆ

T20 World Cup Stars Suryakumar Yadav & Tilak Varma Make Strategic Investment in TRUZON Solar

March 11, 2026
  • Advertise With Us
  • Grievances
  • About Us
  • Contact Us
Tuesday, March 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ಸಾಗರ

ಪರಿಸರ ಸಂಘಟನೆಗಳ ಧ್ವನಿಗೆ ಸರ್ಕಾರದ ನಿರ್ಲಕ್ಷ್ಯ | ನ್ಯಾಯಾಲಯದ ಮೊರೆ ಅನಿವಾರ್ಯ | ಅನಂತಹೆಗಡೆ ಅಶಿಸರ ಕಳವಳ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 24, 2024
in ಸಾಗರ
0
ಪರಿಸರ ಸಂಘಟನೆಗಳ ಧ್ವನಿಗೆ ಸರ್ಕಾರದ ನಿರ್ಲಕ್ಷ್ಯ | ನ್ಯಾಯಾಲಯದ ಮೊರೆ ಅನಿವಾರ್ಯ | ಅನಂತಹೆಗಡೆ ಅಶಿಸರ ಕಳವಳ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಸಾಗರ  |

ಕರ್ನಾಟಕ ಪವರ್ ಕಾರ್ಪೋರೇಶನ್ ಶರಾವತಿ ಕಣಿವೆಯಲ್ಲಿ ಭೂಗತ ಬೃಹತ್ ಜಲವಿದ್ಯುತ್ ಯೋಜನೆಯ ತಯಾರಿಯಲ್ಲಿದ್ದು ಪರಿಸರ ಸಂಘಟನೆಗಳು ಹೊನ್ನಾವರ ಮತ್ತು ಸಾಗರಗಳಲ್ಲಿ ಜನರ ಅಹವಾಲು ಸಭೆ ನಡೆಸಲು ಆಗ್ರಹ ಮಾಡುತ್ತಲೇ ಇವೆ. ಅಲ್ಲಿ ಬೆಂಗಳೂರಲ್ಲಿ ರಾಜ್ಯ ಅರಣ್ಯ ಇಲಾಖೆ ಶರಾವತಿ ಕಣಿವೆ ಧ್ವಂಸ ಮಾಡುವ ಜಲವಿದ್ಯುತ್ ಯೋಜನೆಗೆ ಒಪ್ಪಿಗೆ ನೀಡಿದೆ. ಇಂತಹ ಪಾರಿಸಾರಿಕ ವಿಕೃತಿ ಕುರಿತು ಪರಿಸರ ತಜ್ಞರು ಸೇರಿದಂತೆ ವನವಾಸಿಗಳು, ರೈತರು ಆತಂಕಕ್ಕೊಳಗಾಗುವಂತೆ ಮಾಡಿದೆ ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತಹೆಗಡೆ ಅಶಿಸರ ಕಳವಳ ವ್ಯಕ್ತಪಡಿಸಿದ್ದಾರೆ.

ಶಿರಸಿಯಲ್ಲಿ ನಡೆದ ರಾಜ್ಯ ಪರಿಸರ ಸಮ್ಮೇಳನ, ಮೂಡಬಿದ್ರಿಯ ಕೆರೆ ಸಮ್ಮೇಳನ, ಹೊಸನಗರ, ಸಾಗರದ ಮಲೆನಾಡು ಪರಿಸರ ಸಮಾವೇಶಗಳಲ್ಲಿ ಶರಾವತಿ ಕಣಿವೆ ಉಳಿಸಿ ನಿರ್ಣಯ ಕೈಗೊಳ್ಳಲಾಗಿದೆ. 4 ತಿಂಗಳು ಹಿಂದೆ ಶಿವಮೊಗ್ಗಾದಲ್ಲಿ ಅರಣ್ಯ ಸಚಿವರು, ರಾಜ್ಯ ಅರಣ್ಯ ಅಧಿಕಾರಿಗಳ ಸಭೆಯಲ್ಲಿ ಶರಾವತಿ ಕಣಿವೆಯಲ್ಲಿ ಬೃಹತ್ ಯೋಜನೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಲಾಗಿದೆ. ಆದಾಗ್ಯೂ ಅರಣ್ಯ ಪರವಾನಿಗೆ ಪ್ರಸ್ತಾವನೆಗೆ ಭಾರತ ಸರ್ಕಾರದ ಅರಣ್ಯ ಮಂತ್ರಾಲಯದ ಅನುಮತಿ ಪಡೆಯಲು ಗಡಿಬಿಡಿ ತಯಾರಿ ನಡೆದಿದೆ. ಈಗಾಗಲೇ ಬೃಹತ್ ಜಲವಿದ್ಯುತ್ ಯೋಜನೆಯ ಗುತ್ತಿಗೆಯನ್ನು ನೀಡಲಾಗಿದೆ.
ನಾಲ್ಕು ವರ್ಷ ಹಿಂದೆ ವಿಜ್ಞಾನಿಗಳು ಶರಾವತಿ ಕಣಿವೆ ಧಾರಣ ಸಾಮರ್ಥ್ಯ ಮುಗಿದಿದೆ ಎಂದು ಎತ್ತಿ ಹೇಳಿದ್ದಾರೆ, ಮಂಗನ ಕಾಯಿಲೆಯಿಂದ ಜೋಗದ ಸುತ್ತಲಿನ ಹಳ್ಳಿಗಳಲ್ಲಿ ಪ್ರತಿವರ್ಷ ಸಾಗರ-ಸಿದ್ದಾಪುರ ತಾಲೂಕುಗಳಲ್ಲಿ ಜನ ಸಾಯುತ್ತಿದ್ದಾರೆ. ಶರಾವತಿ ಕಣಿವೆ ಸೇರಿದಂತೆ ಘಟ್ಟ ಪ್ರದೇಶದಲ್ಲಿ ಭಾರೀ ಭೂ ಕುಸಿತ ಸಾಮಾನ್ಯವಾಗಿದೆ. ಶರಾವತಿ ನದಿ ಸಮುದ್ರ ಸೇರುವ ಸ್ಥಳದಿಂದ ಗೇರುಸೊಪ್ಪಾದವರೆಗೆ ನದಿಯಲ್ಲಿ ಉಪ್ಪುನೀರು ಪ್ರತಿವರ್ಷ ಮೇಲೇರುತ್ತಿದೆ. ಭೂಗತ ಯೋಜನೆ ಜಾರಿಯಿಂದ ಗೇರುಸೊಪ್ಪಾ ಡ್ಯಾಂನಿಂದ ಬೇಸಿಗೆಯಲ್ಲಿ ನದಿಗೆ ನೀರೇ ಬರುವುದಿಲ್ಲ. ಗೇರುಸೊಪ್ಪಾದಿಂದ ಹೊನ್ನಾವರದವರೆಗೆ ಶರಾವತಿ ನದಿ ಉಪ್ಪು ನೀರಿನ ನದಿ ಆಗಲಿದೆ ಎಂಬ ಸಂಗತಿ ರೈತರಿಗೆ, ಮೀನುಗಾರರಿಗೆ ತಿಳಿದೇ ಇಲ್ಲ. ಆದರೆ ಈ ಬಗ್ಗೆ ಗೊತ್ತಿದ್ದೂ, ಜನಪ್ರತಿನಿಧಿಗಳು ಇತ್ತೀಚಿನ ಅಧಿವೇಶನದಲ್ಲಿ ಧ್ವನಿ ಎತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ.

Also read: Herbalife India Won Prestigious IIT Madras CSR Award 2024

ಭಾರತೀಯ ವಿಜ್ಞಾನ ಸಂಸ್ಥೆ ೨೧ನೇ ಶತಮಾನದ ಆರಂಭದಲ್ಲೇ ಶರಾವತಿ ನದಿ ನೀರಿನ ಕಣಿವೆ ಪರಿಸ್ಥಿತಿ ಬಗ್ಗೆ ಸಮಗ್ರ ವರದಿ ನೀಡಿದೆ. ಈ ವರದಿಯನ್ನು ಕರ್ನಾಟಕ ಪವರ್ ಕಾರ್ಪೋರೇಶನ್ ಕಪಾಟಿನಲ್ಲಿ ಬೀಗ ಹಾಕಿ ಭದ್ರವಾಗಿ ಇಟ್ಟಿದೆ. ಪರಿಸರ ಸಂಘ ಸಂಸ್ಥೆಗಳು, ರೈತರ ವಿರೋಧ, ಪ್ರತಿಭಟನೆ ಬಗ್ಗೆ ಕೆ.ಪಿ.ಸಿ. ಸರ್ಕಾರ ನಿರ್ಲಕ್ಷ್ಯ ತೋರಿದೆ. ರಾಜ್ಯ ಅರಣ್ಯ ಪರಿಸರ ಸಚಿವರು ಯೋಜನೆಗೆ ಬೆಂಬಲ ನೀಡಿದ್ದಾರೆಯೇ ಎಂಬ ಪ್ರಶ್ನೆಯನ್ನು ಮುಂದಿಡಲಾಗಿದೆ. ಉ.ಕ. ಜಿಲ್ಲಾ ಉಸ್ತುವಾರಿ ಸಚಿವರೇ, ತಮ್ಮ ಕ್ಷೇತ್ರದ ಗಂಭೀರ ಜ್ವಲಂತ ಸಮಸ್ಯೆ ಇದು.ಹಾಗಾಗಿ, ಹೊನ್ನಾವರ- ಕುಮಟಾ ಶಾಸಕರು ಕೆನರಾ ಲೋಕ ಸಭಾ ಸದಸ್ಯರು ಶರಾವತಿ ಕಣಿವೆ ರಕ್ಷಣೆಗೆ, ನದಿ ತೀರದ ರೈತರು, ಮೀನುಗಾರರ ಉಳಿವಿಗೆ ಪಕ್ಷಾತೀತವಾಗಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದಾರೆ.

ಮಲೆನಾಡಿನ ಕರಾವಳಿಯ ರೈತರು, ವನವಾಸಿಗಳು, ಮೀನುಗಾರರ ಹಕ್ಕೊತ್ತಾಯವಿದ್ದು ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾದ ಅರಣ್ಯ ಸಚಿವರು ಗೇರುಸೊಪ್ಪಾಕ್ಕೆ ಭೇಟಿ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಅರಣ್ಯನಾಶ, ಗಣಿಗಾರಿಕೆ, ಬೃಹತ್ ಅಣೆಕಟ್ಟು, ಬೃಹತ್ ಕಾಮಗಾರಿಗಳು, ಹೈವೇಗಳು, ತಂತಿ ಮಾರ್ಗಗಳು, ಜನಸಂಖ್ಯಾ ಒತ್ತಡ, ಒತ್ತುವರಿಯಿಂದ ಈಗಾಗಲೇ ಶರಾವತಿ ಕಣಿವೆ ಛಿದ್ರ ಛಿದ್ರವಾಗಿದೆ, ಸಮಗ್ರ ಸಂರಕ್ಷಣಾ ತಂತ್ರವಾಗಿ ಅರಣ್ಯ ಇಲಾಖೆ ಶರಾವತಿ ಅಭಯಾರಣ್ಯ ವಿಸ್ತರಣೆ ಮಾಡಿದೆ. ಈಗ ಭೂಗತ ಜಲವಿದ್ಯುತ್ ಯೋಜನೆ ಕಣಿವೆಯ ಉಳಿವಿಗೆ ಆತಂಕ ತಂದಿದೆ ಎಂದು ವಿಜ್ಞಾನಿಗಳು ಪರಿಸರ ಕಾರ್ಯಕರ್ತರು ಅಭಿಪ್ರಾಯ ನೀಡಿದ್ದಾರೆ. ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.

2025 ಜನವರಿ 2ನೇ ವಾರದಲ್ಲಿ ಗೇರುಸೊಪ್ಪಾ ಮತ್ತು ಹೊನ್ನಾವರಗಳಲ್ಲಿ ಜಾಗೃತಿ ಸಭೆ ಜಾಥಾ ನಡೆಯಲಿದೆ ಎಂದು ವೃಕ್ಷ ಆಂದೋಲನ ತಿಳಿಸಿದೆ.

ಅನಂತ ಹೆಗಡೆ ಅಶೀಸರ, ಪ್ರೊ ಬಿ.ಎಂ. ಕುಮಾರ ಸ್ವಾಮಿ, ಡಾ.ಟಿ.ವಿ.ರಾಮಚಂದ್ರ, ಡಾ.ವೈ.ಬಿ.ರಾಮಕೃಷ್ಣ, ಡಾ. ಪ್ರಕಾಶ್ ಮೇಸ್ತ, ಡಾ.ಕೇಶವ ಹೆಚ್. ಕೊರ್ಸೆ, ಡಾ. ವಾಮನ್ ಆಚಾರ್ಯ, ನಾಗೇಶ್ ಹೆಗಡೆ, ಡಾ.ಬಾಲಚಂದ್ರ ಸಾಯಿಮನೆ, ಡಾ. ಶ್ರೀಪತಿ,
ಕೆ. ವೆಂಕಟೇಶ್, ಶ್ರೀಪಾದ ಬಿಚ್ಚುಗತ್ತಿ ಮುಂತಾದ ಪರಿಸರ ತಜ್ಞರು, ಸಂಸ್ಥೆಗಳ ಗಣ್ಯರು ಸರ್ಕಾರದ ಮುಂದೆ ಪುನಃ ಹಕ್ಕೊತ್ತಾಯ ಮಂಡಿಸಿದ್ದಾರೆ.

ವರದಿ: ಮಧುರಾಮ್, ಸೊರಬ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4
Tags: Kannada_NewsKannada_News_LiveKannada_News_Online ShivamoggaKannada_WebsiteKannadaNewsWebsiteLatestNewsKannadaLocalNewsMalnadNewsNews_in_KannadaNews_KannadaSagaraShimogaShivamoggaNewsಮಲೆನಾಡು_ಸುದ್ಧಿಶಿವಮೊಗ್ಗ_ನ್ಯೂಸ್ಸಾಗರ
Share196Tweet123Send
Previous Post

Herbalife India Won Prestigious IIT Madras CSR Award 2024

Next Post

MIT Manipal organized a Guest Talk on AI and the Future of the Humanity

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
MIT Manipal organized a Guest Talk on AI and the Future of the Humanity

MIT Manipal organized a Guest Talk on AI and the Future of the Humanity

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಕೌಟುಂಬಿಕ ಬಾಂಧವ್ಯ ಬೆಳೆಸುವಲ್ಲಿ ಯುವ ಜನಾಂಗ ಜಾಗೃತರಾಗಿ: ದಿನೇಶ್ ಕರೆ

ಕೌಟುಂಬಿಕ ಬಾಂಧವ್ಯ ಬೆಳೆಸುವಲ್ಲಿ ಯುವ ಜನಾಂಗ ಜಾಗೃತರಾಗಿ: ದಿನೇಶ್ ಕರೆ

March 17, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

ಅಡುಗೆ ಅನಿಲ ಸಿಲಿಂಡರ್‌ಗಾಗಿ ಸಹಾಯವಾಣಿ | ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ

March 17, 2026
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
ಹೆನ್ಕೆಲ್‌ ನ ಅತ್ಯಾಧುನಿಕ ಅಪ್ಲಿಕೇಶನ್ ಸೆಂಟರ್ ಆರಂಭ | ಬೆಂಗಳೂರಿನಲ್ಲಿ ವಿಶ್ವದರ್ಜೆಯ ಎಲೆಕ್ಟ್ರಾನಿಕ್ಸ್ ಕೋ- ಇನ್ನೋವೇಶನ್ ಹಬ್ ಸ್ಥಾಪನೆ

ಹೆನ್ಕೆಲ್‌ ನ ಅತ್ಯಾಧುನಿಕ ಅಪ್ಲಿಕೇಶನ್ ಸೆಂಟರ್ ಆರಂಭ | ಬೆಂಗಳೂರಿನಲ್ಲಿ ವಿಶ್ವದರ್ಜೆಯ ಎಲೆಕ್ಟ್ರಾನಿಕ್ಸ್ ಕೋ- ಇನ್ನೋವೇಶನ್ ಹಬ್ ಸ್ಥಾಪನೆ

March 17, 2026
ಶಿವಮೊಗ್ಗ | ಪ್ರಕೃತಿ ವಿಷಯದ ಚಿತ್ರಕಲೆ ಸ್ಪರ್ಧೆ | ತೀರ್ಥಹಳ್ಳಿಯ ಮೂವರಿಗೆ ಮೊದಲ 3 ಬಹುಮಾನ

ಶಿವಮೊಗ್ಗ | ಪ್ರಕೃತಿ ವಿಷಯದ ಚಿತ್ರಕಲೆ ಸ್ಪರ್ಧೆ | ತೀರ್ಥಹಳ್ಳಿಯ ಮೂವರಿಗೆ ಮೊದಲ 3 ಬಹುಮಾನ

March 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL